ಚಿನ್ನ ಖರೀದಿಯ ಪ್ಲಾನ್ ಇದ್ದರೆ Sovereign Gold Bond ಖರೀದಿಯ ಲಾಭ ತಿಳಿದುಕೊಳ್ಳಿ

ಚಿನ್ನದ ಮೇಲೆ ಹೂಡಿಕೆ ಮಾಡಲು ಹೊಸ ಹೊಸ ಆಯ್ಕೆಗಳು ಕೂಡಾ ಇವೆ. ಇವುಗಳಲ್ಲಿ Sovereign Gold Bond ಕೂಡಾ ಒಂದು. Sovereign Gold Bondನ 2021-22ರ ಎರಡನೇ ಕಂತನ್ನು ಮೇ 24 ರಂದು ಸರ್ಕಾರ ಬಿಡುಗಡೆ ಮಾಡಿದೆ.

ನವದೆಹಲಿ : ಚಿನ್ನವು ಹಿಂದಿನ ಕಾಲದಿಂದಲೂ ಭಾರತೀಯರ ನೆಚ್ಚಿನ ಲೋಹವಾಗಿದೆ. ಸಾಂಪ್ರದಾಯಿಕವಾಗಿ, ಚಿನ್ನದ ಆಭರಣಗಳು, ನಾಣ್ಯಗಳು ಅಥವಾ ಬಿಸ್ಕತ್ತುಗಳನ್ನು ಖರೀದಿಸುವ ಪ್ರವೃತ್ತಿ ಮೊದಲಿನಿಂದಲೂ ರೂಢಿಯಲ್ಲಿತ್ತು. ಆದರೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಹೊಸ ಹೊಸ ಆಯ್ಕೆಗಳು ಕೂಡಾ ಇವೆ. ಇವುಗಳಲ್ಲಿ Sovereign Gold Bond ಕೂಡಾ ಒಂದು. Sovereign Gold Bondನ 2021-22ರ ಎರಡನೇ ಕಂತನ್ನು ಮೇ 24 ರಂದು ಸರ್ಕಾರ ಬಿಡುಗಡೆ ಮಾಡಿದೆ. ಮೇ 28 ರವರೆಗೆ ಈ ಬಾಂಡನ್ನು ಖರೀದಿ ಮಾಡಬಹುದು. ಸೆಪ್ಟೆಂಬರ್ 2021 ರೊಳಗೆ 6 ಕಂತುಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

Sovereign Gold Bondಗಳಲ್ಲಿ (SGB) ಮಾಡುವ ಹೂಡಿಕೆ ಸುರಕ್ಷಿತ ಮತ್ತು ಉತ್ತಮ ಆದಾಯದ ಒಂದು ಆಯ್ಕೆಯಾಗಿದೆ. ಇದರ ಮೇಲಿನ ಹೂಡಿಕೆಗಾಗಿ,  ವಾರ್ಷಿಕ ಶೇಕಡಾ 2.5 ರಷ್ಟು ಬಡ್ಡಿ ಸಿಗಲಿದೆ. ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿದೆ. ಆದರೆ, ಲಾಕ್-ಇನ್ ಅವಧಿ ಐದು ವರ್ಷಗಳು. ಈ ಬಾಂಡನ್ನು ಮೆಚ್ಯುರಿಟಿವರೆಗೆ ಇಟ್ಟುಕೊಂಡರೆ, ಹೂಡಿಕೆಯ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.   

2 /6

ಫಿಸಿಕಲ್ ಚಿನ್ನದ ರೀತಿ ಇದರ ಸೇಫ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಎಸ್ ಜಿಬಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವಾಗಿದೆ. ಫಿಸಿಕಲ್ ಗೋಲ್ಡ್ ನಲ್ಲಿ ಯಾವತ್ತೂ, ಶುದ್ಧತೆ, ಸೇಫ್ ಲಾಕರ್ ನ ಕೊರತೆಯಂಥಹ ಸಮಸ್ಯೆಗಳು ಇರುವುದಿಲ್ಲ. 

3 /6

ರಿಸರ್ವ್ ಬ್ಯಾಂಕಿನಿಂದ ನೊಟಿಫಿಕೇಶನ್ ತಾರೀಕು ಜಾರಿಯಾದ 15 ದಿನಗಳೊಳಗೆಸ್ಟಾಕ್ ಎಕ್ಸ್ಚೇಂಜರ್ ನಿಂದ ಬಾಂಡ್ ವಿತರಣೆ ಆರಂಭವಾಗುತ್ತದೆ. 

4 /6

ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ ಖರೀದಿಯಂತೆ ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಮೇಲೆ ಜಿಎಸ್ ಟಿ ವಿಧಿಸಲಾಗುವುದಿಲ್ಲ. ಫಿಸಿಕಲ್ ಗೋಲ್ಡ್ ಖರೀದಿ ವೇಳೆ, ಖರೀದಿ ಮೇಲೆ 3 ಶೇ ದಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ. ಸಾವರಿನ್ ಗೋಲ್ಡ್ ಮೇಲೆ ಯಾವುದೇ ಮೇಕಿಂಗ್ ಚಾರ್ಜ್ ನೀಡಬೇಕಾಗಿಲ್ಲ. 

5 /6

ಈ ಬಾಂಡಿನ ಆಧಾರದ ಮೇಲೆ ಸಾಲವನ್ನೂ ಪಡೆಯಬಹುದಾಗಿದೆ. ಇದು ಲೋನ್ ಟು ವ್ಯಾಲ್ಯು ಅನುಪಾತದಲ್ಲಿ ಸಾಮಾನ್ಯ ಲೋನ್ ನಂತೆಯೇ ಇರುತ್ತದೆ. ಸಮಯ ಸಮಯಕ್ಕೆ ಆರ್ ಬಿಐ ನಿಯಮವನ್ನು ಬದಲಿಸುತ್ತಿರುತ್ತದೆ. 

6 /6

2015ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮನ್ನು ಸರ್ಕಾರ,  ಆರಂಭಿಸಿತು. ಇದರ ಅನ್ವಯ ಆರ್ ಬಿಐ ಕಂತುಗಳಲ್ಲಿ ಬಾಂಡ್ ಜಾರಿ ಮಾಡುತ್ತದೆ.