ಪುರುಷ ನಾಗಾಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ.ಸ್ತ್ರೀ ನಾಗಾ ಸಾಧುಗಳ ಜೀವನವು ತುಂಬಾ ನಿಗೂಢ ಮತ್ತು ಕಷ್ಟಕರ
ಭಾರತವು ಋಷಿ ಮುನಿಗಳು ಮತ್ತು ಸಂತರ ದೇಶ. ಈ ಸಾಧು ಸಂತರ ಒಂದು ವರ್ಗ ಯಾವುದೇ ರೀತಿಯ ಉಡುಪುಗಳನ್ನು ಧರಿಸದೆ ನಗ್ನವಾಗಿ ಬದುಕುತ್ತಾರೆ. ಅವರೇ ನಾಗಾ ಸಾಧುಗಳು. ಪುರುಷ ನಾಗಾ ಸಾಧುಗಳಿರುವಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ. ಸ್ತ್ರೀ ನಾಗ ಸಾಧು ಆಗುವ ಪ್ರಕ್ರಿಯೆ ಮತ್ತು ಅವರ ಜೀವನದ ಬಹಳ ಕಠಿಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತೀಯ ಸನಾತನ ಧರ್ಮದ ಪ್ರಸ್ತುತ ರೂಪದ ಅಡಿಪಾಯವನ್ನು ಆದಿಗುರು ಶಂಕರಾಚಾರ್ಯರು ಹಾಕಿದರು.ಶಂಕರಾಚಾರ್ಯರು ಸನಾತನ ಧರ್ಮವನ್ನು ಸ್ಥಾಪಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದರು.ದೇಶದ 4 ಮೂಲೆಗಳಲ್ಲಿ 4 ಪೀಠಗಳನ್ನು ನಿರ್ಮಿಸಿರುವುದು ಇವುಗಳಲ್ಲಿ ಒಂದು.
ಮಠಗಳು ಮತ್ತು ದೇವಾಲಯಗಳ ಆಸ್ತಿಯನ್ನು ಲೂಟಿ ಮಾಡುವ ಮತ್ತು ಭಕ್ತರಿಗೆ ಕಿರುಕುಳ ನೀಡುವವರ ವಿರುದ್ಧ ಹೋರಾಡಲು ಸಶಸ್ತ್ರ ಶಾಖೆಗಳ ಜೊತೆಗೆ ಅಖಾಡ ಗಳನ್ನೂ ಸ್ಥಾಪಿಸಲಾಯಿತು.ಈ ಕೆಲವು ಅಖಾಡಗಳಲ್ಲಿ ನಾಗಾ ಸಾಧುಗಳೂ ಇದ್ದಾರೆ
ಪುರುಷ ನಾಗಾಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ.ಸ್ತ್ರೀ ನಾಗಾ ಸಾಧುಗಳ ಜೀವನವು ತುಂಬಾ ನಿಗೂಢ ಮತ್ತು ಕಷ್ಟಕರ.ನಾಗಾ ಸಾಧು ಆಗಬೇಕಾದರೆ ಅನೇಕ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಬ್ರಹ್ಮಚರ್ಯವನ್ನು ಅನುಸರಿಸಿ ಕಷ್ಟದ ಜೀವನ ನಡೆಸಬೇಕು.
ಲೌಕಿಕ ಜೀವನದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಮುರಿಯಲು,ಸ್ತ್ರೀ ನಾಗಾ ಸಾಧುಗಳು ಜೀವಂತವಾಗಿರುವಾಗಲೇ ಪಿಂಡ ದಾನವನ್ನು ಮಾಡಬೇಕಾಗುತ್ತದೆ. ಕೂದಲು ಬೋಳಿಸಬೇಕಾಗುತ್ತದೆ.ಆಗ ಮಾತ್ರ ಗುರುಗಳು ನಾಗಾ ಸಾಧುವಾಗಲು ದೀಕ್ಷೆ ನೀಡುತ್ತಾರೆ.
ಸ್ತ್ರೀ ನಾಗಾ ಸಾಧುಗಳು ಸಾಮಾನ್ಯ ಪ್ರಪಂಚದಿಂದ ದೂರವಾಗಿ ಕಾಡು,ಗುಹೆ, ಪರ್ವತಗಳಲ್ಲಿ ವಾಸಿಸುತ್ತಾರೆ,ದೇವರನ್ನು ಪೂಜಿಸುತ್ತಾರೆ.ಕುಂಭದಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಜನರ ಮುಂದೆ ಬರುತ್ತಾರೆ.
ಸ್ತ್ರೀ ನಾಗಾ ಸಾಧುಗಳು ಪುರುಷ ನಾಗಾ ಸಾಧುಗಳಂತೆ ಬೆತ್ತಲೆಯಾಗಿ ಇರುವುದಿಲ್ಲ. ಹೊಲಿಗೆ ಹಾಕದ ಕೇಸರಿ ಬಣ್ಣದ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಈ ಬಟ್ಟೆಯನ್ನು ಸುಮ್ಮನೆ ದೇಹಕ್ಕೆ ಸುತ್ತಿಕೊಳ್ಳುತ್ತಾರೆ.
ಸ್ತ್ರೀ ನಾಗಾ ಸಾಧುಗಳಿಗೆ ದೀಕ್ಷೆಯನ್ನು ನೀಡುವ ಮೊದಲು,ಅವರು ಭವಿಷ್ಯದಲ್ಲಿ ಈ ಕಷ್ಟಕರವಾದ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರತಿಯೊಂದು ಅಂಶದಲ್ಲೂ ನಿರ್ಣಯಿಸಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.