Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!

Celebrities Who Died Young: ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 

Celebrities Who Died Young: 2000ರಲ್ಲಿ ಜನಪ್ರಿಯ ಹಿಂದಿ ಭಾಷೆಯ ‘ಕ್ಯೂಂಕಿ ಸಾಸ್ ಭೀ ಕಭಿ ಬಹು ಥಿ’, ‘ಕಹೀ ತೊ ಹೋಗಾ’ ಮತ್ತು ‘ಕಸೌಟಿ ಜಿಂದಗಿ ಕಿ’ ಸೀರಿಯಲ್‌ಗಳಲ್ಲಿ ನಟಿಸಿ ತನ್ನದೇಯಾದ ಛಾಪು ಮೂಡಿಸಿದ ಖ್ಯಾತ ನಟ ವಿಕಾಸ್ ಸೇಥಿ ಸೆಪ್ಟೆಂಬರ್ 8ರ ಭಾನುವಾರ ನಿಧನರಾಗಿದ್ದಾರೆ. ತಮ್ಮ 48ನೇ ವಯಸ್ಸಿನಲ್ಲಿ ವಿಕಾಸ್‌ ಇಹಲೋಹ ತ್ಯಜಿಸಿದರು. ಪತ್ನಿ ಮತ್ತು ಇಬ್ಬರು ಅವಳಿ ಮಕ್ಕಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಹೃದಯ ಸ್ತಂಭನದಿಂದ ನಿಧನರಾದ ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಕೂಪರ್ ಆಸ್ಪತ್ರೆಗೆ ಕಳುಹಿಸಲಾಯಿತು. ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ನಟ ವಿಕಾಸ್ ಸೇಥಿ ಹಠಾತ್‌ 'ಕಸೌತಿ ಜಿಂದಗಿ ಕಿ' ಮತ್ತು 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ನಂತಹ ಶೋಗಳಿಂದ ಜನಪ್ರಿಯತೆಯನ್ನು ಗಳಿಸಿದ್ರು. ಇವರ ನಿಧನದ ಸುದ್ದಿ ಟಿವಿ ಉದ್ಯಮಕ್ಕೆ ದೊಡ್ಡ ಶಾಕ್‌ ಉಂಟು ಮಾಡಿದೆ. ಈ ಸ್ಟಾರ್‌ ನಟ ಅನಾರೋಗ್ಯದ ಜೊತೆಗೆ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದರು ಎನ್ನಲಾಗ್ತಿದೆ.

2 /5

ಪ್ರಸಿದ್ಧ ಹಾಸ್ಯನಟ ರಾಜು ಶ್ರೀವಾಸ್ತವ್ ‌ಅವರಿಗೆ ಸೆಪ್ಟೆಂಬರ್ 2022ರಲ್ಲಿ ಹಠಾತ್ ಹೃದಯಾಘಾತವಾಗಿತ್ತು. ಸುದೀರ್ಘ ಚಿಕಿತ್ಸೆಯ ನಂತರ ಈ ನಟ ನಿಧನ ಹೊಂದಿದರು. ಕಾಮಿಡಿ ಕಿಂಗ್ ಆಗಿದ್ದ ಇವರು 1963ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದರು. 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್'ನಂತಹ ಶೋಗಳಲ್ಲಿ ತಮ್ಮ ಹಾಸ್ಯದ ಮೂಲಕ ಜನಪ್ರಿಯರಾಗಿದ್ದ ಈ ನಟ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 2014ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

3 /5

ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕ ಕೆಕೆ 1968ರ ಆಗಸ್ಟ್ 23ರಂದು ಜನಿಸಿದರು. ಈ ಪ್ರತಿಭಾವಂತ ಗಾಯಕ 2022ರ ಮೇ 31ರಂದು 53ನೇ ವಯಸ್ಸಿನಲ್ಲಿ ನಿಧನರಾದರು. ಕೋಲ್ಕತ್ತಾದಲ್ಲಿ ನಡೆದ ಸಂಗೀತ ಸಮಾರಂಭದ ನಂತರ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ 'ತಡಪ್ ತಡಪ್ ಕೆ' ಮತ್ತು 'ವೋ ಲಮ್ಹೆ..' ಚಿತ್ರದ 'ಕ್ಯಾ ಮುಝೆ ಪ್ಯಾರ್ ಹೈ' ಮುಂತಾದ ಹಿಟ್ ಹಾಡುಗಳ ಮೂಲಕ ಅವರು ಬಾಲಿವುಡ್‌ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ರು. ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದರು.

4 /5

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್‌ ಅವರು 2021ರ ಅಕ್ಟೋಬರ್ 29ರಂದು ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು. ಹಠಾತ್ ಹೃದಯಾಘಾತದಿಂದ ಪುನೀತ್‌ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕಿಂಗ್ ಆಗಿತ್ತು. 1975ರ ಮಾರ್ಚ್ 17ರಂದು ಜನಿಸಿದ್ದ ಅಪ್ಪು ನಟರಷ್ಟೇ ಅಲ್ಲದೆ ಗಾಯಕರೂ ಆಗಿದ್ದರು. ತಮ್ಮ ಸಮಾಜಮುಖಿ ಕಾರ್ಯಗಳಿಂದ ಸದಾ ಜನರ ಮನದಲ್ಲಿ ಉಳಿದಿದ್ದಾರೆ. ಬಾಲ ಕಲಾವಿದರಾಗಿ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದ ಅವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮನೆಯಲ್ಲಿ ವರ್ಕೌಟ್ ಮಾಡುವಾಗ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಲಿಲ್ಲ.

5 /5

ಪ್ರಸಿದ್ಧ ನಟ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ 40ನೇ ವಯಸ್ಸಿನಲ್ಲಿ 2021ರ ಸೆಪ್ಟೆಂಬರ್ 2ರಂದು ಹಠಾತ್ ಹೃದಯಾಘಾತದಿಂದ ನಿಧನರಾದರು. ಸಿದ್ಧಾರ್ಥ್ ಶುಕ್ಲಾ 'ಬಾಲಿಕಾ ವಧು'ದಂತಹ ಟಿವಿ ಶೋ ಮೂಲಕ ಜನಪ್ರಿಯರಾಗಿದ್ದರು. ಈ ನಟ 'ಬಿಗ್ ಬಾಸ್ 13' ಮತ್ತು 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ 7' ರಿಯಾಲಿಟಿ ಶೋಗಳ ವಿಜೇತರಾಗಿದ್ದರು. ಆದರೆ ಸಣ್ಣ ವಯಸ್ಸಿನಲ್ಲೇ ನಿಧನರಾಗುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್‌ ಉಂಟು ಮಾಡಿದ್ದರು.