ಆನ್ ಲೈನ್ ಮೂಲಕವೇ ಖರೀದಿಸ ಬಹುದು ,ಪರಿಶುದ್ಧ ಚಿನ್ನ ಖರೀದಿಗೆ ಆಯ್ಕೆಗಳು ಇಲ್ಲಿವೆ

Gold Investment :  ಚಿನ್ನ ಅಂದರೆ ಯಾವಾಗಲೂ ಸಾಂಪ್ರದಾಯಿಕ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.  ತೊಂದರೆಯ ಸಮಯದಲ್ಲಿ ಚಿನ್ನ ನಿಮಗೆ ಸಹಾಯ ಮಾಡುತ್ತದೆ. ಸಮಯ ಕಳೆದಂತೆ ಚಿನ್ನವನ್ನು ಖರೀದಿಸುವ ವಿಧಾನವೂ ಬದಲಾಗಿದೆ.

Gold Investment :  ಚಿನ್ನ ಅಂದರೆ ಯಾವಾಗಲೂ ಸಾಂಪ್ರದಾಯಿಕ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.  ತೊಂದರೆಯ ಸಮಯದಲ್ಲಿ ಚಿನ್ನ ನಿಮಗೆ ಸಹಾಯ ಮಾಡುತ್ತದೆ. ಸಮಯ ಕಳೆದಂತೆ ಚಿನ್ನವನ್ನು ಖರೀದಿಸುವ ವಿಧಾನವೂ ಬದಲಾಗಿದೆ. ಇಂದಿನ ಸಮಯದಲ್ಲಿ, ನೀವು ಶುದ್ಧ ಚಿನ್ನವನ್ನು ಖರೀದಿಸಲು ಬಯಸಿದರೆ, ಮನೆಯಲ್ಲಿ ಕುಳಿತೇ ಖರೀದಿ ಮಾಡಬಹುದು. ಚಿನ್ನದ ವ್ಯಾಪಾರಿ ಬಳಿಗೆ ಹೋಗದೆ ಅಥವ ಆಭರಣ ಮಳಿಗೆಗಳಿಗೆ ಭೇಟಿ ನೀಡದೆಯೇ  24 ಕ್ಯಾರೆಟ್ ಶುದ್ಧ ಚಿನ್ನದ  ಮೇಲೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಚಿನ್ನದ ಇಟಿಎಫ್ ಅಂದರೆ ಪೇಪರ್ ಗೋಲ್ಡ್ ಅಂತಹ ಒಂದು ಸೌಲಭ್ಯವಾಗಿದೆ. ಇದರಲ್ಲಿ ನೀವು ಷೇರುಗಳ ರೂಪದಲ್ಲಿ ಚಿನ್ನವನ್ನು ಖರೀದಿಸಬಹುದು. ಚಿನ್ನದ ಮೇಲಿನ ಹೂಡಿಕೆಗಾಗಿ ಅಗ್ಗದ ಆಯ್ಕೆಗಳಲ್ಲಿ ಒಂದಾಗಿದೆ. ಇದು  ಎಕ್ಸ್ಚೇಂಜ್ ಟ್ರೇಡಿಂಗ್ ಫಂಡ್‌ . ಇವುಗಳನ್ನು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು  ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಇದರಲ್ಲಿ, ಚಿನ್ನದ ಖರೀದಿಯನ್ನು ಯುನಿಟ್ ಗಳಲ್ಲಿ ಮಾಡಲಾಗುತ್ತದೆ. ಚಿನ್ನದ ಭೌತಿಕ ವಿತರಣೆಯನ್ನು ಅದರ ಮಾರಾಟದಲ್ಲಿ ಮಾಡಲಾಗುವುದಿಲ್ಲ.

2 /4

 ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಲು ಸಾವರಿನ್ ಗೋಲ್ಡ್ ಬಾಂಡ್ (SGB) ಸಹ ಉತ್ತಮ ಆಯ್ಕೆಯಾಗಿದೆ. SGBಗಳನ್ನು ಪ್ರಸ್ತುತ ಚಿನ್ನದ ಬೆಲೆಯಲ್ಲಿ ನಿಯಮಿತವಾಗಿ ನೀಡಲಾಗುತ್ತದೆ. ಎಸ್‌ಜಿಬಿಯ ಮೆಚ್ಯುರಿಟಿ ಅವಧಿ ಎಂಟು ವರ್ಷಗಳು.  ಲಾಕ್-ಇನ್ ಅವಧಿ ಐದು ವರ್ಷಗಳು.  ಎಸ್‌ಜಿಬಿಯನ್ನು ಅವಧಿ ಮುಕ್ತಾಯವಾಗುವವರೆಗೆ ಉಳಿಸಿಕೊಂಡಿದ್ದರೆ, ಹೂಡಿಕೆ ಮತ್ತು ಲಾಭದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದರ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯಬಹುದು.

3 /4

ಚಿನ್ನವನ್ನು ಖರೀದಿಸಲು ಸುಲಭವಾದ ಆಯ್ಕೆಯನ್ನು ಹುಡುಕುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಕೆಲವೇ ಸೆಕೆಂಡುಗಳಲ್ಲಿ  ಇದನ್ನು ಮಾಡಬಹುದು. ಇದಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವೂ ಇಲ್ಲ. ನಿಮ್ಮಲ್ಲಿರುವ ಹಣಕ್ಕೆ ನೀವು ಚಿನ್ನವನ್ನು ಖರೀದಿಸಬಹುದು. ಈ ಸೌಲಭ್ಯವು Paytm, PhonePe ನಂತಹ ಮೊಬೈಲ್ ವ್ಯಾಲೆಟ್‌ಗಳಲ್ಲಿ ಲಭ್ಯವಿದೆ.    

4 /4

ಇಂದಿನ ಯುಗದಲ್ಲಿ, ನೀವು ಮ್ಯೂಚುಯಲ್ ಫಂಡ್‌ಗಳ ಮೂಲಕವೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ಆನ್‌ಲೈನ್ ಮೋಡ್ ಮೂಲಕ ಅಥವಾ ಅದರ ವಿತರಕರ ಮೂಲಕ ನೇರವಾಗಿ ಗೋಲ್ಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಡಿಮ್ಯಾಟ್ ಖಾತೆ ಅಗತ್ಯವಿಲ್ಲ. ಗೋಲ್ಡ್ ಮ್ಯೂಚುಯಲ್ ಫಂಡ್‌ನಲ್ಲಿ, ನಿಮ್ಮ ಫಂಡ್ ಮ್ಯಾನೇಜರ್ ತನ್ನ ಕಾರ್ಪಸ್ ಅನ್ನು ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎಸ್‌ಐಪಿ ಮೂಲಕ ಚಿನ್ನದ ಮ್ಯೂಚುವಲ್ ಫಂಡ್‌ಗಳಲ್ಲೂ ಹೂಡಿಕೆ ಮಾಡಬಹುದು.