Best Smartphones: 30 ಸಾವಿರ ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಇಲ್ಲಿವೆ ನೋಡಿ

30 ಸಾವಿರ ರೂ.ಗಿಂತ ಕಡಿಮೆ ಬಜೆಟ್‍ನಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಸಿಗುತ್ತವೆ.

ನವದೆಹಲಿ: ಮಧ್ಯಮ ಶ್ರೇಣಿಯ ವಿಭಾಗದಲ್ಲಿ ನಿಮಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಸಿಗುತ್ತವೆ. 30 ಸಾವಿರ ರೂ.ಗಿಂತ ಕಡಿಮೆ ಬಜೆಟ್‍ನಲ್ಲಿ ಅತ್ಯುತ್ತಮ ಫೋನ್‍ಗಳನ್ನು ನೀವು ಖರೀದಿಸಬಹುದು. ನೀವು ಕೊಡುವ ಹಣಕ್ಕೆ ತಕ್ಕುದಾದ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‍ಫೋನ್‍ಗಳು ಹೊಂದಿವೆ. ಸಾಮಾನ್ಯವಾಗಿ ಈ ಫೋನುಗಳು ಅತ್ಯುತ್ತಮ ಕ್ಯಾಮೆರಾ, ದೀರ್ಘಕಾಲಿಕ ಬಾಳಿಕೆ ಬರುವ ಬ್ಯಾಟರ ಸೇರಿದಂತೆ ಹತ್ತು-ಹಲವು ವಿಶೇಷತೆಗಳನ್ನು ಹೊಂದಿರುತ್ತವೆ. ಹೀಗಾಗಿ 30 ಸಾವಿರ ಬಜೆಟ್‍ಗೆ ಹೊಂದುವಂತಹ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ಇಲ್ಲಿ ನಾವು ನಿಮಗಾಗಿ ನೀಡಿದ್ದೇವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ಸ್ಮಾರ್ಟ್ಫೋನ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಿದೆ. ಇದು ಶಕ್ತಿಯುತವಾದ MediaTek ಡೈಮೆನ್ಸಿಟಿ 1300 ಚಿಪ್‌ಸೆಟ್ ಜೊತೆಗೆ 4500mAh ಬ್ಯಾಟರಿಯನ್ನು ಹೊಂದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ 80W Supervooc ಚಾರ್ಜಿಂಗ್ ಬೆಂಬಲ ಹೊಂದಿದೆ.Reno8 90Hz ರಿಫ್ರೆಶ್ ರೇಟ್‍ನೊಂದಿಗೆ 6.43-ಇಂಚಿನ ಪೂರ್ಣ HD + AMOLED ಡಿಸ್ಪ್ಲೇಯನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ರೂಪಾಂತರದ ಫೋನಿಗೆ 29,999 ರೂ. ಇದೆ. 8 GB RAM | 128 GB ROM ಜೊತೆಗೆ 16.33 ಸೆಂ (6.43 ಇಂಚು) ಪೂರ್ಣ ಎಚ್ಡಿ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‍ಫೋನ್‍, 50MP + 8MP + 2MP | 32MP ಮುಂಭಾಗದ ಕ್ಯಾಮೆರಾ ಹೊಂದಿದೆ.

2 /5

ಈ ಫೋನ್‌ನಲ್ಲಿ MediaTek's Dimensity 8100, 6.6-ಇಂಚಿನ LCD ಜೊತೆಗೆ ಅಡಾಪ್ಟಿವ್ 144Hz ರಿಫ್ರೆಶ್ ರೇಟ್ ಮತ್ತು 67W ಫಾಸ್ಟ್ ಚಾರ್ಜಿಂಗ್ ಜೊತೆಗೆ 5,080 mAh ಬ್ಯಾಟರಿ ಅಳವಡಿಸಲಾಗಿದೆ. 6 GB+128 GB ರೂಪಾಂತರಕ್ಕೆ Mi ವೆಬ್‌ಸೈಟ್‌ನಲ್ಲಿ 25,999 ರೂ. ಇದೆ.  OIS ಜೊತೆಗೆ 64 MP + 8 MP + 2 MP ಟ್ರಿಪಲ್ ಹಿಂಬದಿಯ ಕ್ಯಾಮೆರಾ, 16 MP ಮುಂಭಾಗದ ಕ್ಯಾಮೆರಾ, 2.85 GHz, ಆಕ್ಟಾ ಕೋರ್ ಪ್ರೊಸೆಸರ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ಯನ್ನು ಹೊಂದಿರುತ್ತದೆ.

3 /5

ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಅಲ್ಟ್ರಾ-ಫಾಸ್ಟ್, ಸೂಪರ್ ಸ್ಥಿರ ಮತ್ತು ಮೃದುವಾದ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಇದು 64MP ಪ್ರೈಮರಿ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ 4700mAh ಬ್ಯಾಟರಿ ಹೊಂದಿದೆ. 29,999 ರೂ.ಗೆ ಇದು ನಿಮಗೆ ಸಿಗುತ್ತದೆ. ‎ಇದು 64MP + 8MP ಹಿಂದಿನ ಕ್ಯಾಮರಾ (ವೈಡ್ ಆಂಗಲ್) + 2MP (ಮ್ಯಾಕ್ರೋ) ಮತ್ತು 16MP ಮುಂಭಾಗ ಕ್ಯಾಮೆರಾ ಹೊಂದಿದೆ. Snapdragon® 870 5G ಮೊಬೈಲ್ ಪ್ಲಾಟ್‌ಫಾರ್ಮ್ – ಪ್ರೊಸೆಸರ್ ಹೊಂದಿರುವ ಈ ಫೋನು 8GB/12GB RAM ಮತ್ತು 128GB/256GB ROM ಹೊಂದಿದೆ. ಡಾರ್ಕ್ ನೋವಾ, ಸೈಬರ್ ರೇಜ್ ಮತ್ತು ಮೇವರಿಕ್ ಆರೆಂಜ್ ಬಣ್ಣಗಳಲ್ಲಿ ಈ ಫೋನು ಲಭ್ಯವಿದೆ.

4 /5

Poco F4 ಫೋನು Qualcomm Snapdragon 870 5G ಚಿಪ್‌ಸೆಟ್, 64MP ಮುಖ್ಯ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 20 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 6.67-ಇಂಚಿನ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್‍ಅನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 27,999 ರೂ.ಗೆ ಲಭ್ಯವಿರುವ ಈ ಫೋನು 6 GB RAM ಮತ್ತು 128 GB ROM ಹೊಂದಿದೆ. 16.94 cm (6.67 ಇಂಚು) Full HD+ ಡಿಸ್ಪ್ಲೇ, 64MP + 8MP + 2MP | 20MP ಮುಂಭಾಗದ ಕ್ಯಾಮೆರಾ, 4500 mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ಮತ್ತು Qualcomm Snapdragon 870 ಪ್ರೊಸೆಸರ್‍ನಲ್ಲಿ ಈ ಸ್ಮಾರ್ಟ್‍ಫೋನ್ ಕಾರ್ಯನಿರ್ವಹಿಸುತ್ತದೆ.

5 /5

Xiaomi 11i Hypercharge 30 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಅತ್ಯತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 120W ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಬರುತ್ತದೆ. ಇದು 6.67-ಇಂಚಿನ FHD+AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‍ ಹೊಂದಿದೆ. 26,999 ರೂ. ಬೆಲೆಯ ಈ ಫೋನು 6/8 GB RAM | 128 GB ROM | 1 TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಸ್ಪೇಸ್ ಹೊಂದಿದೆ. 16.94 ಸೆಂ (6.67 ಇಂಚು) Full HD+ AMOLED ಡಿಸ್ಪ್ಲೇ, 108MP + 8MP + 2MP | 16MP ಮುಂಭಾಗದ ಕ್ಯಾಮೆರಾ, 4500 mAh ಲಿ-ಪಾಲಿಮರ್ ಬ್ಯಾಟರಿ ಹೊಂದಿರುವ ಈ ಫೋನು ಮೀಡಿಯಾಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‍ನಲ್ಲಿ ಕಾರ್ಯನಿರ್ವಹಿಸುತ್ತದೆ.