ತೆಂಗಿನೆಣ್ಣೆಗೆ ಈ ಒಂದು ವಸ್ತುವನ್ನು ಸೇರಿಸಿ ಹಚ್ಚಿದರೆ ದೂರವಾಗುವುದು ತ್ವಚೆಯ ನಾಲ್ಕು ಸಮಸ್ಯೆಗಳು

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿಯಿಂದಾಗಿ ತ್ವಚೆಯ ಬಗ್ಗೆ ಕಾಳಜಿ ವಹಿಸಲು ಯಾರಿಗೂ ಸಮಯವಿಲ್ಲ, ಇದರಿಂದ ಹಲವಾರು ರೀತಿಯ ತ್ವಚೆ ಸಮಸ್ಯೆಗಳು ಉಂಟಾಗುತ್ತವೆ. 
 

ಬೆಂಗಳೂರು : ತ್ವಚೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬಹುತೇಕ ಎಲ್ಲರನ್ನೂ ಕಾಡುತ್ತದೆ. ಕೆಲವರಿಗೆ ಮೊಡವೆ ಸಮಸ್ಯೆಯಾದರೆ, ಇನ್ನು ಕೆಲವರಿಗೆ ಚರ್ಮವು ಹೆಚ್ಚು ಎಣ್ಣೆಯುಕ್ತವಾಗಿರುತ್ತವೇ ಎನ್ನುವ ವ್ಯಥೆ. ಮತ್ತೆ ಕೆಲವರಿಗೆ  ಶುಷ್ಕ ತ್ವಚೆ ಎನ್ನುವುದೇ ಚಿಂತೆ.  ಅಂದಹಾಗೆ, ಚರ್ಮದ ಸಮಸ್ಯೆಗಳ ಹೆಚ್ಚಳದ ಜೊತೆಗೆ, ಅವುಗಳಿಗೆ ಪರಿಹಾರವನ್ನು ಸೂಚಿಸುವ ಉತ್ಪನ್ನಗಳ ಸಂಖ್ಯೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ತ್ವಚೆ ಉತ್ಪನ್ನಗಳು ಸಂಪೂರ್ಣವಾಗಿ ರಾಸಾಯನಿಕ ಆಧಾರಿತವಾಗಿದ್ದು, ಕೆಲವೊಮ್ಮೆ ಅಡ್ಡ ಪರಿಣಾಮ  ಬೀರುತ್ತದೆ. ಅದಕ್ಕಾಗಿಯೇ ತ್ವಚೆಯ ಸಮಸ್ಯೆಗಳಿಗೆ ಮೊದಲು ಮನೆಮದ್ದುಗಳನ್ನು ಮನೆಯಲ್ಲಿಯೇ ಪ್ರಯತ್ನಿಸಲು  ಸಲಹೆ ನೀಡಲಾಗುತ್ತದೆ. ಇಂದು ನಾವು ನಿಮಗೆ ಅಂತಹ ಒಂದು ಮನೆಮದ್ದುಗಳ ಬಗ್ಗೆ ಹೇಳಲಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತೆಂಗಿನೆಣ್ಣೆಯಲ್ಲಿ ಲವಂಗವನ್ನು ಪುಡಿಮಾಡಿ ಅಥವಾ ಲವಂಗದ ಎಣ್ಣೆಯನ್ನು ಮಿಶ್ರಣ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಚರ್ಮದ ಮೇಲೆ ಬಳಸಿ. ಇದು ಚರ್ಮವನ್ನು ಆರೋಗ್ಯಕರವಾಗಿರಿಸಲು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ನಿವಾರಿಸಲು  ಸಹಾಯ ಮಾಡುತ್ತದೆ.   

2 /5

ಮೊಡವೆಗಳಿಂದ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಮನೆಮದ್ದನ್ನು ಪ್ರಯತ್ನಿಸಿ.  ತೆಂಗಿನೆಣ್ಣೆ ಮತ್ತು ಲವಂಗ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಬೆಳಿಗ್ಗೆ ಮತ್ತು ಸಂಜೆ ಮೊಡವೆಗಳ ಮೇಲೆ ಬಳಸಿ. ಕೆಲವೇ ದಿನಗಳಲ್ಲಿ  ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.   

3 /5

ತೆಂಗಿನೆಣ್ಣೆ ಮತ್ತು ಲವಂಗದ ಎಣ್ಣೆ ಎರಡರಲ್ಲೂ ಅನೇಕ ರೀತಿಯ ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳನ್ನು ಗುಣಪಡಿಸುವ ಅಂಶಗಳು ಕಂಡು ಬರುತ್ತವೆ. ತೆಂಗಿನೆಣ್ಣೆಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಲವಂಗ ಎಣ್ಣೆಯು ಚರ್ಮಕ್ಕೆ ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. 

4 /5

ತೆಂಗಿನಕಾಯಿ ಮತ್ತು ಲವಂಗ ಎಣ್ಣೆಯ ಮಿಶ್ರಣವು ಚರ್ಮದ ಮೇಲಿನ ನಸುಕಂದು ಮಚ್ಚೆಗಳು ಅಥವಾ ಇತರ ಶಾಶ್ವತ ಗುರುತುಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. 

5 /5

ತೆಂಗಿನ ಎಣ್ಣೆಯನ್ನು ಸುಕ್ಕು ಕಡಿಮೆ ಮಾಡುವ ಎಣ್ಣೆ ಎಂದೂ ಕರೆಯುತ್ತಾರೆ. ಲವಂಗ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚರ್ಮಕ್ಕೆ ಬಳಸುವುದರಿಂದ ಚರ್ಮವು ಬಿಗಿಯಾಗುತ್ತದೆ. ಸುಕ್ಕಿನ ಸಮಸ್ಯೆಗಳನ್ನು ನಿವಾರಿಸುತ್ತದೆ.