ಮಳೆಗಾಲದಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳಿಗೆ ನಿತ್ಯ ಸೇವಿಸಿ ಈ ಹಣ್ಣಿನ ಜ್ಯೂಸ್

ಮಳೆಗಾಲದಲ್ಲಿ  ಅಲರ್ಜಿಗಳು ಮತ್ತು ಸೋಂಕು ಕಾಣಿಸಿಕೊಳ್ಳುತ್ತವೆ.  ದಾಳಿಂಬೆ ರಸವನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 

ಬೆಂಗಳೂರು : ಮಳೆಗಾಲದಲ್ಲಿ ಹಸಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯೊಂದಿಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸೂಚಿಸಲಾಗುತ್ತದೆ.  ಸೊಪ್ಪು ತರಕಾರಿಗಳು ಮತ್ತು ರಸಭರಿತವಾದ ಹಣ್ಣುಗಳನ್ನು ಸೇವಿಸುವುದನ್ನು ಮಳೆಗಾಲದಲ್ಲಿ ನಿಷೇಧಿಸಲಾಗುತ್ತದೆ. ವಿಶೇಷವಾಗಿ ಅನೇಕ ರೀತಿಯ ಹಣ್ಣುಗಳನ್ನು ಸೇವಿಸುವ ಬದಲು ಅವುಗಳ  ಜ್ಯೂಸ್ ಕುಡಿಯಲು ಸಲಹೆ ನೀಡಲಾಗುತ್ತದೆ. ವಾಸ್ತವವಾಗಿ, ಮಳೆಗಾಲದಲ್ಲಿ  ಅಲರ್ಜಿಗಳು ಮತ್ತು ಸೋಂಕು ಕಾಣಿಸಿಕೊಳ್ಳುತ್ತವೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ದಾಳಿಂಬೆಯನ್ನು ಉತ್ಕರ್ಷಣ ನಿರೋಧಕಗಳ ಖಜಾನೆ ಎಂದೇ ಹೇಳಲಾಗುತ್ತದೆ. ಈ ಹನಿನಲ್ಲಿರುವ ಕೆಲವು ಅಂಶಗಳು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಲ್ಲದೆ, ದಾಳಿಂಬೆಯಲ್ಲಿ ವಿಟಮಿನ್ ಸಿ ಮತ್ತು ಆಂಟಿವೈರಲ್ ಅಂಶಗಳೂ ಕಂಡುಬರುತ್ತವೆ.  ಇವು ವೈರಲ್ ಸೋಂಕುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ದಾಳಿಂಬೆ ರಸವನ್ನು ಬೆಳಗಿನ ತಿಂಡಿಗಳೊಂದಿಗೆ ಅಥವಾ ಮಧ್ಯಾಹ್ನದ ಊಟದ ನಂತರ  ಸೇವಿಸಬಹುದು. ನಿಮ್ಮ ಇಷ್ಟಕ್ಕೆ ಅನುಗುಣವಾಗಿ ದಾಳಿಂಬೆ ರಸಕ್ಕೆ ಪುದೀನ ಎಲೆಗಳು, ಶುಂಠಿ ಮತ್ತು  ಬ್ಲಾಕ್ ಸಾಲ್ಟ್ ಸೇರಿಸಬಹುದು. 

2 /4

ವಿಟಮಿನ್ ಸಿ ದಾಳಿಂಬೆಯಲ್ಲಿ ಕಂಡುಬರುತ್ತದೆ, ಇದು ಚರ್ಮದಲ್ಲಿ ಕಾಲಜನ್ ರಚನೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮದ ಪಿಗ್ಮೆಂಟೇಶನ್ ಮತ್ತು ಸುಕ್ಕುಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮುಖದ  ಹೊಳಪನ್ನು ಹೆಚ್ಚಿಸುತ್ತದೆ.

3 /4

ದಾಳಿಂಬೆ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ತುಂಬಾ ಸಹಾಯಕ. ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.   

4 /4

ಒತ್ತಡವನ್ನು ತೆಗೆದುಹಾಕುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವ ಆಹಾರಗಳಲ್ಲಿ ದಾಳಿಂಬೆ ಸೇರಿದೆ. ಇದು ಚೆನ್ನಾಗಿ ನಿದ್ದೆ ಮಾಡುವ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ದಾಳಿಂಬೆ ರಸವನ್ನು ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಕುಡಿಯಬಹುದು. ಮೆಗ್ನೀಸಿಯಮ್ ದಾಳಿಂಬೆಯಲ್ಲಿ ಕಂಡುಬರುತ್ತದೆ, ಇದು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ