ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !

ಶೀಘ್ರದಲ್ಲೇ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. ಎಷ್ಟು ಹೆಚ್ಚಳವಾಗಲಿದೆ, ಹೇಗೆ ಹೆಚ್ಚಳವಾಗಲಿದೆ ಲೆಕ್ಕಾಚಾರ ಇಲ್ಲಿದೆ. 
 

ಬೆಂಗಳೂರು : ಹಂತ 1 ನೌಕರರು 34% ವರೆಗೆ ವೇತನ ಹೆಚ್ಚಳವನ್ನು ಪಡೆಯಬಹುದು ಮತ್ತು ಹಂತ 18 ಉದ್ಯೋಗಿಗಳು 100% ವರೆಗೆ ಪಡೆಯಬಹುದು.ಹಂತ 1 ರ ವೇತನ ರೂ. 34,560 ಮತ್ತು ಹಂತ 18 ರ ವೇತನವು ರೂ.4.8 ಲಕ್ಷದವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. 2029 ರ ವೇಳೆಗೆ 50% ಪಿಂಚಣಿ ಸೂತ್ರ ಮತ್ತು 20% ತುಟ್ಟಿಭತ್ಯೆಯನ್ನು ಅಂದಾಜು ಹಾಕಿದರೆ UPS ಅಡಿಯಲ್ಲಿ ಪಿಂಚಣಿಯು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮಾಸಿಕ ವೇತನದ 50% ಕ್ಕೆ ನಿಗದಿಯಾಗುತ್ತದೆ. ಅಂದರೆ ಹಂತ 1ರ ನೌಕರರು ಅಂದಾಜು 20,736 ರೂಪಾಯಿ ಪಿಂಚಣಿ ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /11

ಇತ್ತೀಚೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಬದಲಿಸಲು ಏಕೀಕೃತ ಪಿಂಚಣಿ ಯೋಜನೆ (UPS)ಅನ್ನು ಜಾರಿಗೆ ತಂದಿತು.ಇದು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಒಂದು ದೊಡ್ಡ ಒಳ್ಳೆಯ ಸುದ್ದಿಯಾಗಿದೆ.   

2 /11

ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗಕ್ಕೆ ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ.ಸರ್ಕಾರ ಈ ಬಗ್ಗೆ ಸಿದ್ದತೆ ಆರಂಭಿಸಿದೆ ಎನ್ನಲಾಗಿದೆ.ಶೀಘ್ರದಲ್ಲೇ ಹೊಸ ಆಯೋಗ ರಚನೆ ಕುರಿತು ಸಿಹಿ ಸುದ್ದಿ ನೀಡಲಿದೆ ಎನ್ನುತ್ತವೆ ಮೂಲಗಳು.

3 /11

ಹೊಸ ವೇತನ ಆಯೋಗ 10 ವರ್ಷಗಳಿಗೊಮ್ಮೆ ಜಾರಿಯಾಗುತ್ತವೆ.7 ನೇ ವೇತನ ಆಯೋಗವನ್ನು 2016 ರಲ್ಲಿ ಪರಿಚಯಿಸಲಾಯಿತು.ಅದರಂತೆ 8ನೇ ವೇತನ ಆಯೋಗವು 2026ರಲ್ಲಿ ಜಾರಿಗೆ ಬರಬೇಕು.ಸರ್ಕಾರ ಈಗಾಗಲೇ ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ.   

4 /11

7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ರಚಿಸಲಾಗಿದ್ದು, ಶಿಫಾರಸುಗಳು ಜನವರಿ 1, 2016 ರಿಂದ ಜಾರಿಗೆ ಬಂದವು.ಆದ್ದರಿಂದ 8ನೇ ವೇತನ ಆಯೋಗವನ್ನು 2026ರ ಜನವರಿಯಲ್ಲಿ ಜಾರಿಗೊಳಿಸಬೇಕು. 

5 /11

ವೇತನ ಆಯೋಗ ಜಾರಿಗೆ ಬರಲು ಸುಮಾರು 1 1/2-2 ವರ್ಷಗಳು ಬೇಕಾಗುವುದರಿಂದ,ಈಗ ಅಧಿಸೂಚನೆ ಬಂದರೆ,2026ರೊಳಗೆ ಅದನ್ನು ಜಾರಿಗೆ ತರಬಹುದು.  

6 /11

ಹಂತ 1 ಉದ್ಯೋಗಿಗಳಿಗೆ ವೇತನ ಹೆಚ್ಚಳವು 34% ವರೆಗೆ ಮತ್ತು ಹಂತ 18 ಉದ್ಯೋಗಿಗಳಿಗೆ 100% ವರೆಗೆ ಏರಿಕೆ ಕಾಣುತ್ತದೆ.ಅಂದರೆ ಹಂತ 1ರ ವೇತನವು 34,560 ಮತ್ತು ಹಂತ 18 ರ ವೇತನವು 4.8 ಲಕ್ಷದವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

7 /11

6ನೇ ವೇತನ ಶ್ರೇಣಿಯಿಂದ 7ನೇ ವೇತನ ಶ್ರೇಣಿಗೆ ಪರಿವರ್ತನೆಯಾದ ಮೇಲೆ ನೌಕರರ ಸಂಘವು ವೇತನ ಪರಿಷ್ಕರಣೆಯಲ್ಲಿ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಬದಲಾಯಿಸುವಂತೆ ಒತ್ತಾಯಿಸಿತ್ತು.ಆದರೆ ಸರ್ಕಾರ ಅದನ್ನು 2.57ಕ್ಕೆ ಉಳಿಸಿಕೊಂಡಿದೆ.8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

8 /11

ಫಿಟ್‌ಮೆಂಟ್ ಅಂಶದ ಮೂಲಕ ಕೇಂದ್ರ ನೌಕರರ ಕನಿಷ್ಠ ವೇತನ 7000ದಿಂದ ರೂ.18 ಸಾವಿರಕ್ಕೆ ಏರಿಕೆಯಾಗಲಿದೆ. 8ನೇ ವೇತನ ಆಯೋಗವು ಜಾರಿಗೆ ಬರಲಿದ್ದು, ಫಿಟ್‌ಮೆಂಟ್ ಅಂಶವನ್ನು 3.68 ರಿಂದ ಗುಣಿಸಿದರೆ, ಮಾಸಿಕ ವೇತನವು ರೂ.18,000 ರಿಂದ ರೂ. 26,000 ಕ್ಕೆ ಅಂದರೆ ಸುಮಾರು 44%ದಷ್ಟು ಹೆಚ್ಚಾಗಲಿದೆ.  

9 /11

ಇತ್ತೀಚಿನ ತಿಂಗಳುಗಳಲ್ಲಿ 8 ನೇ ವೇತನ ಆಯೋಗದ ಬಗ್ಗೆ ಅನೇಕ ನೌಕರರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ಬರೆದಿವೆ.ಬಜೆಟ್ ಅಧಿವೇಶನದಲ್ಲಿ ಎಂಪ್ಲಾಯೀಸ್ ಫೆಡರೇಶನ್, ರಾಷ್ಟ್ರೀಯ ಜಂಟಿ ಸಲಹಾ ಸಂಸ್ಥೆಗಳು,ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ ಸೇರಿದಂತೆ ವಿವಿಧ ನೌಕರರ ಸಂಘಟನೆಗಳು ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದವು.

10 /11

ಕೆಲ ದಿನಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್,8ನೇ ವೇತನ ಆಯೋಗವು 2026ರಲ್ಲೇ ಜಾರಿಗೆ ಬರಬೇಕಿದ್ದು, ಅದಕ್ಕೆ ಇನ್ನೂ ಕಾಲಾವಕಾಶವಿದೆ ಎಂದಿದ್ದಾರೆ.ಅಂದರೆ 8ನೇ ವೇತನ ಆಯೋಗ ರಚನೆ ಬಗ್ಗೆ   ಸರ್ಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ ಎಂದರ್ಥ. 

11 /11

ಸೂಚನೆ :ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗ ರಚನೆಯ ಯಾವುದೇ ಗ್ಯಾರಂಟಿಯನ್ನು ನಾವು  ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.