ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಕೆರೆ ಕಟ್ಟೆಗಳನ್ನು ಡಿ-ನೋಟಿಫಿಕೇಶನ್ ಮಾಡಲು #ಭ್ರಷ್ಟರಾಮಯ್ಯ ಅವರ ಸಚಿವ ಸಂಪುಟ ಅನುಮೋದನೆ ನೀಡಿತ್ತು ಎಂದು ಬಿಜೆಪಿ ಆರೋಪಿಸಿದೆ.
ಭಾರೀ ಮಳೆಯಿಂದಾಗಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಪ್ರವಾದಂತಹ ಪರಿಸ್ಥಿತಿ ನಿರ್ಮಾಣವಾಗಿ ಜನಸಮಾನ್ಯರು ಪರದಾಡುವಂತಾಗಿತ್ತು. ಇದರಿಂದ ಸಿಲಿಕಾನ್ ಸಿಟಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸುತ್ತಿವೆ.
ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಗಳಿಗೆ ಕಾಂಗ್ರೆಸ್ ಕಾರಣ ಎಂದು ನಾವು ಆರಂಭದಲ್ಲೇ ಹೇಳಿದ್ದೆವು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಕೆರೆ ಕಟ್ಟೆಗಳನ್ನು ಡಿ-ನೋಟಿಫಿಕೇಶನ್ ಮಾಡಲು #ಭ್ರಷ್ಟರಾಮಯ್ಯ ಅವರ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಹಾಗಾದರೇ, ಮೊನ್ನೆಯ ಮಳೆ ಅವಾಂತರದ ಸೃಷ್ಟಿಕರ್ತರು ನೀವಲ್ಲವೇ? pic.twitter.com/R3sX9p6wL8
— BJP Karnataka (@BJP4Karnataka) September 12, 2022
ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಯ ಸಂದರ್ಭದಲ್ಲಿ, ಮೊಳಕಾಲುದ್ದ ನೀರಿನಲ್ಲೂ ಸಿದ್ದರಾಮಯ್ಯ ಬೋಟ್ ರೈಡ್ ಮೂಲಕ ನೆರೆ ಪ್ರದೇಶಕ್ಕೆ ತೆರಳಿ ಜನ ಸ್ಪಂದನೆಯ ನಾಟಕ ಮಾಡಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಮೊನ್ನೆಯ ಸಂಕಷ್ಟದ ದಿನಗಳಿಗೆ #ಭ್ರಷ್ಟರಾಮಯ್ಯ ಅವರೇ ನೇರ ಕಾರಣ’ವೆಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Rohini Sindhuri : 'ರೋಹಿಣಿ ಸಿಂಧೂರಿ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ'
‘ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಗಳಿಗೆ ಕಾಂಗ್ರೆಸ್ ಕಾರಣ ಎಂದು ನಾವು ಆರಂಭದಲ್ಲೇ ಹೇಳಿದ್ದೆವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆರೆ ಕಟ್ಟೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಸಿದ್ದರಾಮಯ್ಯರ ಸಂಪುಟ ಅನುಮೋದನೆ ನೀಡಿತ್ತು. ಹಾಗಾದರೇ ಮೊನ್ನೆಯ ಮಳೆ ಅವಾಂತರದ ಸೃಷ್ಟಿಕರ್ತರು ನೀವಲ್ಲವೇ?’ ಎಂದು ಪ್ರಶ್ನಿಸಿದೆ.
ಮಾನ್ಯ #ಭ್ರಷ್ಟರಾಮಯ್ಯ ಅವರೇ,
ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ?
ಅಕ್ರಮ ಒತ್ತುವರಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?
— BJP Karnataka (@BJP4Karnataka) September 12, 2022
‘ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ #ಭ್ರಷ್ಟರಾಮಯ್ಯ ಸರ್ಕಾರ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು. ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಪಡೆದ ಕಪ್ಪಕಾಣಿಕೆ ಎಷ್ಟು?’ ಎಂದು ಬಿಜೆಪಿ ಪ್ರಶ್ನಿಸಿದೆ.
‘#ಭ್ರಷ್ಟರಾಮಯ್ಯನವರೇ ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ? ಅಕ್ರಮ ಒತ್ತುವರಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?’ ಅಂತಾ ಬಿಜೆಪಿ ಕುಟುಕಿದೆ.
ಇದನ್ನೂ ಓದಿ: CT Ravi : 'ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.