ಮಾರುತಿ ಕಾರುಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ, ಈ ಅವಕಾಶ ಕೆಲವು ದಿನಗಳಿಗೆ ಮಾತ್ರ

Offers On Maruti Suzuki Cars:ಪ್ರಸ್ತುತ ಕಂಪನಿ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.  ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.   

Written by - Ranjitha R K | Last Updated : Aug 26, 2022, 10:51 AM IST
  • ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟವಾಗುವ ಕಂಪನಿ ಮಾರುತಿ ಸುಜುಕಿ
  • ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ
  • ಕಾರುಗಳ ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್
ಮಾರುತಿ ಕಾರುಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ, ಈ ಅವಕಾಶ ಕೆಲವು ದಿನಗಳಿಗೆ ಮಾತ್ರ  title=
Offers On Maruti Suzuki Cars (file photo)

Offers On Maruti Suzuki Cars : ಮಾರುತಿ ಸುಜುಕಿ ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟವಾಗುವ ಕಂಪನಿಯಾಗಿದೆ. ಜುಲೈ ತಿಂಗಳಲ್ಲಿ, ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಲ್ಲಿ 7 ಮಾಡೆಲ್‌ಗಳು ಮಾರುತಿ ಸುಜುಕಿಯಯದ್ದಾಗಿದೆ. ಿಪ್ರಸ್ತುತ ಕಂಪನಿ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.  ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. 

ಮಾರುತಿ ಸುಜುಕಿ ಆಲ್ಟೊದ ಮೇಲೆ  ಕಂಪನಿಯು 8000 ರೂಪಾಯಿಗಳವರೆಗೆ ನಗದು ರಿಯಾಯಿತಿ, 10,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 4000 ರೂಪಾಯಿಗಳ ISL ಕೊಡುಗೆಯನ್ನು ನೀಡುತ್ತಿದೆ. ಕಾರಿನ ಸಿಎನ್‌ಜಿ ರೂಪಾಂತರದಲ್ಲಿ ಯಾವುದೇ ರಿಯಾಯಿತಿ  ಇರುವುದಿಲ್ಲ. 

ಇದನ್ನೂ ಓದಿ : Arecanut Today Price: ಕರ್ನಾಟಕ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ

ಮಾರುತಿ ಸುಜುಕಿ ಸೆಲೆರಿಯೊ ಮೇಲೆ ಕೂಡಾ ರಿಯಾಯಿತಿ ನೀಡಲಾಗುತ್ತಿದೆ. ಸೆಲೆರಿಯೊದಲ್ಲಿ 10,000 ರೂಪಾಯಿಗಳವರೆಗೆ ನಗದು ರಿಯಾಯಿತಿ ಮತ್ತು 15,000 ರೂಪಾಯಿಗಳ ವಿನಿಮಯ ಕೊಡುಗೆ ನೀಡಲಾಗುತ್ತಿದೆ. ಈ ಕಾರಿನ  ಸಿಎನ್‌ಜಿ ರೂಪಾಂತರಗಳ ಮೇಲೆ ಕೂಡಾ ಯಾವುದೇ ರೀತಿಯ ಕೊಡುಗೆ ನೀಡಲಾಗುವುದಿಲ್ಲ.  

ಮಾರುತಿ ಸುಜುಕಿ ಎಸ್-ಪ್ರೆಸ್ಸೊದಲ್ಲಿ 35,000 ರೂ . ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ, 15,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 4000 ರೂಪಾಯಿಗಳವರೆಗೆ  ISL ಕೊಡುಗೆಯೂ ಇದೆ. ಆದರೆ ನೆನಪಿರಲಿ ಕಾರಿನ ರೂಪಾಂತರವನ್ನು ಅವಲಂಬಿಸಿ ರಿಯಾಯಿತಿಗಳು ಕೂಡಾ ಬದಲಾಗಬಹುದು.

ಇದನ್ನೂ ಓದಿ : ಸರ್ಕಾರದಿಂದ ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..! 10 ಗ್ರಾಂ ಬಂಗಾರದ ಮೇಲೆ 2186 ರೂ. ಲಾಭ

ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು  10,000 ರೂಪಾಯಿ ನಗದು ರಿಯಾಯಿತಿ,  15,000 ರೂಪಾಯಿ ವಿನಿಮಯ ಬೋನಸ್ ಮತ್ತು 5000  ರೂ ಐಎಸ್ಎಲ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.  ಈ ಕಾರಿನ CNG ರೂಪಾಂತರದಲ್ಲಿ ಕೇವಲ 10,000 ರೂ ನಗದು ರಿಯಾಯಿತಿ  ಇದೆ. 

ಇನ್ನು ಮಾರುತಿ ಸ್ವಿಫ್ಟ್ ಕಾರು ಖರೀದಿಸುವುದಾದರೆ, 20,000 ರೂಪಾಯಿಗಳ ನಗದು ರಿಯಾಯಿತಿಯನ್ನು  ನೀಡಲಾಗುವುದು. ಡಿಜೈರ್‌ನಲ್ಲಿ 5000 ರೂ ನಗದು ರಿಯಾಯಿತಿ, ರೂ 10,000 ವಿನಿಮಯ ಬೋನಸ್ ಮತ್ತು ರೂ 3000 ISL ಕೊಡುಗೆಯನ್ನು ನೀಡಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News