ಈ ತರಕಾರಿಯಲ್ಲ ಅದರ ಬೀಜ ನಿಯಂತ್ರಣಕ್ಕೆ ತರುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ

Pumpkin Seeds For Diabetes:ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು.  ಇಲ್ಲದಿದ್ದರೆ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುವುದಿಲ್ಲ.  ಇದರಿಂದಾಗಿ ಇತರ ಅನೇಕ ರೋಗಗಳ ಅಪಾಯ ಕೂಡಾ ಹೆಚ್ಚಾಗುತ್ತದೆ.  

Written by - Ranjitha R K | Last Updated : Jun 27, 2022, 10:01 AM IST
  • ಈ ಬೀಜ ಮಧುಮೇಹ ರೋಗಿಗಳಿಗೆ, ವರದಾನವೇ ಸರಿ.
  • ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು.
  • ಕುಂಬಳಕಾಯಿ ಬೀಜಗಳನ್ನು ಹೇಗೆ ಸೇವಿಸುವುದು ?
ಈ ತರಕಾರಿಯಲ್ಲ ಅದರ ಬೀಜ ನಿಯಂತ್ರಣಕ್ಕೆ ತರುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ  title=
Pumpkin Seeds For Diabetes (file photo)

ಬೆಂಗಳೂರು : Pumpkin Seeds For Diabetes : ಕುಂಬಳಕಾಯಿಯನ್ನು ಸಾಂಬಾರು, ಹುಳಿ, ಪಲ್ಯ ಹೀಗೆ ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಈ ತರಕಾರಿಯನ್ನು ಬಳಸುವಾಗ ಸಾಮಾನ್ಯವಾಗಿ ಅದರ ಬೀಜ ಕಸದ ಬುಟ್ಟಿ ಸೇರುತ್ತದೆ. ಕುಂಬಳ ಕಾಯಿ ಬೀಜದ ಆರೋಗ್ಯ ಪ್ರಯೋಜನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ.  ಕುಂಬಳಕಾಯಿ ಬೀಜವನ್ನು ಎಸೆಯುವುದರಿಂದ ಅದರ ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ಈ ಬೀಜ ಮಧುಮೇಹ ರೋಗಿಗಳಿಗೆ, ವರದಾನವೇ ಸರಿ. 

ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುವುದಿಲ್ಲ.  ಇದರಿಂದಾಗಿ ಇತರ ಅನೇಕ ರೋಗಗಳ ಅಪಾಯ ಕೂಡಾ ಹೆಚ್ಚಾಗುತ್ತದೆ.  ಕುಂಬಳಕಾಯಿ ಬೀಜಗಳು ಮಧುಮೇಹ ರೋಗಿಗಳಿಗೆ ವರದಾನವೇ ಸರಿ.  ಇದರಲ್ಲಿ ಫೈಬರ್, ಪ್ರೋಟೀನ್, ಸತು ಮತ್ತು ಮೆಗ್ನೀಸಿಯಮ್ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 
 
ಇದನ್ನೂ ಓದಿ : Brown Rice: ರಕ್ತದೊತ್ತದದಿಂದ ಹಿಡಿದು ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬ್ರೌನ್ ರೈಸ್ ರಾಮಬಾಣ

ಕುಂಬಳಕಾಯಿ ಬೀಜಗಳನ್ನು ಹೇಗೆ ಸೇವಿಸುವುದು ?
1. ಬೆಳಗಿನ ಉಪಾಹಾರ :
ಬೆಳಗಿನ ಉಪಾಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಈ ಬೀಜಗಳನ್ನು ಓಟ್ಸ್‌ನಲ್ಲಿ ಬೆರೆಸಿ ಬೆಳಗಿನ ಉಪಾಹಾರದಲ್ಲಿ ಸೇವಿಸುವುದು ಉತ್ತಮ.

2.ಮಧ್ಯಾಹ್ನದ ಊಟ :
ಕಾರಣಾಂತರಗಳಿಂದ ಬೆಳಗಿನ ಉಪಾಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ತಿನ್ನಲು ಸಾಧ್ಯವಾಗದಿದ್ದರೆ, ಅದನ್ನು ಮಧ್ಯಾಹ್ನದ ಊಟದಲ್ಲಿ ಸೇರಿಸಿಕೊಳ್ಳಬಹುದು. ನೀವು ಮಾಡುವ ಸಾಂಬಾರ್ ನಲ್ಲಿ ಇದನ್ನು ಬೆರೆಸಿ ತಿನ್ನಬಹುದು. ಅಥವಾ ಕುಂಬಳಕಾಯಿ ತರಕಾರಿಗಳನ್ನು ಬೇಯಿಸುವಾಗ ಅದರ ಬೀಜಗಳನ್ನು ತೆಗೆಯಬೇಡಿ. 

ಇದನ್ನೂ ಓದಿ : Benefits Of Mango Peel: ಹಲವು ರೀತಿಯ ಕ್ಯಾನ್ಸರ್ ನಿವಾರಣೆಗೆ ತುಂಬಾ ಲಾಭಕಾರಿಯಾಗಿದೆ ಮಾವಿನ ಹಣ್ಣಿನ ಸಿಪ್ಪೆ

3. ಸಂಜೆಯ ತಿಂಡಿಗಳು :
ಸಂಜೆ ಏನನ್ನಾದರೂ ತಿನ್ನಬೇಕು ಎಂದೆನಿಸುತ್ತಿದ್ದರೆ, ಹುರಿದ ಕುಂಬಳಕಾಯಿ ಬೀಜಗಳನ್ನು ಬಳಸಬಹುದು. ಇದು ಮಧುಮೇಹಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ಜೊತೆಗೆ ತೂಕವನ್ನು ಕಳೆದುಕೊಳ್ಳಲು ಕೂಡಾ ಸಹಾಯ ಮಾಡುತ್ತದೆ.

ಕುಂಬಳಕಾಯಿ ಬೀಜಗಳ ಇತರ ಪ್ರಯೋಜನಗಳು:
ಮಧುಮೇಹ ರೋಗಿಗಳಿಗೆ ಮಾತ್ರ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಪ್ರಯೋಜನವಾಗುವುದಿಲ್ಲ, ಇದು ಇತರ ಅನೇಕ ರೋಗಗಳಿಗೆ  ಕೂಡಾ ಇದು ರಾಮಬಾಣವಾಗಿದೆ. ಈ ಬೀಜಗಳ ಇತರ ಪ್ರಯೋಜನಗಳನ್ನು ನೋಡೋಣ.

1. ಕುಂಬಳಕಾಯಿ ಬೀಜಗಳು ಸಿರೊಟೋನಿನ್ ಅನ್ನು ಹೊಂದಿರುತ್ತವೆ. ಇದು ನೈಸರ್ಗಿಕ ರಾಸಾಯನಿಕವಾಗಿದೆ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. 
2.  ಕುಂಬಳಕಾಯಿ ಬೀಜಗಳನ್ನು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ತಿನ್ನುವುದರಿಂದ  ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಹೃದಯಾಘಾತದ ಅಪಾಯ  ಕಡಿಮೆಯಾಗುತ್ತದೆ. 
3. ಈ ಬೀಜಗಳಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಇದರೊಂದಿಗೆ ಕೂದಲು ಒಡೆಯುವ ಸಮಸ್ಯೆಯೂ ನಿವಾರಣೆಯಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News