Angaraka Rashi Parivartan 2022: ಜೂನ್ 26 ರಂದು ಅಂಗಾರಕನ ಮೇಷ ರಾಶಿ ಪ್ರವೇಶ, ರಾಹು-ಮಂಗಳರ ಯುತಿಯಿಂದ ರುಚಕ ರಾಜ ಯೋಗ ನಿರ್ಮಾಣ

Mangal Rashi Parivartan 2022- ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ ಜೂನ್ 26, 2022ರ ಭಾನುವಾರ ಬೀಳಲಿದೆ. ಈ ದಿನ 3.35ರ ಗಳಿಕ ಅಂಗಾರಕನ ರಾಶಿ ಪರಿವರ್ತನೆ ನಡೆಯಲಿದೆ. ಮಂಗಳ ದೇವಗುರು ಬೃಹಸ್ಪತಿಯ ರಾಶಿಯಾಗಿರುವ ಮೀನ ರಾಶಿಯನ್ನು ತೊರೆದು ತನ್ನ ಸ್ವಂತ ರಾಶಿಯಾಗಿರುವ ಮೇಷಕ್ಕೆ ಪ್ರವೇಶಿಸಲಿದೆ.   

Written by - Nitin Tabib | Last Updated : Jun 21, 2022, 06:08 PM IST
  • ಜೂನ್ 26 ರಂದು ಮಂಗಳನ ಮೇಷ ರಾಶಿ ಪ್ರವೇಶ
  • ಮೇಷ ರಾಶಿಯಲ್ಲಿ ಮಂಗಳ-ರಾಹುಗಳ ಯುತಿ
  • ಅಂಗಾರಕ ಯೋಗ ಮತ್ತು ರುಚಕ ರಾಜಯೋಗಗಳ ನಿರ್ಮಾಣ
Angaraka Rashi Parivartan 2022: ಜೂನ್ 26 ರಂದು ಅಂಗಾರಕನ ಮೇಷ ರಾಶಿ ಪ್ರವೇಶ, ರಾಹು-ಮಂಗಳರ ಯುತಿಯಿಂದ ರುಚಕ ರಾಜ ಯೋಗ ನಿರ್ಮಾಣ title=
Angaraka Yoga

Mangal Rashi Parivartan 2022- ಆಷಾಢ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ ಜೂನ್ 26, 2022ರ ಭಾನುವಾರ ಬೀಳಲಿದೆ. ಈ ದಿನ 3.35ರ ಗಳಿಕ ಅಂಗಾರಕನ ರಾಶಿ ಪರಿವರ್ತನೆ ನಡೆಯಲಿದೆ. ಮಂಗಳ ದೇವಗುರು ಬೃಹಸ್ಪತಿಯ ರಾಶಿಯಾಗಿರುವ ಮೀನ ರಾಶಿಯನ್ನು ತೊರೆದು ತನ್ನ ಸ್ವಂತ ರಾಶಿಯಾಗಿರುವ ಮೇಷಕ್ಕೆ ಪ್ರವೇಶಿಸಲಿದೆ. ಆಗಸ್ಟ್ 10 ರವರೆಗೆ ಅಂಗಾರಕ ಮೇಷ ರಾಶಿಯಲ್ಲಿಯೇ ಉಳಿಯುವ ಮೂಲಕ ತನ್ನ ಪ್ರಭಾವವನ್ನು ಬೀರಲಿದ್ದಾನೆ. ಈ ಅವಧಿಯಲ್ಲಿ ಮೇಷ ರಾಶಿಯಲ್ಲಿ ಮಂಗಳ ಗ್ರಹ ತನ್ನ ಸಂಪೂರ್ಣ ಪ್ರಭಾವ ಬೀರಲಿದೆ. ಏಕೆಂದರೆ ಯಾವುದೇ ಗ್ರಹವು ತನ್ನದೇ ಆದ ರಾಶಿಚಕ್ರದಲ್ಲಿ ತನ್ನ ಸಂಪೂರ್ಣ ಪ್ರಭಾವವನ್ನು ಬೀರಲು ಶಕ್ತವಾಗಿರುತ್ತದೆ. ಮಂಗಳನ ಒಟ್ಟು ಮೂರು ಸ್ಥಿತಿಗಳು ಅತ್ಯಂತ ಮಹತ್ವಪೂರ್ಣ ಎಂದು ಪರಿಗಣಿಸಲಾಗುತ್ತದೆ. ಮಂಗಳ ತನ್ನ ಸ್ವಂತ ರಾಶಿಯಾಗಿರುವ ಮೇಷದಲ್ಲಿ ಪ್ರವೇಶಿಸಿದಾಗ ಮತ್ತು ವೃಶ್ಚಿಕದಲ್ಲಿ ಗೋಚರಿಸಿದಾಗ. ಎರಡನೆಯದಾಗಿ ಮಂಗಳ ತನ್ನ ನೀಚ ರಾಶಿಯಗಿರುವ ಮಕರ ಮತ್ತು ಉಚ್ಛ ರಾಶಿಯಾಗಿರುವ ಕರ್ಕದಲ್ಲಿ ಗೋಚರಿಸಿದಾಗ. 

ಪ್ರಸ್ತುತ ದೇವಗುರು ಬೃಹಸ್ಪತಿಯ ರಾಶಿಯಲ್ಲಿ ಮಂಗಳ ಮಿತ್ರ ಗ್ರಹದ ರೂಪದಲ್ಲಿ ಗೋಚರಿಸುತ್ತಿದ್ದು, 26 ಜೂನ್ 2022 ರಂದು ತನ್ನ ಸ್ವಂತ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ಈ ರಾಶಿ ಪರಿವರ್ತನೆ ಚರಾಚರ ಜಗತ್ತಿನ ಮೇಲೆ ಭಾರಿ ಪ್ರಭಾವ ಬೀರಲಿದೆ. ಏಕೆಂದರೆ, ಮೇಷ ರಾಶಿಯಲ್ಲಿ ಈಗಾಗಲೇ ರಾಹು ಗೋಚರಿಸುತ್ತಿದೆ. ಹೀಗಿರುವಾಗ ಮೇಷ ರಾಶಿಯಲ್ಲಿ ಮಂಗಳ-ರಾಹುಗಳ ಮಿಶ್ರ ಪರಿಣಾಮಗಳು ನೋಡಲು ಸಿಗಲಿವೆ. ಇದನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಮಂಗಳನ ಈ ರಾಶಿ ಗೋಚರ ಭಾರತ ಸೇರಿದಂದೆ ವಿಶ್ವದ ಮೇಲೆ ಪ್ರಭಾವ ಬೀರಲಿದೆ. ಏಕೆಂದರೆ ಮಂಗಳ ಒಂದು ಅಗ್ನಿ ತತ್ವದ ಗ್ರಹವಾಗಿದ್ದು, ರಾಹುವಿನ ಜೊತೆಗಿನ ಮಂಗಳನ ಒಡನಾಟ, ಮಂಗಳನ ಅಗ್ನಿತತ್ವವನ್ನು ಹೆಚ್ಚಿಸಲಿದೆ. ಹೀಗಿರುವ ಪರಿಸ್ಥಿತಿಯಲ್ಲಿ ಅಗ್ನಿ, ಸೈನ್ಯ, ಸೈನ್ಯ ತಂತ್ರಗಾರಿಕೆ, ಪೋಲೀಸ್ ಫೋರ್ಸ್ ಚಂಡಮಾರುತ, ತೀವ್ರತರವಾದ ಗಾಳಿ, ವಿಮಾನ ಯಾನದ ದುರ್ಘಟನೆಗಳಂತಹ ವಿದ್ಯಮಾನಗಳ ಯೋಗ ನಿರ್ಮಾಣಗೊಳ್ಳುತ್ತಿದೆ. 

ಇದನ್ನೂ ಓದಿ-ಈ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ..!

ಭಾರತೀಯ ದೃಷ್ಟಿಕೋನದಿಂದ ಇದ್ನನ್ನು ವಿಶ್ಲೇಷಿಸುವುದಾದರೆ, ಸ್ವತಂತ್ರ ಭಾರತದ ಕುಂಡಲಿ ವೃಷ ಲಗ್ನ ಕುಂಡಲಿಯಾಗಿದೆ. ಹೀಗಿರುವಾಗ ಮಂಗಳ ಸಪ್ತಮ ಹಾಗೂ ವೆಚ್ಚ ಭಾವದ ಕಾರಕನಾಗಿ ಮೇಷ ರಾಶಿಯ ವೆಚ್ಚದ ಭಾವದಲ್ಲಿ ರಾಹುವಿನ ಜೊತೆಗೆ ಗೋಚರಿಸಲಿದೆ. ಹೀಗಾಗಿ ಭಾರತದ ಪಾಲಿಗೆ ಈ ಪರಿವರ್ತನೆ ಸಕಾರಾತ್ಮಕ ಪರಿವರ್ತನೆಯಾಗಿಲ್ಲ ಎಂದು ಹೇಳಬಹುದು. ಈ ಗೊಚರದ ಪ್ರಭಾವದಿಂದ ಸೈನ್ಯ ತಂತ್ರಗಾಗಿಕೆ. ಪೋಲೀಸ್ ಫೋರ್ಸ್, ಅಗ್ನಿ ಅವಘಡ , ತೀವ್ರತರವಾದ ಗಾಳಿ, ರೈಲು ದುರಂತ, ಚಂಡಮಾರುತದಂತಹ ಘಟನೆಗಳತ್ತ ಇದು ಸಂಕೇತಿಸುತ್ತದೆ. 

ಇದನ್ನೂ ಓದಿ-ಹಾಲಿಗೆ ಒಂದು ಚಿಟಕಿ ಇಂಗು ಹಾಕಿ ಕುಡಿದರೆ ತಕ್ಷಣವೇ ಸಿಗುತ್ತದೆ ಈ ಸಮಸ್ಯೆಗಳಿಂದ ಮುಕ್ತಿ

ಇದರಿಂದ ದೇಶದ ಪೂರ್ವ ಹಾಗೂ ಪೂರ್ವೋತ್ತರ ಭಾಗ ಪ್ರಭಾವಕ್ಕೆ ಒಳಗಾಗಲಿದೆ. ಮಹಿಳೆಯರಿಗೆ ಸಂಬಂಧಿಸಿದ ಅರಿಷ್ಟ ಘಟನೆಗಳ ಸುದ್ದಿಗಳೂ ಕೂಡ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮಂಗಳ ಗ್ರಹ ಸ್ವಗ್ರಹಿಯಾಗಿರುವ ಕಾರಣ ರುಚಕ ರಾಜಯೋಗ ಕೂಡ ನಿರ್ಮಿಸಲಿದೆ. ಇದರ ಪ್ರಭಾವ ಮೇಷ ಲಗ್ನದಿಂದ ಹಿಡಿದು ಮೀನ ಲಗ್ನದವರೆಗೆ ಬೀಳಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News