EPF Account : ಸಂಬಳ ಪಡೆಯುವ ಉದ್ಯೋಗಿಗಳಿಗೆ, ಭವಿಷ್ಯ ನಿಧಿಯ ಹಣವು ಅವರ ಜೀವಿತಾವಧಿಯ ಗಳಿಕೆಯಾಗಿದೆ. ಹೀಗಾಗಿ, ನೀವು EPFO ಗೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಉದ್ಯೋಗದಲ್ಲಿ ಇರುವವರೆಗೆ, ನೀವು ಇಪಿಎಫ್ಗೆ ಕೊಡುಗೆ ನೀಡುತ್ತೀರಿ ಮತ್ತು ನೀವು ನಿವೃತ್ತರಾದಾಗ, ನಿಮ್ಮಗೆ ಇದರಿಂದ ಒಂದು ದೊಡ್ಡ್ ಮೊತ್ತ ನಿಮ್ಮ ಕೈಗೆ ಸಿಗುತ್ತದೆ, ಇದರಿಂದ ನೀವು ಈ ಹಣದ ಆಧಾರದ ಮೇಲೆ ನಿಮ್ಮ ವೃದ್ಧಾಪ್ಯವನ್ನು ಕಳೆಯಬಹುದು. ಆದರೆ ಅನೇಕ ಬಾರಿ ಮಾಹಿತಿಯ ಕೊರತೆ ಅಥವಾ ಕೆಲವು ತಪ್ಪುಗಳಿಂದಾಗಿ ಪಿಎಫ್ ಖಾತೆಯನ್ನು ಬಂದ್ ಮಾಡುತ್ತಾರೆ. ಆದ್ದರಿಂದ, ನೀವು ಅಂತಹ ಯಾವುದೇ ತಪ್ಪನ್ನು ಮಾಡಬಾರದು ಎಂದರೆ ಈ ಮಾಹಿತಿ ತಪ್ಪದೆ ಓದಬೇಕು..
1. ಖಾತೆಯನ್ನು ಬಂದ್ ಮಾಡುವುದು
ನೀವು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಿಂದ ನಿಮ್ಮ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸದಿದ್ದರೆ ಮತ್ತು ಹಳೆಯ ಕಂಪನಿ ಬಂದ್ ಆದರೆ. ಅಥವಾ ನಿಮ್ಮ ಪಿಎಫ್ ಖಾತೆಯಿಂದ 36 ತಿಂಗಳವರೆಗೆ ಯಾವುದೇ ವಹಿವಾಟು ನಡೆಯದಿದ್ದರೆ ನಿಮ್ಮ ಪಿಎಫ್ ಖಾತೆಯನ್ನು ಬಂದ್ ಮಾಡಲಾಗುತ್ತದೆ. EPFO ಅಂತಹ ಖಾತೆಗಳನ್ನು 'Inoperative' ವರ್ಗದಲ್ಲಿ ಇರಿಸುತ್ತದೆ.
ಇದನ್ನೂ ಓದಿ : PM Kisan FPO Yojana: ಕೇಂದ್ರ ಸರ್ಕಾರದ ವತಿಯಿಂದ ರೈತರಿಗೆ 15 ಲಕ್ಷ ರೂ. ಸಹಾಯ ಧನ, ಇಂದೇ ಇದರ ಲಾಭ ಪಡೆದುಕೊಳ್ಳಿ
2. ಅದು ಮತ್ತೆ ಹೇಗೆ ಸಕ್ರಿಯವಾಗಿರುತ್ತದೆ?
ಒಮ್ಮೆ ಖಾತೆಯು 'ನಿಷ್ಕ್ರಿಯ'ಗೊಂಡರೆ ನಿಮಗೆ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು, ನೀವು EPFO ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 'ನಿಷ್ಕ್ರಿಯ'ದ ನಂತರವೂ, ಖಾತೆಯಲ್ಲಿರುವ ಹಣದ ಮೇಲೆ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ, ಅಂದರೆ ನಿಮ್ಮ ಹಣ ಮುಳಗುವುದಿಲ್ಲ, ನೀವು ಅದನ್ನು ಮರಳಿ ಪಡೆಯಬಹುದು. ಈ ಹಿಂದೆ ಈ ಖಾತೆಗಳಿಗೆ ಬಡ್ಡಿ ಲಭ್ಯವಿರಲಿಲ್ಲ. ಆದರೆ, 2016ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಬಡ್ಡಿ ಆರಂಭಿಸಲಾಗಿತ್ತು. ನೀವು 58 ವರ್ಷ ವಯಸ್ಸಿನವರೆಗೆ ನಿಮ್ಮ ಪಿಎಫ್ ಖಾತೆಯಲ್ಲಿ ಬಡ್ಡಿ ಸೇರುತ್ತದೆ ಎಂದು ನೀವು ತಿಳಿದಿರಬೇಕು.
3. ಖಾತೆಯು ಯಾವಾಗ ನಿಷ್ಕ್ರಿಯವಾಗುತ್ತದೆ
ಹೊಸ ನಿಯಮಗಳ ಪ್ರಕಾರ, ಉದ್ಯೋಗಿ ಇಪಿಎಫ್ ಬ್ಯಾಲೆನ್ಸ್ ಹಿಂಪಡೆಯಲು ಅರ್ಜಿ ಸಲ್ಲಿಸದಿದ್ದರೆ, ಇಪಿಎಫ್ ಖಾತೆಯು 'ನಿಷ್ಕ್ರಿಯ' ಆಗುತ್ತದೆ.
A- ನಿವೃತ್ತಿಯ 36 ತಿಂಗಳ ನಂತರವೂ, ಇದರ ನಂತರ ಸದಸ್ಯನಿಗೆ 55 ವರ್ಷ ತುಂಬಿದಾಗ
B- ಸದಸ್ಯರು ಶಾಶ್ವತವಾಗಿ ವಿದೇಶದಲ್ಲಿ ನೆಲೆಸಿದಾಗ
C- ಸದಸ್ಯರು ಸತ್ತರೆ
D- ಸದಸ್ಯರು ಸಂಪೂರ್ಣ ನಿವೃತ್ತಿ ನಿಧಿಯನ್ನು ಹಿಂತೆಗೆದುಕೊಂಡಿದ್ದರೆ
4. 7 ವರ್ಷಗಳವರೆಗೆ ಯಾರೂ ಯಾವುದೇ ಪಿಎಫ್ ಖಾತೆಯನ್ನು ಕ್ಲೈಮ್ ಮಾಡದಿದ್ದರೆ, ಈ ನಿಧಿಯನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ( Senior Citizens’ Welfare Fund) ಹಾಕಲಾಗುತ್ತದೆ.
EPFO ಗೆ ಸಂಬಂಧಿಸಿದ ಸೂಚನೆಗಳು ಯಾವುವು
ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್ಗಳನ್ನು ಇತ್ಯರ್ಥಗೊಳಿಸಲು ಕಾಳಜಿ ವಹಿಸುವುದು ಅಗತ್ಯ ಎಂದು ಇಪಿಎಫ್ಒ ತನ್ನ ಸುತ್ತೋಲೆಯೊಂದರಲ್ಲಿ ಹೇಳಿದೆ. ವಂಚನೆಗೆ ಸಂಬಂಧಿಸಿದ ಅಪಾಯವನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಸರಿಯಾದ ಹಕ್ಕುದಾರರಿಗೆ ಕ್ಲೈಮ್ ಅನ್ನು ಪಾವತಿಸಲಾಗುತ್ತದೆ ಎಂದು ಕಾಳಜಿ ವಹಿಸಬೇಕು.
ನಿಷ್ಕ್ರಿಯ PF ಖಾತೆಗಳನ್ನು ಯಾರು ಪ್ರಮಾಣೀಕರಿಸುತ್ತಾರೆ
ನಿಷ್ಕ್ರಿಯ PF ಖಾತೆಗಳಿಗೆ ಸಂಬಂಧಿಸಿದ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲು, ಉದ್ಯೋಗಿಯ ಉದ್ಯೋಗದಾತನು ಆ ಕ್ಲೈಮ್ ಅನ್ನು ಪ್ರಮಾಣೀಕರಿಸುವುದು ಅವಶ್ಯಕ. ಆದಾಗ್ಯೂ, ಕಂಪನಿಯು ಮುಚ್ಚಲ್ಪಟ್ಟಿರುವ ಉದ್ಯೋಗಿಗಳು ಮತ್ತು ಕ್ಲೈಮ್ ಅನ್ನು ಪ್ರಮಾಣೀಕರಿಸಲು ಯಾರೂ ಇಲ್ಲದಿದ್ದರೆ, ನಂತರ ಬ್ಯಾಂಕ್ KYC ದಾಖಲೆಗಳ ಆಧಾರದ ಮೇಲೆ ಅಂತಹ ಕ್ಲೈಮ್ ಅನ್ನು ಪ್ರಮಾಣೀಕರಿಸುತ್ತದೆ.
ಯಾವ ದಾಖಲೆಗಳು ಬೇಕಾಗುತ್ತವೆ
KYC ದಾಖಲೆಗಳಲ್ಲಿ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ರೇಷನ್ ಕಾರ್ಡ್, ಇಎಸ್ಐ ಐಡಿ ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ ಸೇರಿವೆ. ಇದಲ್ಲದೇ ಆಧಾರ್ ನಂತಹ ಸರ್ಕಾರ ನೀಡುವ ಇತರೆ ಯಾವುದೇ ಗುರುತಿನ ಚೀಟಿಯನ್ನು ಸಹ ಇದಕ್ಕಾಗಿ ಬಳಸಬಹುದು. ಇದರ ನಂತರ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಅಥವಾ ಇತರ ಅಧಿಕಾರಿಗಳು ಮೊತ್ತಕ್ಕೆ ಅನುಗುಣವಾಗಿ ಖಾತೆಗಳಿಂದ ಹಿಂಪಡೆಯಲು ಅಥವಾ ಖಾತೆ ವರ್ಗಾವಣೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಈಗ ವೇತನ ಆಯೋಗದ ಆಧಾರದ ಮೇಲೆ ಹೆಚ್ಚಾಗುವುದಿಲ್ಲ ನಿಮ್ಮ ಸಂಬಳ!
ಯಾರ ಅನುಮೋದನೆಯೊಂದಿಗೆ ಹಣ ಸ್ವೀಕರಿಸಲಾಗುತ್ತದೆ
ಮೊತ್ತವು 50 ಸಾವಿರ ರೂಪಾಯಿ ಮೀರಿದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರ ಅನುಮೋದನೆಯ ನಂತರ ಹಣವನ್ನು ಹಿಂಪಡೆಯಲಾಗುತ್ತದೆ ಅಥವಾ ವರ್ಗಾಯಿಸಲಾಗುತ್ತದೆ. ಅದೇ ರೀತಿ, ಮೊತ್ತವು 25 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಮತ್ತು 50 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಖಾತೆ ಅಧಿಕಾರಿಯು ನಿಧಿ ವರ್ಗಾವಣೆ ಅಥವಾ ಹಿಂಪಡೆಯುವಿಕೆಯನ್ನು ಅನುಮೋದಿಸಲು ಸಾಧ್ಯವಾಗುತ್ತದೆ. ಮೊತ್ತವು 25 ಸಾವಿರ ರೂಪಾಯಿಗಿಂತ ಕಡಿಮೆಯಿದ್ದರೆ, ಡೀಲಿಂಗ್ ಸಹಾಯಕರು ಅದನ್ನು ಅನುಮೋದಿಸಲು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.