NEET 2022 ಪರೀಕ್ಷೆ ದಿನಾಂಕ ಪ್ರಕಟ: ಶೀಘ್ರದಲ್ಲೇ ಈ ವೈಬ್‌ಸೈಟ್‌ನಲ್ಲಿ ಸಿಗಲಿದೆ ಹಾಲ್‌ ಟಿಕೆಟ್‌

ಇನ್ನು ವರದಿಗಳ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2022ರ ಆಕಾಂಕ್ಷಿಗಳಿಗೆ ಪ್ರವೇಶ ಕಾರ್ಡ್‌ಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ವೆಬ್‌ಸೈಟ್‌ nbe.edu.in.ನಲ್ಲಿ ಸಿಗಲಿದೆ. 

Written by - Bhavishya Shetty | Last Updated : May 10, 2022, 11:18 AM IST
  • NEET 2022 ಪರೀಕ್ಷೆ ದಿನಾಂಕ ಪ್ರಕಟವಾಗಿದೆ
  • nbe.edu.in. ವೆಬ್‌ಸೈಟ್‌ನಲ್ಲಿ ಹಾಲ್‌ಟಿಕೆಟ್‌ ಲಭ್ಯ
  • ಮೇ 21ರಂದು ನಡೆಯಲಿರುವ ಪರೀಕ್ಷೆ
 NEET 2022 ಪರೀಕ್ಷೆ ದಿನಾಂಕ ಪ್ರಕಟ: ಶೀಘ್ರದಲ್ಲೇ ಈ ವೈಬ್‌ಸೈಟ್‌ನಲ್ಲಿ ಸಿಗಲಿದೆ ಹಾಲ್‌ ಟಿಕೆಟ್‌ title=
NEET PG

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಸ್ನಾತಕೋತ್ತರವನ್ನು ಮೇ 21ರಂದು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಆದರೆ ಈ ಮಧ್ಯೆ ಜುಲೈ 9ರಂದು ಪರೀಕ್ಷೆ ನಡೆಸಲಾಗುವುದು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದರೆ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಸಹ ಸರ್ಕಾರದಿಂದ ಯಾವುದೇ ಪ್ರಕಟಣೆ ಬಂದಿಲ್ಲ. 

ಇದನ್ನು ಓದಿ: ರಾತ್ರಿ ಸಾವು ಬೆಳಗ್ಗೆ ವ್ಯಕ್ತಿಗೆ ಮರುಜೀವ... ಶವ ಮೇಲಕ್ಕೆ ಎಸೆಯುವ ಭಕ್ತ ಸಮೂಹ..!

ಇನ್ನು ವರದಿಗಳ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2022ರ ಆಕಾಂಕ್ಷಿಗಳಿಗೆ ಪ್ರವೇಶ ಕಾರ್ಡ್‌ಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ವೆಬ್‌ಸೈಟ್‌ nbe.edu.in.ನಲ್ಲಿ ಸಿಗಲಿದೆ. ಆದರೆ ಹಾಲ್ ಟಿಕೆಟ್‌ಗಳ ಬಿಡುಗಡೆಯ ದಿನಾಂಕದ ಕುರಿತು ಯಾವುದೇ ಅಧಿಕೃತ ಅಪ್‌ಡೇಟ್‌ಗಳು ಇಲ್ಲದಿದ್ದರೂ ಮೇ 16 ಅಥವಾ 17 ರೊಳಗೆ ಹೊರಬರುವ ಸಾಧ್ಯತೆಯಿದೆ. 

ಪರೀಕ್ಷೆಗಳು ಮೇ 21 ರಂದು ನಡೆಯಲಿದ್ದು, ಆ ದಿನಾಂಕಕ್ಕಿಂತ ಕನಿಷ್ಟ 4 ರಿಂದ 5 ದಿನಗಳ ಮುಂಚಿತವಾಗಿ ಹಾಲ್‌ಟಿಕೆಟ್‌ ಲಭ್ಯವಾಗಲಿದೆ. ಆಕಾಂಕ್ಷಿಗಳು ಅವುಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇನ್ನು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಮಾರ್ಗಸೂಚಿಗಳ ಪ್ರಕಾರ ಪ್ರವೇಶ ಕಾರ್ಡ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. 

NEET PG 2022ರ ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಪ್ರತಿಭಟನೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ 15,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ #PostponeNEETPG2022 ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. 

ಇದನ್ನು ಓದಿ: ಶ್ರೀಲಂಕಾದಲ್ಲಿ ಗುಂಡು ಹಾರಿಸಿಕೊಂಡು ಸಂಸದ ಆತ್ಮಹತ್ಯೆ: ಕಾರಣ ಏನು ಗೊತ್ತಾ?

NEET PG 2021 ಕೌನ್ಸೆಲಿಂಗ್ ಮತ್ತು NEET PG 2022 ಪ್ರವೇಶ ಪರೀಕ್ಷೆಯ ನಡುವಿನ ಅಂತರವು ತುಂಬಾ ಕಡಿಮೆಯಿದೆ ಎಂಬುದು ಪ್ರತಿಭಟನಾಕಾರರ ಆರೋಪ. ಈ ಹಿನ್ನೆಲೆಯಲ್ಲಿ ಪರೀಕ್ಷೆ ದಿನಾಂಕವನ್ನು ಮುಂದೂಡಿ ಎಂದು ಒತ್ತಾಯಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News