COVID Teeth: ಕರೋನಾದ ನಾಲ್ಕನೇ ಅಲೆಯಲ್ಲಿ ಹಲ್ಲುಗಳಿಗೆ ಅಪಾಯ! ಈ 6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಕರೋನಾದ ನಾಲ್ಕನೇ ಅಲೆಯು ಇತರ ಪ್ರಮುಖ ದೇಶಗಳಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

Written by - Ranjitha R K | Last Updated : Apr 1, 2022, 10:37 AM IST
  • ಕೋವಿಡ್-19 ರ ನಾಲ್ಕನೇ ಅಲೆ
  • ಭಾರತದಲ್ಲಿ ಯಾವಾಗ ಕಾಣಿಸಿಕೊಳ್ಳಲಿದೆ ?
  • ಹಲ್ಲುಗಳಿಗೆ ದೊಡ್ಡ ಅಪಾಯವಾಗಲಿದೆ ಇದು
COVID Teeth: ಕರೋನಾದ ನಾಲ್ಕನೇ ಅಲೆಯಲ್ಲಿ ಹಲ್ಲುಗಳಿಗೆ ಅಪಾಯ! ಈ  6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ title=
COVID Teeth (file photo)

ಬೆಂಗಳೂರು : ಕೋವಿಡ್-19 (COVID-19) ಮೂರನೇ ಅಲೆಯ ನಂತರ ಕರೋನಾ ಅಧ್ಯಾಯ ಮುಗಿದೇ ಹೋಯಿತು ಎಂದು ಭಾವಿಸಲಾಗಿತ್ತು. ಆದರೆ ಈಗ ಮತ್ತೆ ವಿಶ್ವದ ಕೆಲವೆಡೆ  ಕೊರೊನಾವೈರಸ್ (Coronavirus) ಹೊಸ ರೂಪಾಂತರ ಕಾಣಿಸಿಕೊಂಡಿದೆ.  ಯುರೋಪ್ ಮತ್ತು ಏಷ್ಯಾದ ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕರೋನಾದ ನಾಲ್ಕನೇ ಅಲೆಯು ಇತರ ಪ್ರಮುಖ ದೇಶಗಳಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ನಿಮ್ಮ ಹಲ್ಲುಗಳನ್ನು ಕರೋನಾದಿಂದ ರಕ್ಷಿಸಿ :
ಕೊರೊನಾವೈರಸ್ (Coronavirus)  ಪ್ರಾಥಮಿಕವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವ ಉಸಿರಾಟದ ಕಾಯಿಲೆಯಾಗಿದೆ. ತೀವ್ರ ಜ್ವರ, ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ.  ಆದರೆ ಈಗ ಈ ವೈರಸ್ ದೇಹದ ಇತರ ಭಾಗಗಳಿಗೂ ಹಾನಿಯನ್ನುಂಟುಮಾಡುತ್ತಿದೆ. ಕೋವಿಡ್ -19 ಹಲ್ಲು ಮತ್ತು ಒಸಡುಗಳಿಗೆ ಹಾನಿಯನ್ನುಂಟುಮಾಡುತ್ತಿದೆ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ.  ಈ ಕಾರಣದಿಂದಲೇ ಇದಕ್ಕೆ ಕೋವಿಡ್ ಟೀತ್' (COVID Teeth) ಎಂದು ಹೆಸರಿಸಲಾಗುತ್ತಿದೆ. 

ಇದನ್ನೂ ಓದಿ : Mamata Banerjee : ಬಿಜೆಪಿಯ ಈ ಧೋರಣೆಯನ್ನು ನಾನು ಖಂಡಿಸುತ್ತೇನೆ : ಮಮತಾ ಬ್ಯಾನರ್ಜಿ

ಹಲ್ಲುಗಳೊಂದಿಗೆ ಕೋವಿಡ್ ಸಂಬಂಧ :
ಕೊರೊನಾವೈರಸ್ ರೋಗಲಕ್ಷಣಗಳು ಮತ್ತು ಹಲ್ಲಿನ ಆರೋಗ್ಯದ ನಡುವೆ ಬಲವಾದ ಸಂಬಂಧವಿದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಕೋವಿಡ್ -19 ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕರೋನಾದಿಂದ ಬಳಲುತ್ತಿರುವ ಶೇಕಡಾ 75 ರಷ್ಟು ರೋಗಿಗಳಲ್ಲಿ ಹಲ್ಲಿನ ಸಮಸ್ಯೆಗಳು ಕಂಡುಬಂದಿವೆ (COVID Teeth Signs).
 
ಹಲ್ಲುಗಳಿಗೆ ಸಂಬಂಧಿಸಿದ ಕರೋನಾ ಎಚ್ಚರಿಕೆ ಚಿಹ್ನೆ:
ಈ ವೈರಸ್ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಕೊರೊನಾವೈರಸ್‌ನ ಕೆಲವು ಲಕ್ಷಣಗಳು ಬಾಯಿಯಲ್ಲಿಯೂ ಕಂಡುಬರುತ್ತವೆ. ಅಂತಹ ಚಿಹ್ನೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕೋವಿಡ್ -19 ಪರೀಕ್ಷೆಯನ್ನು ಮಾಡಿಕೊಳ್ಳಿ (COVID-19 Test). ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ಎಚ್ಚರ ವಹಿಸಿ .

1. ಒಸಡುಗಳಲ್ಲಿ ನೋವು 
2. ದವಡೆ ಅಥವಾ ಹಲ್ಲಿನಲ್ಲಿ ನೋವು
3. ಒಸಡುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ
4. ಜ್ವರ
5. ಕೆಮ್ಮು
6. ಆಯಾಸ

ಇದನ್ನೂ ಓದಿ :  ನೀವು NPS ಖಾತೆ ತೆರೆಯಬೇಕೆ? ಹಾಗಿದ್ರೆ, ಇಲ್ಲಿದೆ ನೋಡಿ

ಕೋವಿಡ್ ಹಲ್ಲುಗಳಿಗೆ ಚಿಕಿತ್ಸೆ ಏನು?
ಹಲ್ಲು ಅಥವಾ ವಸಡು ನೋವು ಯಾರಿಗೆ ಕಾಣಿಸಿಕೊಂಡರೂ  ದಿನಚರಿಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ನೋವು ನಿವಾರಣೆಗಾಗಿ, ಅಸೆಟಾಮಿನೋಫೆನ್ ಬದಲಿಗೆ 400 ಮಿಗ್ರಾಂ ಐಬುಪ್ರೊಫೇನ್ ಅನ್ನು ತೆಗೆದುಕೊಳ್ಳುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ, ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ.

 

( ಸೂಚನೆ : ಈ ಮಾಹಿತಿಯ ನಿಖರತೆ, ಸಮಯೋಚಿತತೆ ಮತ್ತು ನೈಜತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಆದರೂ ಇದರ ನೈತಿಕ ಹೊಣೆಗಾರಿಕೆ  Zee News ನದ್ದಲ್ಲ. ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಮ್ಮ ಉದ್ದೇಶ ನಿಮಗೆ ಮಾಹಿತಿಯನ್ನು ಒದಗಿಸುವುದು ಮಾತ್ರ .)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News