‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’

ಸಿದ್ದರಾಮಯ್ಯನವರೇ ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Mar 31, 2022, 04:22 PM IST
  • ಇವಿಎಂ ಹ್ಯಾಕ್ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು
  • ಚುನಾವಣೆಗೆ ವರ್ಷವಿರುವಾಗಲೇ ಸಿದ್ದರಾಮಯ್ಯನವರು ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ
  • ಸಿದ್ದರಾಮಯ್ಯಗೆ ಸಿಎಂ ಆಗಿದ್ದಾಗಲೇ ಸೋತ ಭಯ, ಇಂದು ವಿಪಕ್ಷ ನಾಯಕನಾಗಿರುವಾಗಲೂ ಕಾಡುತ್ತಿದೆ
 ‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’  title=
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ಇವಿಎಂ ಸಹ ಮಾನವ ನಿಯಂತ್ರಿತ ಯಂತ್ರ(Man Handle Machine)ವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ ಎಂಬ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಗೆ ಬಿಜೆಪಿ ಗುರುವಾರ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ #ಜನವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಕಿಡಿಕಾರಿದೆ. ‘ಸಿದ್ದರಾಮಯ್ಯ(Siddaramaiah)ಅವರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಸೋತ ಭಯ, ಇಂದು ವಿಪಕ್ಷ ನಾಯಕನಾಗಿರುವಾಗಲೂ ಕಾಡುತ್ತಿದೆ. ಚುನಾವಣೆಗೆ ವರ್ಷವಿರುವಾಗಲೇ ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: CM Ibrahim: ಯುಗಾದಿ ಬಳಿಕ ದೊಡ್ಡ ಮಟ್ಟದ ರಾಜಕೀಯ ಪ್ರವಾಹ : ಸಿಎಂ ಇಬ್ರಾಹಿಂ ಭವಿಷ್ಯ

10 ವೋಟ್‌ಗಳಲ್ಲಿ 7 ಬಿಜೆಪಿಗೆ, 3 ಕಾಂಗ್ರೆಸ್‌ಗೆ ಬಂತು!

ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ಇವಿಎಂ ಸಹ ಮಾನವ ನಿಯಂತ್ರಿತ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು(EVM Hacking) ಅನ್ನಿಸುತ್ತದೆ. ಇವಿಎಂ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲ ಚುನಾವಣಾ ಆಯೋಗ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದ್ದರು.

‘ನನ್ನ ಬಳಿಯೂ ಒಬ್ಬ ವ್ಯಕ್ತಿ ಬಂದು ತೋರಿಸಿದ. ಹಾಕಿದ 10 ಮತಗಳಲ್ಲಿ 7 ಬಿಜೆಪಿಗೆ, 3 ಕಾಂಗ್ರೆಸ್‌ಗೆ ಬಂತು. ಈ ವಿಚಾರ ನನಗೂ ಆಶ್ಚರ್ಯವಾಯಿತು. ಆದರೆ ನಾನು ತಜ್ಞನಲ್ಲ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇವಿಎಂ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ. ಇದೇ ಕಾರಣಕ್ಕೆ ಜರ್ಮನಿಯಲ್ಲಿ ಇವಿಎಂ ಬ್ಯಾನ್(EVM Ban) ಮಾಡಿ ಬ್ಯಾಲೆಟ್ ಪೇಪರ್ ಮಾದರಿಯ ಚುನಾವಣೆ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ರಾಷ್ಟ್ರದಲ್ಲಿ ವ್ಯಕ್ತವಾಗುತ್ತಿರುವ ಅನುಮಾನಗಳಿಗೆ ಚುನಾವಣಾ ಆಯೋಗ ಉತ್ತರ ಕೊಡಬೇಕು. ಅನುಮಾನ ಬಗೆಹರಿಸುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಿದರೆ ಒಬಿಸಿ ಸಮುದಾಯಕ್ಕೆ ಅನ್ಯಾಯ : ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News