ತೆರೆಗೆ ಬರಲು ರೆಡಿಯಾದ ''ಕಡಲೂರ ಕಣ್ಮಣಿ''!

Kadalur Kanmani: ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ "ಕಡಲೂರ ಕಣ್ಮಣಿ" ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕೊಳ ಶೈಲೇಶ್ ಆರ್ ಪೂಜಾರಿ,  ಬಸವರಾಜ್ ಗಚ್ಚಿ ನಿರ್ಮಾಣದ ಈ ಚಿತ್ರಕ್ಕೆ ವಿನೋದ್ ರಾಮ್, ಹೊಳೆನರಸಿಪುರ ಮತ್ತು ಮಹೇಶ್ ಕುಮಾರ್ ಎಂ ಅವರ ಸಹ ನಿರ್ಮಾಣವಿದೆ.  ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.                        

Written by - Savita M B | Last Updated : Jul 4, 2024, 10:40 PM IST
  • ನಾಯಕನಾಗಿ ಶಿರಸಿ ಮೂಲದ ಅರ್ಜುನ್‌ ನಗರ್ಕರ್‌ "ಕಡಲೂರ ಕಣ್ಮಣಿ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
  • ಈ ಮನಮೋಹಕ ಪ್ರಾಕೃತಿಕ ಸ್ಥಳಗಳನ್ನು ಮನೋಹರ್, ರವಿರಾಮ್ ಸುಂದರವಾಗಿ ಚಿತ್ರೀಕರಿಸಿದ್ದಾರೆ.
 ತೆರೆಗೆ ಬರಲು ರೆಡಿಯಾದ ''ಕಡಲೂರ ಕಣ್ಮಣಿ''! title=

ನಾಯಕನಾಗಿ ಶಿರಸಿ ಮೂಲದ ಅರ್ಜುನ್‌ ನಗರ್ಕರ್‌ "ಕಡಲೂರ ಕಣ್ಮಣಿ"  ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿಶಾ ಯಾಲಿನಿ ನಾಯಕಿಯಾಗಿ ನಟಿಸಿದ್ದು. ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಪಿ, ಮಂಗಳೂರು  ಹೊನ್ನಾವರ, ಮಂಕಿ, ಮುರುಡೇಶ್ವರದ ಸುತ್ತಮುತ್ತಲ್ಲಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ‌.

 ಈ ಮನಮೋಹಕ ಪ್ರಾಕೃತಿಕ ಸ್ಥಳಗಳನ್ನು ಮನೋಹರ್, ರವಿರಾಮ್ ಸುಂದರವಾಗಿ ಚಿತ್ರೀಕರಿಸಿದ್ದಾರೆ. 'ಕಡಲೂರ ಕಣ್ಮಣಿ' ಚಿತ್ರಕ್ಕೆ ನಿರ್ದೇಶಕರಾದ ರಾಮ್ ಪ್ರಸಾದ್ ಅವರು ಹಲವು ವಿಭಾಗಗಳಲ್ಲಿ ಕೆಲಸ  ಮಾಡಿದ್ದಾರೆ. 

'ಕಡಲೂರ ಕಣ್ಮಣಿ’ ಅಂದರೆ ವಜ್ರ ಎಂದೂ ಅರ್ಥ. ಚಿತ್ರಕಥೆ ಯುವ ಮನಸುಗಳ ಪ್ರೀತಿ ಪ್ರೇಮದ ಮೇಲೆ ಸಾಗುತ್ತದೆ. ಸಿಟಿಯ ಹುಡುಗ ಕಡಲ ತೀರದ ಹುಡುಗಿಯ ಪ್ರೇಮ ಕಥೆಯೇ  'ಕಡಲೂರ ಕಣ್ಮಣಿ'.ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಚಿತ್ರದ ಕಲಾವಿದರು ತುಂಬಾ  ಚಂದವಾಗಿ ನಟಿಸಿದ್ದಾರೆ.ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಸಂಕಲನ ಕಾರ್ಯದಲ್ಲಿ ನಿಶಿತ್ ಪೂಜಾರಿ ತಮ್ಮ ಕೈಚಳಕ ತೋರಿಸಿದ್ದಾರೆ.

ಬಂಡೆ ಚಂದ್ರು ರವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿವೆ.'ಕಡಲೂರ ಕಣ್ಮಣಿ' ಚಿತ್ರವನ್ನು ಡಿಎಸ್‌ಕೆ ಸಿನಿಮಾಸ್ ಸಂಸ್ಥೆಯ Dr ಸುನೀಲ್ ಕುಂಬಾರ್ ರವರು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಪ್ರಸಾದ್ ಹುಣಸೂರ ತಿಳಿಸಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News