ನವದೆಹಲಿ : ನೀವು ಅಧಿಕ ರಕ್ತದೊತ್ತಡ (high Blood Pressure) ಸಮಸ್ಯೆಯಿಂದ ಬಳಲುತ್ತಿದ್ದರೆ, ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ರೋಗವು ಹೆಚ್ಚಾಗಬಹುದು ಮತ್ತು ಹೃದ್ರೋಗದ ಅಪಾಯವೂ ಕಾಣಿಸಿಕೊಳ್ಳಬಹುದು. ಭಾರತದಲ್ಲಿನ ಜನಸಂಖ್ಯೆಯ ಹೆಚ್ಚಿನ ಭಾಗವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದೆ. ಇದನ್ನು ಸೂಕ್ತ ಸಮಯಕ್ಕೆ ನಿಯಂತ್ರಿಸದಿದ್ದರೆ, ಪಾರ್ಶ್ವವಾಯು ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡ ರೋಗಿಗಳು ಈ ಐದು ಆಹಾರ ವಸ್ತುಗಳಿಂದ ದೂರವಿರಬೇಕು.
ಅಧಿಕ ಉಪ್ಪು ಮತ್ತು ಸೋಡಿಯಂ ಹೊಂದಿರುವ ಆಹಾರಗಳು :
ಸೋಡಿಯಂ ರಕ್ತದೊತ್ತಡವನ್ನು (Blood pressure) ಹೆಚ್ಚಿಸಲು ಮತ್ತು ಹೃದ್ರೋಗದ ಅಪಾಯಕ್ಕೆ ಕಾರಣವಾಗಿದೆ. ಇದು ರಕ್ತದಲ್ಲಿನ ದ್ರವ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ನಾವು ದಿನನಿತ್ಯ ಬಳಸುವ ಬಿಳಿ ಉಪ್ಪಿನಲ್ಲಿ ಶೇಕಡಾ 40ರಷ್ಟು ಸೋಡಿಯಂ ಇರುತ್ತದೆ. ಆದ್ದರಿಂದ, ಉಪ್ಪು ಮತ್ತು ಸೋಡಿಯಂ ಪ್ರಮಾಣವು ಅಧಿಕವಾಗಿರುವ ಆಹಾರವನ್ನು ಅಧಿಕ ರಕ್ತದೊತ್ತಡ (High blood pressure)ರೋಗಿಗಳು ಸೇವಿಸಬಾರದು. ಚಿಪ್ಸ್, ಪಿಜ್ಜಾ, ಸ್ಯಾಂಡ್ವಿಚ್ಗಳು, ಬ್ರೆಡ್ ಮತ್ತು ರೋಲ್ಸ್, ಸಂಸ್ಕರಿಸಿದ ಮತ್ತು ಘನೀಕೃತ ಆಹಾರ ಇತ್ಯಾದಿಗಳಿಂದ ಅಂತರ ಕಾಯ್ದುಕೊಳ್ಳಬೇಕು.
ಇದನ್ನೂ ಓದಿ : ಎಚ್ಚರ ..! ಹೆಚ್ಚು ನಿದ್ದೆ ಮಾಡಿದರೂ ಎದುರಾಗುತ್ತದೆ ಈ ಸಮಸ್ಯೆಗಳು
ಚೀಸ್ :
ಚೀಸ್ (Cheese)ಹಾಲಿನ ಉತ್ಪನ್ನವಾಗಿರಬಹುದು. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ. ಆದರೆ ಅದರಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಾಗಿರುತ್ತ ದೆ. ಕೇವಲ 2 ಸ್ಲೈಸ್ ಚೀಸ್ನಲ್ಲಿ 512 ಮಿಲಿಗ್ರಾಂಗಳಷ್ಟು ಸೋಡಿಯಂ ಕಂಡುಬರುತ್ತದೆ. ಜೊತೆಗೆ, ಇದು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದ, ಚೀಸ್ ತಿನ್ನುವುದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ಹೆಚ್ಚಿಸುತ್ತದೆ.
ಉಪ್ಪಿನಕಾಯಿ :
ದೀರ್ಘಕಾಲದವರೆಗೆ ಸಂರಕ್ಷಿಸಬೇಕಾದ ಯಾವುದೇ ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ಬಳಸಲಾಗುತ್ತದೆ. ಇದನ್ನು ಮಾಡುವುದರಿಂದ, ಈ ಆಹಾರವು ದೀರ್ಘಕಾಲದವರೆಗೆ ತಿನ್ನಲು ಯೋಗ್ಯವಾಗಿರುತ್ತದೆ. ಉಪ್ಪಿನಕಾಯಿಯಲ್ಲಿರುವ (Pickles)ತರಕಾರಿಗಳು ಮಸಾಲೆ ಮತ್ತು ದ್ರವದೊಂದಿಗೆ ಹೆಚ್ಚು ಕಾಲ ಉಳಿಯುತ್ತವೆ. ಆದರೆ , ಅವುಗಳಲ್ಲಿ ಸೋಡಿಯಂ ಅಂಶವು ಹೆಚ್ಚಾಗಿರುತ್ತದೆ.
ಇದನ್ನೂ ಓದಿ : Ovarian Cancer: ಈ ಸಣ್ಣ ರೋಗಲಕ್ಷಣಗಳನ್ನು ಎಂದೂ ಸಹ ನಿರ್ಲಕ್ಷಿಸಬೇಡಿ, ಅದು ಕ್ಯಾನ್ಸರ್ ಆಗಿರಬಹುದು!
ಸಿಹಿ ತಿನಿಸು :
ಉಪ್ಪು (Salt) ಮಾತ್ರವಲ್ಲ, ಸಕ್ಕರೆಯೂ ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಸಕ್ಕರೆಯ ಅತಿಯಾದ ಬಳಕೆ, ವಿಶೇಷವಾಗಿ ಸಿಹಿಯಾದ ಪಾನೀಯಗಳು ಬೊಜ್ಜು ಹೆಚ್ಚಿಸುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅಮೇರಿಕನ್ ಹೆಲ್ತ್ ಅಸೋಸಿಯೇಷನ್ ಮಹಿಳೆಯರು 25 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಮತ್ತು ಪುರುಷರು ದಿನಕ್ಕೆ 36 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಎಂದು ಶಿಫಾರಸು ಮಾಡುತ್ತದೆ.
ಮದ್ಯಪಾನ :
ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದ ರಕ್ತದೊತ್ತಡವೂ ಹೆಚ್ಚಾಗುತ್ತದೆ. ನೀವು ಈಗಾಗಲೇ ರಕ್ತದೊತ್ತಡದ ರೋಗಿಯಾಗಿದ್ದರೆ, ವೈದ್ಯರ ಅನುಮತಿ ಇಲ್ಲದೆ, ಆಲ್ಕೊಹಾಲ್ (Alcohol)ಸೇವಿಸಬೇಡಿ. ಅಧಿಕ ರಕ್ತದೊತ್ತಡ ರೋಗಿಗಳು ಮದ್ಯ ಸೇವಿಸಿದರೆ ಅವರ ರಕ್ತದೊತ್ತಡದ ಔಷಧದ ಪರಿಣಾಮವೂ ಕಡಿಮೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ