Shaheen shah Afridi: 4,6,6,6 ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬ್ಯಾಟಿಂಗ್.. ಇಲ್ಲಿದೆ ವಿಡಿಯೋ

Shaheen shah Afridi: ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಅಪಾಯಕಾರಿ ಬ್ಯಾಟಿಂಗ್ ಈಗ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕಂಡುಬಂದಿದೆ.

Written by - Chetana Devarmani | Last Updated : Feb 22, 2022, 01:50 PM IST
  • ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬ್ಯಾಟಿಂಗ್
  • ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕಂಡುಬಂದಿದೆ
  • ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ
Shaheen shah Afridi: 4,6,6,6 ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬ್ಯಾಟಿಂಗ್.. ಇಲ್ಲಿದೆ ವಿಡಿಯೋ   title=
ಶಾಹೀನ್ ಶಾ ಆಫ್ರಿದಿ

ನವದೆಹಲಿ: ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಆಫ್ರಿದಿ (Shaheen shah Afridi) ಸ್ಫೋಟಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರ ಯಾರ್ಕರ್ ಎಸೆತಗಳನ್ನು ಆಡುವುದು ಯಾರಿಗೂ ಸುಲಭವಲ್ಲ. ಅವರು ತಮ್ಮ ಬೌಲಿಂಗ್‌ನಿಂದ ಪಾಕಿಸ್ತಾನ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವಿಭಿನ್ನ ನೋಟ ಕಂಡುಬಂದಿದೆ. 

ಇದನ್ನೂ ಓದಿ: Ishant Sharma : ಅಂತ್ಯದಲ್ಲಿದೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ವೃತ್ತಿಜೀವನ!

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (Pakistan Super League) ಪೇಶಾವರ್ ಝಲ್ಮಿ ವಿರುದ್ಧ ಆಡುವಾಗ, ಅವರು ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದರು. ಇದರಿಂದಾಗಿ ಅವರು ಪಂದ್ಯವನ್ನು ಸೂಪರ್ ಓವರ್‌ಗೆ ಕೊಂಡೊಯ್ಯಲು ಸಾಧ್ಯವಾಯಿತು. 

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ಮತ್ತು ಲಾಹೋರ್ ಖಲಂದರ್ ನಡುವಿನ ಪಂದ್ಯ ನಡೆಯಿತು. ಕೊನೆಯ ಓವರ್‌ನಲ್ಲಿ ಲಾಹೋರ್ ತಂಡದ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ಲಾಹೋರ್ ನಾಯಕ ಶಾಹೀನ್ ಆಫ್ರಿದಿ ಮತ್ತು ಫವಾದ್ ಅಹ್ಮದ್ ಕ್ರೀಸ್‌ನಲ್ಲಿದ್ದರು. ಚೆಂಡು ಪೇಶಾವರದ ಮೊಹಮ್ಮದ್ ಉಮರ್ ಕೈಯಲ್ಲಿತ್ತು. ಉಮರ್ ಮೊದಲ ಎಸೆತವನ್ನು ವೈಡ್ ಬೌಲ್ (Wide Ball) ಮಾಡಿದರು. ಅವರ ನಂತರ, ಶಾಹೀನ್ ಆಫ್ರಿದಿ ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸರ್ ಮತ್ತು ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಬ್ಯಾಟ್‌ನೊಂದಿಗೆ ಅಮೋಘ ಆಟ ಪ್ರದರ್ಶಿಸಿದರು.

 

 

ಗೆಲುವಿಗೆ 3 ಎಸೆತಗಳಲ್ಲಿ 7 ರನ್ ಅಗತ್ಯವಿತ್ತು. ಆದರೆ ಪೇಶಾವರದ ಬೌಲರ್ ಉಮರ್ ಮುಂದಿನ ಎರಡು ಎಸೆತಗಳಲ್ಲಿ ಡಾಟ್ ಬಾಲ್ ಎಸೆಯುವ ಮೂಲಕ ಪಂದ್ಯದಲ್ಲಿ ರೋಚಕತೆಯನ್ನು ಸೃಷ್ಟಿಸಿದರು. ಕೊನೆಯ ಎಸೆತದಲ್ಲಿ ಶಾಹೀನ್ ಅಫ್ರಿದಿ ದೀರ್ಘ ಸಿಕ್ಸರ್ ಬಾರಿಸಿದರು ಮತ್ತು ಪಂದ್ಯ ಸೂಪರ್ ಓವರ್‌ಗೆ ಹೋಯಿತು. 

ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ತಂಡ ಸೂಪರ್ ಓವರ್‌ನಲ್ಲಿ (Super Over) ಕೇವಲ ಐದು ರನ್ ಗಳಿಸಿತು. ಪೇಶಾವರ ಬೌಲರ್ ವಹಾಬ್ ರಿಯಾಜ್ ಮಾರಕ ಬೌಲಿಂಗ್ ಮಾಡಿದರು. ಲಾಹೋರ್‌ನ ಬ್ಯಾಟ್ಸ್‌ಮನ್‌ಗಳು ಅವರ ಎಸೆತಗಳ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ನಂತರ ಪೇಶಾವರದ ಅನುಭವಿ ಬ್ಯಾಟ್ಸ್‌ಮನ್ ಮತ್ತು ಟಿ20 ವಿಶ್ವ ಸ್ಟಾರ್ ಶೋಯೆಬ್ ಮಲಿಕ್ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದರು.

ಇದನ್ನೂ ಓದಿ:Rohit Sharma: ರೋಹಿತ್ ಶರ್ಮಾ ಕ್ಯಾಪ್ಟನ್ ಆಗುತ್ತಿದ್ದಂತೆ ಖುಲಾಯಿಸಿತು ಈ 3 ಆಟಗಾರರ ಅದೃಷ್ಟ

ಮೊದಲು ಬ್ಯಾಟಿಂಗ್ ಮಾಡಿದ ಪೇಶಾವರ ತಂಡ ಲಾಹೋರ್ ತಂಡಕ್ಕೆ 159 ರನ್ ಗಳ ಟಾರ್ಗೆಟ್ ನೀಡಿತ್ತು. ಪೇಶಾವರ ಪರ ಶೋಯೆಬ್ ಮಲಿಕ್ 32 ರನ್ ಮತ್ತು ಹೈದರ್ ಅಲಿ 25 ರನ್ ಕೊಡುಗೆ ನೀಡಿದರು. ಲಾಹೋರ್ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ಗೆ ಬರಲಿಲ್ಲ. ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಹಫೀಜ್ ಮಾತ್ರ 49 ರನ್ ಗಳಿಸಿದರು. ಇದಾದ ಬಳಿಕ ಬ್ಯಾಟಿಂಗ್‌ನಲ್ಲಿ ಶಾಹೀನ್ ಆಫ್ರಿದಿ 20 ಎಸೆತಗಳಲ್ಲಿ 39 ರನ್ ಗಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News