ನವದೆಹಲಿ: ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ(LPG Subsidy) ಕುರಿತು ಗ್ರಾಹಕರಿಗೆ ಶೀಘ್ರವೇ ದೊಡ್ಡ ಸುದ್ದಿಯೊಂದಿಗೆ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 1000 ರೂ. ತಲುಪಲಿದೆ ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಎಲ್ಪಿಜಿ ಸಿಲಿಂಡರ್ಗಳ ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಅಭಿಪ್ರಾಯಗಳು ಇನ್ನೂ ಮುನ್ನೆಲೆಗೆ ಬಂದಿಲ್ಲ. ಆದರೆ ಸರ್ಕಾರದ ಆಂತರಿಕ ಮೌಲ್ಯಮಾಪನದಲ್ಲಿ ಗ್ರಾಹಕರು ಸಿಲಿಂಡರ್ಗೆ 1000 ರೂ.ವರೆಗೆ ಪಾವತಿಸಲು ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ.
ಮೂಲಗಳ ಪ್ರಕಾರ ಎಲ್ಪಿಜಿ ಸಿಲಿಂಡರ್(LPG Cylinder)ಗಳ ಬಗ್ಗೆ ಸರ್ಕಾರ ಎರಡು ನಿಲುವುಗಳನ್ನು ತೆಗೆದುಕೊಳ್ಳಬಹುದು. ಒಂದೋ ಸರ್ಕಾರ ಸಬ್ಸಿಡಿ ರಹಿತ ಸಿಲಿಂಡರ್ಗಳನ್ನು ಪೂರೈಸಬೇಕು. ಎರಡನೆಯದಾಗಿ ಕೆಲವು ಆಯ್ದ ಗ್ರಾಹಕರಿಗೆ ಸಬ್ಸಿಡಿಯ ಲಾಭವನ್ನೂ ನೀಡಬೇಕು.
ಇದನ್ನೂ ಓದಿ: Flipkart Big Saving Days Sale: ಫ್ಲಿಪ್ಕಾರ್ಟ್ ನಲ್ಲಿ ಕೇವಲ 19,445 ರೂ.ಗೆ ಪಡೆಯಿರಿ iPhone 13
ಸಬ್ಸಿಡಿಯಲ್ಲಿ ಸರ್ಕಾರದ ಯೋಜನೆ ಏನು?
ಸಬ್ಸಿಡಿ(Subsidy on LPG cylinder) ನೀಡುವ ಬಗ್ಗೆ ಸರ್ಕಾರದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಇಲ್ಲಿಯವರೆಗಿನ ಮಾಹಿತಿ ಪ್ರಕಾರ 10 ಲಕ್ಷ ರೂ. ಆದಾಯ ಎಂಬ ನಿಯಮ ಜಾರಿಯಲ್ಲಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಲಾಭ ದೊರೆಯಲಿದೆ. ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಈಗ ಸಬ್ಸಿಡಿಯ ಸ್ಥಿತಿ ಏನು?
ಕಳೆದ ಹಲವಾರು ತಿಂಗಳುಗಳಿಂದ ಕೆಲವು ಸ್ಥಳಗಳಲ್ಲಿ ಎಲ್ಪಿಜಿ ಮೇಲಿನ ಸಬ್ಸಿಡಿ(LPG Subsidy)ಯನ್ನು ನಿಲ್ಲಿಸಲಾಗಿದೆ ಮತ್ತು ಈ ನಿಯಮವು ಮೇ 2020ರಿಂದ ಚಾಲನೆಯಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆ ನಿರಂತರವಾಗಿ ಕುಸಿದ ನಂತರವೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಇದುವರೆಗೂ ಸರ್ಕಾರ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ.
ಸಬ್ಸಿಡಿಗೆ ಸರ್ಕಾರ ತುಂಬಾ ಖರ್ಚು ಮಾಡುತ್ತದೆ
2021ರ ಆರ್ಥಿಕ ವರ್ಷದಲ್ಲಿ ಸಬ್ಸಿಡಿಗಳ ಮೇಲಿನ ಸರ್ಕಾರದ ವೆಚ್ಚವು 3,559 ರೂ. ಆಗಿದೆ. 2020ರ ಹಣಕಾಸು ವರ್ಷದಲ್ಲಿ ಈ ವೆಚ್ಚ 24,468 ಕೋಟಿ ರೂ. ಆಗಿತ್ತು. ವಾಸ್ತವವಾಗಿ ಇದು ಡಿಬಿಟಿ ಯೋಜನೆಯಡಿಯಲ್ಲಿದೆ, ಇದು ಜನವರಿ 2015ರಲ್ಲಿ ಪ್ರಾರಂಭವಾಯಿತು. ಇದರಡಿ ಗ್ರಾಹಕರು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ನ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದೇ ಸಮಯದಲ್ಲಿ ಸಬ್ಸಿಡಿ ಹಣವನ್ನು ಸರ್ಕಾರವು ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸುತ್ತದೆ. ಈ ಮರುಪಾವತಿ ನೇರವಾಗಿರುವುದರಿಂದ ಯೋಜನೆಗೆ DBTL ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: Airtel-Vi-Jio Prepaid plans: 500 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 84 ದಿನಗಳವರೆಗೆ ಈ ಪ್ರಯೋಜನಗಳನ್ನು ಪಡೆಯಿರಿ.!
ಬೆಲೆ ನಿರಂತರವಾಗಿ ಹೆಚ್ಚುತ್ತಿದೆ
ಸೆಪ್ಟೆಂಬರ್ 1ರಂದು ಸರ್ಕಾರ ಎಲ್ಪಿಜಿ ಸಿಲಿಂಡರ್(LPG Subsidy) ಬೆಲೆಯನ್ನು 25 ರೂ. ಹೆಚ್ಚಿಸಿತ್ತು. 14.2 ಕೆಜಿ ಸಿಲಿಂಡರ್ ಅಂದರೆ ಗೃಹಬಳಕೆಯ ಅನಿಲದ ಮೇಲೆ ಈ ಹೆಚ್ಚಳ ಮಾಡಲಾಗಿದೆ. ಈ ಏರಿಕೆಯೊಂದಿಗೆ ದೆಹಲಿಯಲ್ಲಿ ಸಿಲಿಂಡರ್ ಬೆಲೆ 884.50 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಪ್ರಸ್ತುತ 884.50 ರೂ. ಇದ್ದರೆ, ಚೆನ್ನೈನಲ್ಲಿ 900.50 ರೂ.ಗೆ ನಿಗದಿಪಡಿಸಲಾಗಿದೆ. ದೇಶದಲ್ಲಿ ಅನಿಲದ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.