ಹೊಸದಿಲ್ಲಿ: Sooryavanshi on Netflix - ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಮತ್ತು ಕತ್ರಿನಾ ಕೈಫ್ (Katrina Kaif) ಅಭಿನಯದ 'ಸೂರ್ಯವಂಶಿ' ಚಿತ್ರ ಕಳೆದ ಎರಡು ವರ್ಷಗಳಿಂದ ಬಾಕ್ಸ್ ಆಫೀಸ್ ಗೆ ಬಿದ್ದ ಬರವನ್ನು ಹೋಗಲಾಡಿಸಿದೆ ಎಂದರೆ ತಪ್ಪಾಗಲಾರದು. ಬಾಕ್ಸ್ ಆಫೀಸ್ನಲ್ಲಿ ಕೇವಲ 7 ದಿನಗಳಲ್ಲಿ ಚಿತ್ರ 120 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದೇ ವೇಳೆ ಚಿತ್ರವು OTT ಪ್ಲಾಟ್ಫಾರ್ಮ್ನಿಂದಲೂ ಸಾಕಷ್ಟು ಹಣವನ್ನು ಗಳಿಕೆ ಮಾಡಿದೆ.
100 ಕೋಟಿ ನೀಡಿದ Netflix (Netflix Buys Sooryavanshi)
ಚಿತ್ರಕ್ಕೆ (Sooryavanshi) ಸಂಬಂಧಿಸಿದಂತೆ, ನಮ್ಮ ಸಹವರ್ತಿ ವೆಬ್ಸೈಟ್ Bollywoodlife.com ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಚಿತ್ರದ ನಿರ್ಮಾಪಕರು OTT ಯಿಂದಲೂ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರದ ತಯಾರಕರು ಇದೀಗ OTT ಬಿಡುಗಡೆಗಾಗಿ ನೆಟ್ಫ್ಲಿಕ್ಸ್ನೊಂದಿಗೆ ಕೈಜೋಡಿಸಿದ್ದಾರೆ ಮತ್ತು ಇದಕ್ಕಾಗಿ ಅವರು ದೊಡ್ಡ ಸಂಭಾವನೆಯನ್ನು ಪಡೆದಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರವನ್ನು ನೆಟ್ಫ್ಲಿಕ್ಸ್ 100 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-Janhvi Kapoor : 'ಲುಂಗಿ ಡ್ಯಾನ್ಸ್'ಗೆ ರೋಮ್ಯಾಂಟಿಕ್ ಟ್ವಿಸ್ಟ್ ನೀಡಿದ ಜಾನ್ವಿ ಕಪೂರ್
ಈ ದಿನದಿಂದ OTT ನಲ್ಲಿ ಸ್ಟ್ರೀಮ್ ಆಗಲಿದೆ ಚಿತ್ರ
ಅಕ್ಷಯ್ ಅಭಿನಯದ 'ಸೂರ್ಯವಂಶಿ' ಚಿತ್ರ ವೀಕ್ಷಿಸಲು ನಿಮಗೆ ಇನ್ನೂ ಚಿತ್ರಮಂದಿರವನ್ನು ತಲುಪಲು ಸಾಧ್ಯವಾಗಿಲ್ಲ ಎಂದಾದಲ್ಲಿ ನೀವು ಅದನ್ನು ಡಿಸೆಂಬರ್ 4 ರಿಂದ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದು. ಶೀಘ್ರದಲ್ಲೇ ತಯಾರಕರು OTT ಬಿಡುಗಡೆಯನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕದ ನಂತರ OTT ನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಚಿತ್ರ ಸೂರ್ಯವಂಶಿ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ-ರಾಜಸ್ಥಾನದಲ್ಲಿ ನಡೆಯಲಿದೆ Vicky Kaushal ಮತ್ತು Katrina Kaif ಅದ್ದೂರಿ ವಿವಾಹ
ಚಿತ್ರದ ಕಥೆ ಹೇಗಿದೆ?
ಚಿತ್ರದ ಕಥೆಯನ್ನು ಅಕ್ಷಯ್ ಕುಮಾರ್ ಅಂದರೆ ಡಿಸಿಪಿ ವೀರ್ ಸೂರ್ಯವಂಶಿ ಸುತ್ತ ಹೆಣೆಯಲಾಗಿದೆ. ಸೂರ್ಯವಂಶಿ ತನ್ನ ನಿರ್ಧಾರಕ್ಕೆ ಬದ್ಧವಾದ ಮತ್ತು ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ ಅಧಿಕಾರಿಯಾಗಿದ್ದಾನೆ. ಈ ಸಮರದ ವೇಳೆ ಆತನಿಗೆ ಒಂದು ದೊಡ್ಡ ಪಿತೂರಿಯ ಬಗ್ಗೆ ಮಾಹಿತಿ ಸಿಗುತ್ತದೆ ಮತ್ತು ಅವನು ದೇಶ ಮತ್ತು ಮುಂಬೈಯನ್ನು ಉಳಿಸಲು ಏನೆಲ್ಲಾ ಮಾಡುತ್ತಾನೆ ಎಂಬುದೇ ಈ ಕಥೆಯ ಸಾರೆ. ಈ ಕೆಲಸದಲ್ಲಿ ಸಿಂಘಮ್ ಅಜಯ್ ದೇವಗನ್ ಮತ್ತು ಸಿಂಬಾ ರಣವೀರ್ ಸಿಂಗ್ ಸಹಾಯ ಮಾಡುತ್ತಾರೆ. ಹೀಗೆ ಈ ಚಿತ್ರದಲ್ಲಿ ನೀವು ಆಕ್ಷನ್, ಡ್ರಾಮಾ, ಇಮೊಶನ್ ಜೊತೆಗೆ ರೋಹಿತ್ ಶೆಟ್ಟಿ ಸ್ಟೈಲ್ (Rohit Shetty) ಆಗಿರುವ ಗಾಳಿಯಲ್ಲಿ ವಾಹನಗಳ ತೂರಾಟದ ಜೊತೆಗೆ ಈ ಬಾರಿ ಹೆಲಿಕ್ಯಾಪ್ಟರ್ ನಲ್ಲಿ ಆಕ್ಷನ್ ಕೂಡ ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ