Global Hunger Index 2021: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಳಸ್ಥಾನದಲ್ಲಿ ಭಾರತ

ಹಸಿವು ಎದುರಿಸುವಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಪ್ರತಿವರ್ಷ ಜಿಹೆಚ್‌ಐ ಶ್ರೇಣಿಗಳ ಪ್ರಗತಿ ಅಥವಾ ಅದರ ಕೊರತೆಯನ್ನು ನಿರ್ಣಯಿಸಲು ಲೆಕ್ಕಾಚಾರ ಮಾಡುತ್ತದೆ.

Written by - Puttaraj K Alur | Last Updated : Oct 15, 2021, 07:21 AM IST
  • 2021ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 94 ರಿಂದ 101ನೇ ಸ್ಥಾನಕ್ಕೆ ಕುಸಿತ ಕಂಡಿದೆ
  • ಭಾರತಕ್ಕಿಂತಲೂ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳು ಮೇಲಿನ ಸ್ಥಾನದಲ್ಲಿವೆ
  • ಚೀನಾ, ಬ್ರೆಜಿಲ್ & ಕುವೈತ್ ಸೇರಿ 18 ದೇಶಗಳು 5ಕ್ಕಿಂತ ಕಡಿಮೆ ಜಿಎಚ್‌ಐ ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿವೆ
Global Hunger Index 2021: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಳಸ್ಥಾನದಲ್ಲಿ ಭಾರತ  title=
2021ರ ಜಾಗತಿಕ ಹಸಿವು ಸೂಚ್ಯಂಕ(

ನವದೆಹಲಿ: 2021ರ ಜಾಗತಿಕ ಹಸಿವು ಸೂಚ್ಯಂಕ(Global Hunger Index 2021)ದಲ್ಲಿ 116 ರಾಷ್ಟ್ರಗಳ ಪೈಕಿ ಭಾರತವು 94ರಿಂದ 101ನೇ ಸ್ಥಾನಕ್ಕೆ ಕುಸಿದಿದ್ದು, ನೆರೆಯ ಪಾಕಿಸ್ತಾನ(Pakistan), ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತಲೂ ಕೆಳಸ್ಥಾನದಲ್ಲಿದೆ. ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ದೇಶಗಳು 5ಕ್ಕಿಂತ ಕಡಿಮೆ ಜಿಎಚ್‌ಐ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆ(Hunger and Malnutrition)ಯನ್ನು ಪತ್ತೆಹಚ್ಚುವ ಜಾಗತಿಕ ಹಸಿವಿನ ಸೂಚ್ಯಂಕ(GHI)ದ ವೆಬ್‌ಸೈಟ್ ಗುರುವಾರ ಹೇಳಿದೆ.

ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ  ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಜಂಟಿಯಾಗಿ ತಯಾರಿಸಿದ ವರದಿಯಂತೆ ಭಾರತದಲ್ಲಿ ಹಸಿವಿನ ಮಟ್ಟ ‘ಆತಂಕಕಾರಿ’ ಎಂದು ಬಣ್ಣಿಸಲಾಗಿದೆ. ಕಳೆದ ವರ್ಷ ಅಂದರೆ 2020ರಲ್ಲಿ 107 ರಾಷ್ಟ್ರಗಳ ಪೈಕಿ ಭಾರತ 94ನೇ ಸ್ಥಾನದಲ್ಲಿತ್ತು. ಇದೀಗ 116 ರಾಷ್ಟ್ರಗಳ ಪೈಕಿ 101ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಾಗತಿಕ ಹಸಿವು ಸೂಚ್ಯಂಕ(Global Hunger Index)ದ ಸ್ಕೋರ್ 2000ರಲ್ಲಿ 38.8 ರಿಂದ 2012 ಮತ್ತು 2021ರ ನಡುವೆ ಶೇ.28.5ರಿಂದ ಶೇ.27.5ಕ್ಕೆ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Whatsapp Chat Backup 100%ನಲ್ಲಿ ಸಿಲುಕಿಕೊಳ್ಳುತ್ತಿದೆಯೇ? ಈ ರೀತಿ ಸಮಸ್ಯೆ ಪರಿಹರಿಸಿ

ಹಸಿವು ಎದುರಿಸುವಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಪ್ರತಿವರ್ಷ ಜಿಹೆಚ್‌ಐ(GHI) ಶ್ರೇಣಿಗಳ ಪ್ರಗತಿ ಅಥವಾ ಅದರ ಕೊರತೆಯನ್ನು ನಿರ್ಣಯಿಸಲು ಲೆಕ್ಕಾಚಾರ ಮಾಡುತ್ತದೆ. ಮಕ್ಕಳ ಅಪೌಷ್ಠಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಮಕ್ಕಳ ತೂಕ ಮತ್ತು ಶಿಶು ಮರಣ ಪ್ರಮಾಣದ ಆಧಾರದ ಮೇಲೆ ಜಾಗತಿಕ ಹಸಿವು ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. ಈ ಅಂಶಗಳ ಆಧಾರದ ಮೇಲೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರತಿ ವರ್ಷ ವರದಿ ಪ್ರಕಟಿಸುತ್ತದೆ.

ವರದಿಯ ಪ್ರಕಾರ ಭಾರತ(India)ದಲ್ಲಿ 1998-2002ರ ನಡುವೆ ಮಕ್ಕಳಲ್ಲಿ ವ್ಯರ್ಥ ಮಾಡುವ ಪಾಲು ಶೇ.17.1 ರಿಂದ ಶೇ.17.3ಕ್ಕೆ ಏರಿದೆ. ‘COVID-19 ಮತ್ತು ಭಾರತದಲ್ಲಿ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದ ಜನರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ, ವಿಶ್ವದಾದ್ಯಂತ ಅತಿಹೆಚ್ಚು ಮಕ್ಕಳ ವ್ಯರ್ಥ ಪ್ರಮಾಣ ಹೊಂದಿರುವ ದೇಶ ಭಾರತ’ ಎಂದು ವರದಿ ಹೇಳಿದೆ.

ವರದಿಗಳ ಪ್ರಕಾರ ಪಾಕಿಸ್ತಾನವು ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ (76) ಬಾಂಗ್ಲಾದೇಶ(Bangladesh) (76)  ಮತ್ತು ಮಾನ್ಮಾರ್ 71ನೇ ಸ್ಥಾನದಲ್ಲಿದೆ. ಆದರೆ ಈ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ.

ಇದನ್ನೂ ಓದಿ: Best Investment Plan: ದಿನಕ್ಕೆ 50 ರೂ. ಉಳಿಸುವ ಮೂಲಕ ನೀವು ಮಿಲಿಯನೇರ್ ಆಗಬಹುದು, ಹೇಗೆ ಗೊತ್ತಾ?

ಆದಾಗ್ಯೂ ಭಾರತವು ಇತರ ಸೂಚಕಗಳಲ್ಲಿ 5 ವರ್ಷದೊಳಗಿನ ಮರಣ ಪ್ರಮಾಣ, ಮಕ್ಕಳಲ್ಲಿ ಕುಂಠಿತದ ಪ್ರಮಾಣ ಮತ್ತು ಅಸಮರ್ಪಕ ಆಹಾರದ ಕಾರಣದಿಂದಾಗಿ ಅಪೌಷ್ಟಿಕತೆಯ ಪ್ರಗತಿಯನ್ನು ತೋರಿಸಿದೆ ಎಂದು ವರದಿ ಹೇಳಿದೆ. ವರದಿಯ ಪ್ರಕಾರ ಹಸಿವಿನ ವಿರುದ್ಧದ ಹೋರಾಟವು ಅಪಾಯಕಾರಿಯಾಗಿದೆ. ಪ್ರಸ್ತುತ GHI ಪ್ರಕ್ಷೇಪಗಳ ಆಧಾರದ ಮೇಲೆ ಒಟ್ಟಾರೆಯಾಗಿ ಪ್ರಪಂಚ  ಮತ್ತು ನಿರ್ದಿಷ್ಟವಾಗಿ 47 ದೇಶಗಳು 2030ರ ವೇಳೆಗೆ ಕಡಿಮೆ ಮಟ್ಟದ ಹಸಿವನ್ನು ಸಾಧಿಸುವಲ್ಲಿ ವಿಫಲವಾಗುತ್ತವೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News