ಬಿಹಾರ : ಇಲ್ಲಿನ ಮೋತಿಹಾರಿ ಸಮೀಪದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಬಸ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಹಿಂದೆ 27 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. ಆದರೆ, ಅದು ಅಧಿಕೃತ ಮಾಹಿತಿಯಲ್ಲ ಎಂದು ಬಿಹಾರ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ಸಚಿವ ದಿನೇಶ್ ಚಂದ್ರ ಯಾದವ್ ತಿಳಿಸಿದ್ದಾರೆ.
ಬಿಹಾರ: ಬಸ್ಸಿನಲ್ಲಿ ಬೆಂಕಿ, 27 ಮಂದಿ ಸಾವು
ಈ ಬಗ್ಗೆ ANI ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅವರು, "ಬಸ್ಸಿನಲ್ಲಿ ಕೇವಲ 13 ಮಂದಿ ಟಿಕೆಟ್ ಕಾಯ್ದಿರಿಸಿದ್ದು, ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 5 ಮಂದಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ಅವರು ಬಹುಶಃ ಘಟನೆ ಸಂದರ್ಭದಲ್ಲಿ ತಾವಾಗಿಯೇ ಸ್ಥಳದಿಂದ ನಿರ್ಗಮಿಸಿರಬಹುದು. ಈ ಘಟನೆಯಲ್ಲಿ 27 ಮಂದಿ ಸಾವನ್ನಪ್ಪಿರುವುದಾಗಿ ನಾನೇ ಹೇಳಿದ್ದೆ. ಆದರೆ ಅ ಮಾಹಿತಿ ತಪ್ಪು. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಮೃತರ ಸಂಖ್ಯೆಯನ್ನು ಘೋಷಿಸಲಾಗಿತ್ತು" ಎಂದು ಹೇಳಿದ್ದಾರೆ.
There was booking for 13 people. 8 were taken to hospital by authorities, there was no sign of remaining 5, no remains were found. They might have left the spot on their own: #Bihar Disaster Management Min Dinesh Chandra Yadav on #Motihari bus accident,earlier confirmed 27 deaths pic.twitter.com/8wVn91Sjwu
— ANI (@ANI) May 4, 2018
ಬಿಹಾರದ ಮೊತಿಹಾರಿಯ ಬೆಲ್ವಾ ಗ್ರಾಮದ ಬಳಿ NH-28ರಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಚಲಿಸುತ್ತಿದ್ದ ಬಸ್ ಅಪಘಾತಕ್ಕೊಳಗಾಗಿ ಮೊಗುಚಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆಯಲ್ಲಿ 27 ಮಂದಿ ಸಾವನ್ನಪ್ಪಿದ್ದು, ಮೃತ ಕುಟುಂಬಗಳಿಗೆ 4 ಲಕ್ಷ ಪರಿಹಾರ ಧನ ನೀಡಲಾಗುವುದು ಎಂದು ಬಿಹಾರ ಸರ್ಕಾರದ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ಸಚಿವ ದಿನೇಶ್ ಚಂದ್ರ ಯಾದವ್ ಅವರೇ ಹೇಳಿದ್ದರು. ಆದರೀಗ ಅದು ತಪ್ಪು ಮಾಹಿತಿ ಎಂದು ತಾವೇ ಸ್ಪಷ್ಟಪಡಿಸಿದ್ದಾರೆ.
#WATCH: On yesterday's #Motihari bus accident, #Bihar Disaster Management Minister Dinesh Chandra Yadav says, 'The information of deaths was wrong. Yes I said 27 people have died, it was based on info from local sources, but I also said that only final report will be considered' pic.twitter.com/SAeEVQ3s6p
— ANI (@ANI) May 4, 2018