Side Effects Of Jaggery: ಲಾಭ ಅಷ್ಟೇ ಅಲ್ಲ ಶರೀರಕ್ಕೆ ಹಾನಿಯೂ ಉಂಟು ಮಾಡುತ್ತದೆ ಬೆಲ್ಲ, ಇಲ್ಲಿದೆ ವಿವರ

Side Effects Of Jaggery - ಇದುವರೆಗೆ ಊಟದ ನಂತರ ಬೆಲ್ಲ (Jaggery) ತಿನ್ನುವುದರಿಂದ ಹಲವು ಪ್ರಯೋಜಗಳಾಗುತ್ತವೆ (Health Benefits Of Jaggery) ಎಂಬುದನ್ನು ನೀವು ಕೇಳಿರಬಹುದು, ಆಯುರ್ವೇದದಲ್ಲಿ ಆತಂಕ, ಮೈಗ್ರೇನ್, ಜೀರ್ಣಕ್ರಿಯೆ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಬೆಲ್ಲವನ್ನು ಸೇವಿಸುವ ಮೂಲಕ ಕಡಿಮೆ ಮಾಡಬಹುದು ಎನ್ನಲಾಗಿದೆ. 

Written by - Nitin Tabib | Last Updated : Aug 4, 2021, 02:03 PM IST
  • ಬೆಲ್ಲ ಸೇವನೆಯಿಂದಾಗುವ ಹಲವು ಲಾಭಗಳು ನಿಮಗೆ ತಿಳಿದಿರಬಹುದು.
  • ಆದರೆ, ಬೆಲ್ಲ ಸೇವನೆಯಿಂದಾಗುವ ಹಾನಿಗಳ ಕುರಿತು ನಿಮಗೆ ತಿಳಿದಿದೆಯೇ?
  • ಬನ್ನಿ ಬೆಲ್ಲ ಸೇವನೆಯಿಂದ ಆರೋಗ್ಯದ ಮೇಲೆ ಯಾವ ಪರಿಣಾಮಗಳಾಗುತ್ತವೆ ತಿಳಿದುಕೊಳ್ಳೋಣ.
Side Effects Of Jaggery: ಲಾಭ ಅಷ್ಟೇ ಅಲ್ಲ ಶರೀರಕ್ಕೆ ಹಾನಿಯೂ ಉಂಟು ಮಾಡುತ್ತದೆ ಬೆಲ್ಲ, ಇಲ್ಲಿದೆ ವಿವರ title=
Side Effects Of Jaggery (File Photo)

Side Effects Of Jaggery - ಇದುವರೆಗೆ ಊಟದ ನಂತರ ಬೆಲ್ಲ (Jaggery) ತಿನ್ನುವುದರಿಂದ ಹಲವು ಪ್ರಯೋಜಗಳಾಗುತ್ತವೆ (Health Benefits Of Jaggery) ಎಂಬುದನ್ನು ನೀವು ಕೇಳಿರಬಹುದು, ಆಯುರ್ವೇದದಲ್ಲಿ ಆತಂಕ, ಮೈಗ್ರೇನ್, ಜೀರ್ಣಕ್ರಿಯೆ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಬೆಲ್ಲವನ್ನು ಸೇವಿಸುವ ಮೂಲಕ ಕಡಿಮೆ ಮಾಡಬಹುದು ಎನ್ನಲಾಗಿದೆ. ಬೆಲ್ಲ ತಿನ್ನುವುದು ವ್ಯಕ್ತಿಯ ಚಯಾಪಚಯ (Digestion) ಕ್ರಿಯೆಯನ್ನು ಸುಧಾರಿಸುವುದಲ್ಲದೆ ಆತನ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ಇದರ ಹೊರತಾಗಿಯೂ, ಬೆಲ್ಲದಲ್ಲಿ ಇರುವ ಸುಕ್ರೋಸ್ ಮತ್ತು ಕಾರ್ಬೋಹೈಡ್ರೇಟ್‌ಗಳ ಕಾರಣದಿಂದಾಗಿ, ಅದನ್ನು ಅತಿಯಾಗಿ ಸೇವಿಸುವುದರಿಂದ ಪ್ರಯೋಜನಕ್ಕೆ ಬದಲಾಗಿ ವ್ಯಕ್ತಿಗೆ ಹಾನಿ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಬನ್ನಿ ಅತಿಯಾಗಿ ಬೆಲ್ಲವನ್ನು ಸೇವಿಸುವ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ (Health Tips) ಉಂಟಾಗುವ  ಹಾನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅತಿಯಾಗಿ ಬೆಲ್ಲ ಸೇವಿಸುವುದರಿಂದ ಶರೀರಕ್ಕಾಗುವ ಹಾನಿಗಳಾವುವು?
>> ಕಾವು ಬೆಲ್ಲದ ಮೂಲ ಗುಣಧರ್ಮ. ಇದನ್ನು ಅತಿಯಾಗಿ ಸೇವಿಸಿದರೆ, ಇದು ಅಜೀರ್ಣ ಹಾಗೂ  ಮೂಗಿನಿಂದ ರಕ್ತಸ್ರಾವದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚು ಬೆಲ್ಲ ತಿನ್ನುವುದನ್ನು ತಪ್ಪಿಸಿ.

ಇದನ್ನೂ ಓದಿ- Healthy Lifestyle: ಸಾಟಿಯೇ ಇಲ್ಲದ ಸೌಂದರ್ಯ ಹಾಗೂ ಆರೋಗ್ಯ ನಿಮ್ಮದಾಗಬೇಕೆ? ನಿತ್ಯ ಒಂದು ಗ್ಲಾಸ್ ಈ ಹಣ್ಣಿನ ಜ್ಯೂಸ್ ಸೇವಿಸಿ

>> ನಿಮ್ಮ ಸ್ಥೂಲಕಾಯವನ್ನು ಹೋಗಲಾಡಿಸಲು ನೀವು ಬಯಸುತ್ತಿದ್ದರೆ, ಅತಿಯಾಗಿ ಬೆಲ್ಲವನ್ನು (Jaggery) ಸೇವಿಸುವುದನ್ನುಇಂದೇ ನಿಲ್ಲಿಸಿ ಬಿಡಿ. 100 ಗ್ರಾಂ. ನಲ್ಲಿ 385 ಕ್ಯಾಲೊರಿಗಳನ್ನು ಹೊಂದಿರುವ ಬೆಲ್ಲವು ಡಯಟ್ ಮಾಡುವವರಿಗೆ ಖಂಡಿತವಾಗಿಯೂ ಉತ್ತಮ ಆಯ್ಕೆಯಾಗಿಲ್ಲ. ನೀವು ಅದನ್ನು ಅತಿಯಾಗಿ ಸೇವಿಸುತ್ತಿದ್ದರೆ, ಅದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

>> ಬೆಲ್ಲವು ಸಿಹಿಯಾಗಿರುತ್ತದೆ, ಆದ್ದರಿಂದ ಇದರ ಅತಿಯಾದ ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. 10 ಗ್ರಾಂ ಬೆಲ್ಲದಲ್ಲಿ 9.7 ಗ್ರಾಂ ಸಕ್ಕರೆ ಇದೆ.

ಇದನ್ನೂ ಓದಿ- Shravan Masa 2021: ಈ ಗಿಡವನ್ನು ಸಾಕ್ಷಾತ್ ಶಿವ ಸ್ವರೂಪಿ ಎನ್ನಲಾಗುತ್ತದೆ, ನಿಮ್ಮ ಮನೆಯಲ್ಲಿಯೂ ಇದೆಯಾ?

>> ಬೆಲ್ಲ ಸರಿಯಾದ ಪ್ರಕ್ರಿಯೆಯಲ್ಲಿ ತಯಾರಾಗಿರದಿದ್ದರೆ,  ಅದು ಕಲ್ಮಶಗಳನ್ನು ಹೊಂದಿರಬಹುದು, ಇದು ನಿಮ್ಮ ಕರುಳಿನಲ್ಲಿ ಪರಾವಲಂಬಿ ಹಾಗೂ ಹುಳುಗಳ ಅಪಾಯವನ್ನು ಹೆಚ್ಚಿಸುತ್ತದೆ.

>> ಹೊಸದಾಗಿ ತಯಾರಿಸಿದ ಬೆಲ್ಲವನ್ನು ತಿನ್ನುವುದರಿಂದ ಅತಿಸಾರ, ಅಜೀರ್ಣ ಮತ್ತು ಮಲಬದ್ಧತೆ ಉಂಟಾಗಬಹುದು.

ಇದನ್ನೂ ಓದಿ-JIO In-Flight Connectivity Plans: Jio ಗ್ರಾಹಕರಿಗೆ ಮೂರು ಜಬರ್ದಸ್ತ್ ಪ್ಲಾನ್ ಬಿಡುಗಡೆ, ವಿಶೇಷತೆ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News