Fruits For Healthy Eyes: ಕಣ್ಣಿನ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು

Best Fruits For Healthy Eyes : ಕಣ್ಣುಗಳಿದ್ದರೆ ಬ್ರಹ್ಮಾಂಡದ ಎಲ್ಲಾ ಸೌಂದರ್ಯವನ್ನು ಸವಿಯಬಹುದು. ಆದರೆ ಕಣ್ಣಿಲ್ಲದಿದ್ದರೆ ಇಡೀ ಜಗತ್ತೇ ಕತ್ತಲಾಗುತ್ತದೆ. ಕಣ್ಣುಗಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು, ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ. 

Written by - Ranjitha R K | Last Updated : Jul 24, 2021, 08:28 PM IST
  • ಕಿತ್ತಳೆ ಹಣ್ಣಲ್ಲಿ ಅಡಗಿದೆ ಆರೋಗ್ಯ ಗುಟ್ಟು
  • ಮಾವಿನ ರಸ ಕಣ್ಣುಗಳಿಗೆ ಒಳ್ಳೆಯದು
  • ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಪೀಚ್
Fruits For Healthy Eyes: ಕಣ್ಣಿನ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು title=
ಕಿತ್ತಳೆ ಹಣ್ಣಲ್ಲಿ ಅಡಗಿದೆ ಆರೋಗ್ಯ ಗುಟ್ಟು (file photo)

ನವದೆಹಲಿ :  Best Fruits For Healthy Eyes : ಕಣ್ಣುಗಳಿದ್ದರೆ ಬ್ರಹ್ಮಾಂಡದ ಎಲ್ಲಾ ಸೌಂದರ್ಯವನ್ನು ಸವಿಯಬಹುದು. ಆದರೆ ಕಣ್ಣಿಲ್ಲದಿದ್ದರೆ ಇಡೀ ಜಗತ್ತೇ ಕತ್ತಲಾಗುತ್ತದೆ. ಕಣ್ಣುಗಳ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು, ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ. ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ  ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕಣ್ಣುಗಳನ್ನು ದುರ್ಬಲಗೊಳಿಸುವುದರ ಜೊತೆಗೆ ಅನೇಕ ರೋಗಗಳನ್ನು (eye care)ಆಹ್ವಾನಿಸುತ್ತದೆ. ಹಾಗಿರುವಾಗ ಆಹಾರದಲ್ಲಿ ಸಾಕಷ್ಟು ಪೌಷ್ಠಿಕಾಂಶದ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.  ಇದು  ಕಣ್ಣುಗಳನ್ನು ಆರೋಗ್ಯಕರ ಮತ್ತು ಸುಂದರವಾಗಿರಿಸುತ್ತದೆ (Fruits for healthy eyes). ಇನ್ನು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ ಅಥವಾ ಮಂದ ದೃಷ್ಟಿ ಇದ್ದರೆ, ಇಂದಿನಿಂದಲೇ ಈ ಹಣ್ಣುಗಳನ್ನು ಸೇವಿಸಲು ಪ್ರಾರಂಭಿಸಿ. 

೧. ಕಿತ್ತಳೆ: ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗುತ್ತದೆಯೋ ಕಣ್ಣುಗಳ ಆರೋಗ್ಯಕ್ಕೂ ಅಷ್ಟೇ ಮುಖ್ಯವಾಗಿರುತ್ತದೆ. ಸಿಟ್ರಸ್ ಹಣ್ಣುಗಳ ಪಟ್ಟಿಯಲ್ಲಿ ಕಿತ್ತಳೆ (Orange) ಪ್ರಥಮ ಸ್ಥಾನದಲ್ಲಿರುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ  ವಿಟಮಿನ್ ಸಿ ಕಂಡ ಬರುತ್ತದೆ. ಕಣ್ಣಿನ ಪೊರೆಯಿಂದ ತಪ್ಪಿಸಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ Frozen Meat Side Effects: ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತಿನ್ನುವ ಮೊದಲು ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

2.ಪೀಚ್ :  ಈ ಹಣ್ಣು ಬೀಟಾ ಕ್ಯಾರೋಟಿನ್ ನಿಂದ ತುಂಬಿದೆ. ಇದರಲ್ಲಿ ವಿಟಮಿನ್ ಸಿ, ಸತು, ಕಾಪರ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. ಇದು ರೆಟಿನಾ ಹಾನಿಗೊಳ್ಳದಂತೆ ಕಾಪಾಡುತ್ತದೆ.  

3. ಆವಕಾಡೊ : ಇದು ವಿಟಮಿನ್ ಸಿ, ಇ, ಬಿ -6 ಪ್ಯಾಂಟೊಥೆನಿಕ್, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುವ ಒಂದು ಹಣ್ಣು. ಆವಕಾಡೊ (avocado fruit) ಇರುಳು ಕುರುಡು ಸಮಸ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣನ್ನು (benefits of fruits) ತಿನ್ನುವುದರಿಂದ ಹಾನಿಕಾರಕ ಅಲ್ಟ್ರಾ ವೈಲೆಟ್ ನಿಂದ ಕಣ್ಣುಗಳನ್ನು ರಕ್ಷಿಸುತ್ತದೆ. 

4. ಪಪ್ಪಾಯ : ಪಪ್ಪಾಯ ಹಣ್ಣಿನಲ್ಲಿ (Papaya) ಅನೇಕ ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ ಇರುತ್ತವೆ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು (Papaya for eye care) ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ, ದೃಷ್ಟಿ ಹೆಚ್ಚಿಸುವುದರ ಜೊತೆಗೆ, ಕಣ್ಣುಗಳಿಗೆ ಹಾನಿಯಾಗದಂತೆ ತಡೆಯಬಹುದು. 

ಇದನ್ನೂ ಓದಿ : Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು

5. ಮಾವು: ಹಣ್ಣುಗಳ ರಾಜ, ಮಾವು ಕಣ್ಣಿಗೆ ಸಾಕಷ್ಟು ಪ್ರಯೋಜನಗಳನ್ನು (Benefits of mango) ನೀಡುತ್ತದೆ. ಮಾವಿನಹಣ್ಣಿನಲ್ಲಿ ವಿಟಮಿನ್ ಎ ಇದ್ದು ಇದು ನಿಮ್ಮ ಕಣ್ಣುಗಳಲ್ಲಿ ಉಂಟಾಗುವ ಸೋಂಕುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News