Covishield ಲಸಿಕೆ ಹಾಕಿಸಿಕೊಂಡವರು ಯುರೋಪ್ ಯಾತ್ರೆ ಮಾಡಬಹುದು, ಈ ದೇಶಗಳಿಂದ ಸಿಕ್ಕಿತು ಗ್ರೀನ್ ಸಿಗ್ನಲ್

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆ ಪಡೆದವರು ಈಗ ಯುರೋಪಿಯನ್ ದೇಶಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. 

Written by - Ranjitha R K | Last Updated : Jul 1, 2021, 03:12 PM IST
  • ಕೋವಿಶೀಲ್ಡ್ ಗೆ ಅನುಮೋದನೆ ನೀಡಿದ EU ೭ ದೇಶಗಳು ಮತ್ತು ಸ್ವಿಟ್ಜರ್ಲೆಂಡ್
  • ಕೋವಿಶೀಲ್ಡ್ ಪಡೆದವರು ಈಗ ಯುರೋಪಿಗೆ ಪ್ರಯಾಣಿಸುವುದು ಸಾಧ್ಯ
  • ಇಂದಿನಿಂದ ಜಾರಿಗೆ ಬರಲಿದೆ ಗ್ರೀನ್ ಪಾಸ್ ಯೋಜನೆ
Covishield ಲಸಿಕೆ ಹಾಕಿಸಿಕೊಂಡವರು ಯುರೋಪ್ ಯಾತ್ರೆ ಮಾಡಬಹುದು, ಈ ದೇಶಗಳಿಂದ ಸಿಕ್ಕಿತು ಗ್ರೀನ್ ಸಿಗ್ನಲ್ title=
ಕೋವಿಶೀಲ್ಡ್ ಗೆ ಅನುಮೋದನೆ ನೀಡಿದ EU ೭ ದೇಶಗಳು ಮತ್ತು ಸ್ವಿಟ್ಜರ್ಲೆಂಡ್ (photo zee news)

ನವದೆಹಲಿ : ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute of India) ಕೋವಿಶೀಲ್ಡ್ ಲಸಿಕೆ ಪಡೆದವರು ಈಗ ಯುರೋಪಿಯನ್ ದೇಶಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಯುರೋಪಿಯನ್ ಯೂನಿಯನ್ (EU)  ಏಳು ದೇಶಗಳು ಮತ್ತು ಸ್ವಿಟ್ಜರ್ಲೆಂಡ್‌ ಭಾರತದ ಕರೋನಾ ಲಸಿಕೆ ಕೋವಿಶೀಲ್ಡ್ (Covishield) ಅನ್ನು ಅನುಮೋದಿಸಿವೆ.

ಈ ದೇಶಗಳಲ್ಲಿ ಕೋವಿಶೀಲ್ಡ್ ಗೆ ಸಿಕ್ಕಿತು ಅನುಮೋದನೆ :
ಸ್ವಿಟ್ಜರ್ಲೆಂಡ್ (Switzerland) ಮಾತ್ರವಲ್ಲದೆ, ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ದೇಶಗಳಲ್ಲಿಯೂ ಕೋವಿಶೀಲ್ಡ್  (Covishield) ಲಸಿಕೆಗೆ ಅನುಮೋದನೆ ಸಿಕ್ಕಿದೆ. ಯುರೋಪಿಯನ್ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರದ ರೂಪುರೆರೇಷೆಗಳು  ಗುರುವಾರದಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ : Sharad Tripathi : ಬಿಜೆಪಿ ಮಾಜಿ ಸಂಸದ ನಿಧನ : ಪಿಎಂ ಮೋದಿ ಸಂತಾಪ

ಈ ದೇಶಗಳಿಗೆ ಮನವಿ ಮಾಡಿದ್ದ ಭಾರತ : 
ಕೋವಿಡ್‌ಶೀಲ್ಡ್ ಮತ್ತು ಕೊವಾಕ್ಸಿನ್ ವಿರುದ್ಧ ಲಸಿಕೆ ಹಾಕಿದ ಭಾರತೀಯರಿಗೆ ಯುರೋಪಿಗೆ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಪ್ರತ್ಯೇಕವಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳುವಂತೆ  27 ಸದಸ್ಯ ರಾಷ್ಟ್ರಗಳನ್ನು ಭಾರತ ಕೇಳಿಕೊಂಡಿತ್ತು. ಕೋವಿನ್ ಪೋರ್ಟಲ್ (Cowin) ಮೂಲಕ ನೀಡಲಾಗುವ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (Vaccination certificate) ಸ್ವೀಕರಿಸುವಂತೆ ಭಾರತವು ಇಯು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿತ್ತು. 

ದೇಶಾದ್ಯಂತ 33.57 ಕೋಟಿ ಡೋಸ್ ಲಸಿಕೆ ನೀಡಲಾಗಿದೆ :
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈವರೆಗೆ ದೇಶಾದ್ಯಂತ 33 ಕೋಟಿ 57 ಲಕ್ಷ 16 ಸಾವಿರ 19 ಡೋಸ್ ಕರೋನಾ ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ, 27 ಕೋಟಿ 60 ಲಕ್ಷ 99 ಸಾವಿರ 880 ಜನರಿಗೆ ಲಸಿಕೆಯ (Vaccine) ಮೊದಲ ಡೋಸ್ ನೀಡಿದರೆ, 5 ಕೋಟಿ 96 ಲಕ್ಷ 16 ಸಾವಿರ 139 ಜನರು ಎರಡೂ ಡೋಸೇಜ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : Corona Vaccine: 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಸಿದ್ಧವಾಯ್ತು ಕರೋನಾ ಲಸಿಕೆ ! ಡಿಜಿಸಿಐ ಅನುಮೋದನೆ ಕೋರಿದೆ ಈ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News