ನೀವು ಕೂಡಾ ಆಯುಷ್ಮಾನ್ ಯೋಜನೆಯ ಫಲಾನುಭವಿಯೇ ? ತಿಳಿದುಕೊಳ್ಳುವ ವಿಧಾನ ಇಲ್ಲಿದೆ

ಆಪ್ಕೆ ದ್ವಾರ್ ಆಯುಷ್ಮಾನ್ ಅಭಿಯಾನವನ್ನು ಈ ವರ್ಷದ ಫೆಬ್ರವರಿ 1 ರಂದು ಪ್ರಾರಂಭಿಸಲಾಯಿತು. ಮಾರ್ಚ್ 14 ರಂದು ಸುಮಾರು 8,35,089 ಜನರು ಈ ಯೋಜನೆಯಡಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.

ನವದೆಹಲಿ : ಬಡ ಕುಟುಂಬಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಉದ್ದೇಶದಿಂದ ಮೋದಿ ಸರ್ಕಾರ 2018 ರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು (Ayushman Bharat Yojana) ಪ್ರಾರಂಭಿಸಿತು. ಈ ಯೋಜನೆಯನ್ನು ಪ್ರತೀ ಮನೆಗೂ ತಲುಪಿಸುವ ಉದ್ದೇಶದಿಂದ  'ಆಯುಷ್ಮಾನ್ ಅಪ್ಕೆ ದ್ವಾರ್ ' (Ayushman Apke Dwar Campaign) ಅಭಿಯಾನವನ್ನು  ಇತ್ತೀಚೆಗೆ ಪ್ರಾರಂಭಿಸಲಾಯಿತು.  ಮಾರ್ಚ್ 14 ರಂದು ಈ ಅಭಿಯಾನ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಯೋಜನೆಯಡಿ ಒಂದೇ ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಪ್ಕೆ ದ್ವಾರ್ ಆಯುಷ್ಮಾನ್ ಅಭಿಯಾನವನ್ನು ಈ ವರ್ಷದ ಫೆಬ್ರವರಿ 1 ರಂದು ಪ್ರಾರಂಭಿಸಲಾಯಿತು. ಮಾರ್ಚ್ 14 ರಂದು ಸುಮಾರು 8,35,089 ಜನರು ಈ ಯೋಜನೆಯಡಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ಮೋದಿ ಸರ್ಕಾರದ ಈ ಯೋಜನೆಯಿಂದ ಲಾಭ ಪಡೆದ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 

2 /5

 ಆಯುಷ್ಮಾನ್ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕಷ್ಟದಲ್ಲಿರುವ ಜನರಿಗೆ  ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ಆಯುಷ್ಮಾನ್ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ದೇಶದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದು.  

3 /5

ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಕಾರ್ಡ್ ಮೂಲಕ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಯೋಜನೆ ಪ್ರಾರಂಭವಾದಾಗಿನಿಂದ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ, ಪಂಜಾಬ್, ಉತ್ತರಾಖಂಡ್, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಂದ 1.2 ಮಿಲಿಯನ್ ಜನರು ಗೋಲ್ಡನ್ ಕಾರ್ಡ್ ಪಡೆದುಕೊಂಡಿದ್ದಾರೆ. 

4 /5

ನೀವು ಆಯುಷ್ಮಾನ್ ಯೋಜನೆಯ ಲಾಭವನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿಯನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು.  ಆರೋಗ್ಯ ಯೋಜನೆ ವೆಬ್‌ಸೈಟ್ pmjay.gov.in ನ ಮುಖಪುಟದಲ್ಲಿ Am I Eligible' ಎಂಬ ಒಪ್ಶನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಎಲ್ಲಾ  ವಿವರಗಳನ್ನು ತುಂಬಿ.  ಮಾರ್ಗಸೂಚಿಗಳ ಪ್ರಕಾರ, ನೀವು  ಯೋಜನೆಯ ಲಾಭ ಪಡೆಯಬಹುದಾದರೆ ಅದರ ಮಾಹಿತಿ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ.   

5 /5

ಆಯುಷ್ಮಾನ್ ಯೋಜನೆಯ ನಿಯಮಗಳ ಪ್ರಕಾರ, ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ, ಹತ್ತಿರದ ಜನಸೇವ ಕೇಂದ್ರ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಹೋಗಿ ನಿಮ್ಮ ಗೋಲ್ಡ್  ಕಾರ್ಡ್ ಅನ್ನು  ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆಧಾರ್ ಕಾರ್ಡ್ನ ಪ್ರತಿಯನ್ನು ಸಲ್ಲಿಸಿದಾಗ, ಆಯುಷ್ಮಾನ್ ಯೋಜನೆಯ ಗೋಲ್ಡ್ ಕಾರ್ಡ್ ಪಡೆಯಬಹುದು.