231 ಜನರ ಕಣ್ಣೆದುರಲ್ಲಿತ್ತು ಘನಘೋರ ಮೃತ್ಯು..! ಅವರಲ್ಲೊಬ್ಬ ಸಾವನ್ನೇ ಸೋಲಿಸಿಬಿಟ್ಟ ..!

ಇದೊಂದು ನಂಬಲಸಾಧ್ಯವಾದ, ಸಿನಿಮೀಯ ಎನ್ನುವಂಥ ಘಟನೆ.  15000 ಅಡಿ ಎತ್ತರದಲ್ಲಿ  ವಿಮಾನದ ಇಂಜಿನ್  ಧಗಧಗ ಹೊತ್ತಿ ಉರಿಯುತಿತ್ತು. 

Written by - Ranjitha R K | Last Updated : Feb 22, 2021, 10:00 AM IST
  • ಇದೊಂದು ನಂಬಲ ಸಾಧ್ಯವಾದ, ಸಿನಿಮೀಯ ಎನ್ನುವಂಥ ಘಟನೆ.
  • 15000 ಅಡಿ ಎತ್ತರದಲ್ಲಿ ವಿಮಾನದ ಇಂಜಿನ್ ಧಗಧಗ ಹೊತ್ತಿ ಉರಿಯುತಿತ್ತು.
  • ಆ ವಿಮಾನದಲ್ಲಿದ್ದ ಎಲ್ಲಾ 231 ಪ್ರಯಾಣಿಕರಿಗೆ ಅಲ್ಲಿ ಕಾಣಿಸಿದ್ದು ಘೋರ ಮೃತ್ಯು.
231 ಜನರ ಕಣ್ಣೆದುರಲ್ಲಿತ್ತು ಘನಘೋರ ಮೃತ್ಯು..! ಅವರಲ್ಲೊಬ್ಬ ಸಾವನ್ನೇ ಸೋಲಿಸಿಬಿಟ್ಟ ..! title=
15 ಸಾವಿರ ಅಡಿ ಎತ್ತರದಲ್ಲಿ ವಿಮಾನ ಧಗಧಗ (PHOTO ANI)

ಡೆನವರ್ : ಇದೊಂದು ನಂಬಲಸಾಧ್ಯವಾದ, ಸಿನಿಮೀಯ ಎನ್ನುವಂಥ ಘಟನೆ.  15000 ಅಡಿ ಎತ್ತರದಲ್ಲಿ  ವಿಮಾನದ ಇಂಜಿನ್ (Flight engine) ಧಗಧಗ ಹೊತ್ತಿ ಉರಿಯುತಿತ್ತು. ಅದರ ಬಿಡಿಭಾಗಗಳು ತೊಪತೊಪ ಕಳಚಿ ಬೀಳುತ್ತಿತ್ತು.  ಆ ವಿಮಾನದಲ್ಲಿದ್ದ ಎಲ್ಲಾ  231 ಪ್ರಯಾಣಿಕರಿಗೆ ಅಲ್ಲಿ ಕಾಣಿಸಿದ್ದು ಘೋರ ಮೃತ್ಯು.  

ಆಗಿದ್ದೇನು ಗೊತ್ತಾ.?:
ಅಮೇರಿಕದ ಬೋಯಿಂಗ್ 777 (Boeing 777) ವಿಮಾನ (flight) ಡೆನವರ್ ನಿಂದ (Denver) ಹವಾಯಿಗೆ (Hawai) ಹಾರಾಟ ಆರಂಭಿಸಿತ್ತು. ಟೇಕಾಫ್ ಆಗಿ ಜಸ್ಟ್ 20 ನಿಮಿಷ  ಆಗಿದೆ ಅಷ್ಟೇ.. ವಿಮಾನದ ಒಳಗೆ ಅಸಾಧ್ಯ ಸೆಖೆ ಶುರುವಾಗಿತ್ತು. ಏನಾಗಿದೆ ಅಂತ ಕಿಟಕಿಯಿಂದ ಹೊರಗೆ ನೋಡಿದವರ ಎದೆ ದಸಕ್ಕೆಂದಿತ್ತು. ಅಲ್ಲಿ ಅವರ ಸಾವು ಕಾಣಿಸುತ್ತಿತ್ತು. ವಿಮಾನದ ಎಂಜಿನ್ (Flight engine) ಒಂದು ಧಗಧಗ ಉರಿಯುತ್ತಿತ್ತು.  ಅದರ ಬಿಡಿಭಾಗ ಕಳಚಿ ಬೀಳುತ್ತಿತ್ತು. ಯಾವುದೇ ಕ್ಷಣದಲ್ಲಿ ಆ ಬೆಂಕಿ (fire) ವಿಮಾನಕ್ಕೆ ಅವರಿಸಿ ವಿಮಾನ ನಡು ಆಕಾಶದಲ್ಲೇ ಬ್ಲಾಸ್ಟ್ ಆಗಿ ಬಿಡುವ ಸಾಧ್ಯತೆ ಇತ್ತು.  ಆ ಇಂಜಿನ್ ಉರಿಯುವ ವಿಡಿಯೋ ಇಲ್ಲಿದೆ.  

 

ಇದನ್ನೂ ಓದಿ : ಲಡಾಖ್ ಗಡಿ ವಿವಾದ: ಭಾರತ-ಚೀನಾ ನಡುವೆ ಹತ್ತನೇ ಸುತ್ತಿನ ಮಾತುಕತೆ

ಸಾವನ್ನೇ ಸೋಲಿಸಿಬಿಟ್ಟ ಆ ಪೈಲೆಟ್.!
ಆ ಬೆಂಕಿ ನೋಡಿ ಮುಳುಗುವ ಟೈಟಾನಿಕ್ (Titanic) ನಂತಾಗಿತ್ತು ಪ್ರಯಾಣಿಕರ ಸ್ಥಿತಿ. ವಿಮಾನದ ಒಳಗೆ ಬೊಬ್ಬೆ. ಬರೀ ಬೊಬ್ಬೆ.  ಆದರೆ, ಅಲ್ಲೊಬ್ಬ ಆಪತ್ಬಾಂಧವ ಇದ್ದ. ಆತ ಮತ್ತಾರೂ ಅಲ್ಲ. ಅದೇ ವಿಮಾನದ ಪೈಲೆಟ್ (Pilot). ಸಾವನ್ನು ಸೋಲಿಸಿ ಬಿಡಲು ಕೊನೆಯ ಅಸ್ತ್ರ ಪ್ರಯೋಗಿಸಿದ್ದ. ಧಗಧಗ ಉರಿಯುತ್ತಿದ್ದ ಸಾವಿನ ವಿಮಾನವನ್ನು ವಾಪಸ್ ಡೆನವೆರ್ ವಿಮಾನ ಅಡ್ಡೆಗೆ ತಿರುಗಿಸಿದ.  ಎಷ್ಟು ಸಾಧ್ಯವೋ ಅಷ್ಟು ಶೀಘ್ರದಲ್ಲಿ ಅದರನ್ನು ಡೆನವರ್ ಏರ್ಪೋಟಿಗೆ ಹಾರಿಸಿ, ಫಟಾಫಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿಬಿಟ್ಟ. ಅಲ್ಲೆ ಕಾಯುತ್ತಿದ್ದ ರಕ್ಷಣಾ ಸಿಬ್ಬಂದಿ ಪ್ರಯಾಣಿಕರನ್ನು (passengers) ಮತ್ತು ಸಿಬ್ಬಂದಿಯನ್ನು ಫಟಾಫಟ್ ಇಳಿಸಿ, ಬೆಂಕಿ ನಂದಿಸಿದರು. ಯಾವುದೇ ಅನಾಹುತ ಆಗಿರಲಿಲ್ಲ. ಎಂಜಿನ್ ಸುಟ್ಟು ಹೋಗಿತ್ತು ಅಷ್ಟೇ. 

ಬದುಕಿದೆಯಾ ಬಡಜೀವಿ ಎಂದು ವಿಮಾನದಿಂದ ಇಳಿದು ಓಡಿ ಬಂದ ಪ್ರಯಾಣಿಕರು ಜೀವ ಉಳಿಸಿದ ಪೈಲೆಟಿಗೆ (Pilot) ಹೃದಯಾಂತರದಿಂದಲೇ ಸಲಾಮ್ ಹೇಳಿದ್ದರು.

ಇದನ್ನೂ ಓದಿ : ಮೊದಲ ಬಾರಿಗೆ ಮನುಷ್ಯನನ್ನೂ ತಲುಪಿದ Bird Flu H5N8 ವೈರಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News