ಮಥುರಾ : ಭಗವಾನ್ ಶ್ರೀಕೃಷ್ಣ ಹುಟ್ಟಿದ ಮಥುರಾನಗರಿಯಲ್ಲಿ(Mathura) ಅಚ್ಚರಿಯೊಂದು ಸಂಭವಿಸಿದೆ. 40 ವರ್ಷದ ರಷ್ಯಾದ ಮಹಿಳೆಯೊಬ್ಬರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಟ್ಟಡದಿಂದ ಹಾರಿ ಅವರು ಆತ್ಮಹತ್ಯೆ (Russian Woman Suicide) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನೀಡಿರುವ ಕಾರಣ ಅಚ್ಚರಿಗೆ ಕಾರಣವಾಗಿದೆ.
ಶ್ರೀಕೃಷ್ಣನಿಗಾಗಿ ಪ್ರಾಣಬಿಟ್ಟರೆ ತಾನ್ಯಾ..?
ಆತ್ಮ ಹತ್ಯೆ ಮಾಡಿಕೊಂಡ ರಷ್ಯಾ ಮಹಿಳೆಯ ಹೆಸರು ತಾನ್ಯಾ.. ಘಟನೆ ನಡೆದಿದ್ದು ಮಥುರೆಯ ವೃಂದಾವನದಲ್ಲಿ( Mathura Vrindavan). ಪೌರಾಣಿಕ ಕಥೆಗಳನ್ನು ಅವಲೋಕಿಸಿದರೆ ಈ ವೃಂದಾವನ ಶ್ರೀ ಕೃಷ್ಣನ (Shri Krishna) ಬಾಲಲೀಲೆಗಳಿಗೆ ಸಾಕ್ಷಿಯಾಗಿತ್ತು. ಈ ನೆಲದಲ್ಲೇ ರಷ್ಯಾ ಮಹಿಳೆ ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ : Coronaಗಿಂತಲೂ ದೊಡ್ಡ ಅಪಾಯದಲ್ಲಿದೆ ಈ ದೇಶ, ಜನ ಸತತವಾಗಿ Suicide ಮಾಡಿಕೊಳ್ಳುತ್ತಿದ್ದಾರಂತೆ
ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದೇನು..?
ತಾನ್ಯಾ ಆತ್ಮಹತ್ಯೆ ಪ್ರಕರಣ ಗೊತ್ತಾಗುತ್ತಿದ್ದಂತೆಯೇ ವೃಂದಾವನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಪೊಲೀಸರ (Police) ಟೀಂ ಸ್ಥಳಕ್ಕೆ ತೆರಳಿ ತನಿಖೆಯಲ್ಲಿ ತೊಡಗಿದೆ. ತಾನ್ಯಾ ಅವರ ಸ್ನೇಹಿತೆಯನ್ನು ಕೂಡಾ ವಿಚಾರಣೆಗೆ ಗುರಿಪಡಿಸಲಾಗಿದೆ. ಈ ವೇಳೆ ಅಚ್ಚರಿಯ ಸಂಗಂತಿ ಹೊರಬಿದ್ದಿದೆ. ತಾನ್ಯಾ ಸ್ನೇಹಿತೆ ಪ್ರಕಾರ, ತಾನ್ಯಾ ಹಲವು ದಿನಗಳಿಂದ ಭಗವಾನ್ ಶ್ರೀಕೃಷ್ಣನಿಗಾಗಿ ಹಂಬಲಿಸುತ್ತಿದ್ದರು. ಶ್ರೀ ಕೃಷ್ಣ ದರ್ಶನಕ್ಕಾಗಿ ( Shri Krishna Darshan) ತವಕಿಸುತ್ತಿದ್ದರು ಎಂದು ಹೇಳಿದ್ದಾರೆ. ಆದರೆ, ಆತ್ಮಹತ್ಯೆಗೆ (Suicide) ಪ್ರಚೋದನೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆತ್ಮಹತ್ಯೆಗೆ ಬೇರೆ ಇನ್ನೇನಾದರೂ ಕಾರಣ ಇರಬಹುದೇ ಎಂದು ಯೋಚಿಸುತ್ತಿದ್ದಾರೆ.
ಆದರೆ, ದೂರದ ರಷ್ಯಾದ ಮಹಿಳೆ ಶ್ರೀಕೃಷ್ಣ ಜನ್ಮಭೂಮಿಗೆ ಬಂದು ಪ್ರಾಣ ಬಿಟ್ಟಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಜಾತಕವನ್ನು ಓದಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ವ್ಯಕ್ತಿ, ಮುಂದೆ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.