ತ್ರಿಪುರದಲ್ಲಿ ಸಿಪಿಎಂ 10 ಸ್ಥಾನ ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಮುನ್ನಡೆ

60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತ್ರಿಪುರ ಸರ್ಕಾರದ ಅಧಿಕಾರಾವಧಿ ಮಾರ್ಚ್ 6, 2018 ರಂದು ಅಂತ್ಯಗೊಳ್ಳಲಿದೆ.  

Last Updated : Mar 3, 2018, 09:09 AM IST
ತ್ರಿಪುರದಲ್ಲಿ ಸಿಪಿಎಂ 10 ಸ್ಥಾನ ಮತ್ತು  ಬಿಜೆಪಿ 10 ಸ್ಥಾನಗಳಲ್ಲಿ ಮುನ್ನಡೆ  title=

ಅಗರ್ತಲಾ: ತ್ರಿಪುರ ವಿಧಾನಸಭಾ ಚುನಾವಣೆಯ ಆರಂಭಿಕ ಪ್ರವೃತ್ತಿ ಪ್ರಾರಂಭಗೊಂಡಿದ್ದು, ಮಧ್ಯಾಹ್ನದ ನಂತರ ಫಲಿತಾಂಶಗಳು ಸ್ಪಷ್ಟವಾಗಿ ಹೊರಬೀಳಲಿದೆ. ಪ್ರಸ್ತುತ ಸಿಪಿಎಂ 10 ಸ್ಥಾನಗಳಲ್ಲಿ ಮುಂದುವರಿಯುತ್ತಿದೆ. ಜೊತೆಗೆ ಬಿಜೆಪಿ ಸಹ ಹತ್ತು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ತ್ರಿಪುರದಲ್ಲಿ ಫೆಬ್ರವರಿ 18 ರಂದು ವಿಧಾನಸಭೆ ಚುನಾವಣೆಯಲ್ಲಿ 2,536,589 ಮತದಾರರ ಪೈಕಿ ಶೇ. 75 ರಷ್ಟು ಮತದಾನ ನಡೆದಿದೆ. ಈ ಬಾರಿ ಶೇಕಡಾವಾರು ಮತದಾನ ಕಳೆದ ಎರಡು ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ತ್ರಿಪುರಾದಲ್ಲಿ 2008 ಮತ್ತು 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.91 ಮತ್ತು ಶೇ. 92 ಮತದಾನವಾಗಿತ್ತು.

ತ್ರಿಪುರದಲ್ಲಿ ಎಡಪಕ್ಷದ 25 ವರ್ಷಗಳ ಅಧಿಕಾರವನ್ನು ನಿರ್ಮೂಲನೆ ಮಾಡಲು ಬಿಜೆಪಿ ಯಶಸ್ವಿಯಾಗುತ್ತದೆಯೇ? 
ಮತ ಎಣಿಕೆಗೆ ಮುಂಚೆಯೇ ಮೊದಲು ಚರ್ಚಿಸಲಾಗುವ ಪ್ರಶ್ನೆಯೆಂದರೆ. ಈಶಾನ್ಯದ ಚುನಾವಣಾ ಫಲಿತಾಂಶಗಳು 292 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ, ಅದರಲ್ಲಿ 23 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಈ ಬಾರಿ 51 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಇಂಡಿಯನ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಕ್ಕೆ 9 ಸ್ಥಾನಗಳನ್ನು ಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಲ್ಲದೆ, ಹಲವು ಹಿರಿಯ ಬಿಜೆಪಿ ನಾಯಕರು ತ್ರಿಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇವೆಲ್ಲಾ ತ್ರಿಪುರದಲ್ಲಿ ಎಡಪಕ್ಷದ 25 ವರ್ಷಗಳ ಅಧಿಕಾರವನ್ನು ನಿರ್ಮೂಲನೆ ಮಾಡಲು ಬಿಜೆಪಿಗೆ ಸಹಾಯ ಮಾಡುತ್ತದೆಯೇ? ಬಿಜೆಪಿ ಯಶಸ್ವಿಯಾಗುತ್ತದೆಯೇ ಎಂಬುದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗುತ್ತದೆ.

ಸಿಪಿಐ (ಎಮ್) ರಾಜ್ಯದಲ್ಲಿ 56 ಅಭ್ಯರ್ಥಿಗಳನ್ನು ಹೊಂದಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಫಾರ್ವರ್ಡ್ ಬ್ಲಾಕ್ ಮತ್ತು ರೆವಲ್ಯೂಶನರಿ ಸೋಷಿಯಲಿಸ್ಟ್ ಪಾರ್ಟಿಗೆ ಪಕ್ಷವು ಒಂದು ಸೀಟಿನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 59 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು, ಆದರೆ ಕಕ್ರಾಬಾನ್-ಶಾಲಾಗ್ರಹದಿಂದ ಪಕ್ಷದ ಅಭ್ಯರ್ಥಿ ಸುಕುಮಾರ್ ಚಂದ್ರ ದಾಸ್ ಅವರು ನಾಮಪತ್ರವನ್ನು ಹಿಂತೆಗೆದು ಬಿಜೆಪಿಗೆ ಸೇರಿದರು. ತೃಣಮೂಲ ಕಾಂಗ್ರೆಸ್ 24 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪ್ರಸ್ತುತ ಎಂಎಲ್ಎ ಮತ್ತು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ರಾಮಂದ್ರ ನಾರಾಯಣ್ ದೇಭರ್ಮಾ ಅವರ ಮರಣದ ಕಾರಣದಿಂದಾಗಿ, ಚರಿಲಮ್ (ಟ್ರೈಬಲ್-ಮೀಸಲಾತಿ) ಕ್ಷೇತ್ರದ ಮತದಾನವನ್ನು ಮಾರ್ಚ್ 12 ಕ್ಕೆ ಮುಂದೂಡಲಾಗಿದೆ. 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತ್ರಿಪುರ ಸರ್ಕಾರದ ಅಧಿಕಾರಾವಧಿ ಮಾರ್ಚ್ 6, 2018 ರಂದು ಅಂತ್ಯಗೊಳ್ಳಲಿದೆ.

'ಮಾಣಿಕ್ ಸರ್ಕಾರ್' ಎಂಬ ಮ್ಯಾಜಿಕ್ ಸಿಎಂ..!
ಮಾಣಿಕ್ ಸರ್ಕಾರ್ ಕಳೆದ 20 ವರ್ಷಗಳಿಂದ ಸತತವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಈ ಬಾರಿ ಐದನೇ ಬಾರಿಗೆ ಧನ್ಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಮಾಣಿಕ್ ಸರ್ಕಾರ್ ಅವರಿಗೆ ಒಂದು ಕ್ಲೀನ್ ಇಮೇಜ್ ಇದೆ. ಅಲ್ಲದೆ ದೇಶದ ಬಡ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅವರು ಜನವರಿ 29 ರಂದು ಚುನಾವಣೆ ತನ್ನ ಅಫಿಡವಿಟ್ ಸಲ್ಲಿಸಿದರು. ಅದರ ಮೂಲಕ ತಿಳಿದು ಬಂದ ಮಾಹಿತಿ ಎಂದರೆ ಅವರ ಬಳಿ ಇರುವುದು ಕೇವಲ  3,930 ರೂ.ಗಳು ಮಾತ್ರ. 69 ವರ್ಷ ವಯಸ್ಸಿನ ನಾಯಕನ ಬಳಿ 1,520 ರೂಪಾಯಿ ನಗದು ಹಣ ಇದ್ದು, 2,410 ರೂಪಾಯಿಯನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. 

Trending News