ದೇಶದ ಸಾಕ್ಷರತೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ, ಅತ್ಯಂತ ತಳಮಟ್ಟದಲ್ಲಿರುವ ರಾಜ್ಯವಿದು

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸಾಕ್ಷರತೆಯ ವಿಷಯದಲ್ಲಿ ಕೇರಳ ಮತ್ತೊಮ್ಮೆ ಪ್ರಥಮ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ.

Last Updated : Sep 8, 2020, 01:37 PM IST
  • ಭಾರತದಲ್ಲಿ ಸಾಕ್ಷರತೆಯ ವಿಷಯದಲ್ಲಿ ಕೇರಳ ಮತ್ತೊಮ್ಮೆ ಪ್ರಥಮ ಸ್ಥಾನ
  • ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಸಾಕ್ಷರತೆ ಪ್ರಮಾಣ 96.2 ರಷ್ಟಿದ್ದರೆ, ಆಂಧ್ರಪ್ರದೇಶ 66.4 ಶೇಕಡಾ.
  • ಸಮೀಕ್ಷೆಯ ಪ್ರಕಾರ ಶೇಕಡಾ 88.7 ರಷ್ಟು ಸಾಕ್ಷರತೆ ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ.
ದೇಶದ ಸಾಕ್ಷರತೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ, ಅತ್ಯಂತ ತಳಮಟ್ಟದಲ್ಲಿರುವ ರಾಜ್ಯವಿದು title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಾಕ್ಷರತೆಯ ವಿಷಯದಲ್ಲಿ ಕೇರಳ ಮತ್ತೊಮ್ಮೆ ಪ್ರಥಮ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ತಳಮಟ್ಟದಲ್ಲಿದೆ. ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಸಾಕ್ಷರತೆ ಪ್ರಮಾಣ 96.2 ರಷ್ಟಿದ್ದರೆ, ಆಂಧ್ರಪ್ರದೇಶ 66.4 ಶೇಕಡಾ. ರಾಷ್ಟ್ರೀಯ ಮಾದರಿ ಸಮೀಕ್ಷೆಯ 75ನೇ ಸುತ್ತಿನಡಿಯಲ್ಲಿ ಜುಲೈ 2017 ರಿಂದ ಜೂನ್ 2018 ರ ನಡುವೆ 'ಕುಟುಂಬ ಸಾಮಾಜಿಕ ಬಳಕೆ: ಭಾರತದಲ್ಲಿ ಶಿಕ್ಷಣ' ಆಧಾರಿತ ಈ ವರದಿಯು ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕುರಿತು ರಾಜ್ಯವಾರು ಮಾಹಿತಿಯನ್ನು ಒದಗಿಸುತ್ತದೆ.

ಸಮೀಕ್ಷೆಯ ಪ್ರಕಾರ ಶೇಕಡಾ 88.7 ರಷ್ಟು ಸಾಕ್ಷರತೆ ಹೊಂದಿರುವ  ದೆಹಲಿ ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡವು ಶೇ .87.6 ರೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಹಿಮಾಚಲ ಪ್ರದೇಶ 86.6 ಶೇಕಡಾ ಮತ್ತು ಅಸ್ಸಾಂ 85.9 ಶೇಕಡಾ ಅಕ್ಷರಸ್ಥರನ್ನು ಹೊಂದಿದೆ. ಮತ್ತೊಂದೆಡೆ, ರಾಜಸ್ಥಾನವು 69.7 ಪ್ರತಿಶತದಷ್ಟು ಸಾಕ್ಷರತೆಯೊಂದಿಗೆ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಮೇಲೆ ಬಿಹಾರ 70.9%, ತೆಲಂಗಾಣ 72.8%, ಉತ್ತರ ಪ್ರದೇಶ 73% ಮತ್ತು ಮಧ್ಯಪ್ರದೇಶ 73.7% ಸಾಕ್ಷರರನ್ನು ಹೊಂದಿದೆ.

ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ಆಗಿದೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆಯ ಪ್ರಮಾಣ ಶೇ. 73.5 ರಷ್ಟಿದ್ದರೆ, ಈ ಪ್ರಮಾಣ ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟಿದೆ. ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 84.7 ರಷ್ಟಿದ್ದರೆ, ಮಹಿಳೆಯರ ಪ್ರಮಾಣ 70.3 ರಷ್ಟಿದೆ. ಎಲ್ಲಾ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಕೇರಳದಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. 97.4 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 95.2 ರಷ್ಟಿದೆ.

ಅದೇ ರೀತಿ ದೆಹಲಿಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ 93.7 ರಷ್ಟಿದ್ದರೆ, ಮಹಿಳೆಯರ ಸಾಕ್ಷರತಾ  ಪ್ರಮಾಣ 82.4 ರಷ್ಟಿದೆ. ಸಾಕ್ಷರತೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ರಾಜ್ಯಗಳಲ್ಲೂ ಸಹ ಪುರುಷರು ಮತ್ತು ಮಹಿಳೆಯರ ಸಾಕ್ಷರತಾ ದರದಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಆಂಧ್ರಪ್ರದೇಶದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 73.4 ರಷ್ಟಿದ್ದರೆ, ಮಹಿಳೆಯರ (ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ) ಸಾಕ್ಷರತೆಯ ಪ್ರಮಾಣ 59.5 ರಷ್ಟಿದೆ. ರಾಜಸ್ಥಾನದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 80. 8 % ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆಯ ಪ್ರಮಾಣ 57.6 % ರಷ್ಟಿದೆ.

ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಬಿಹಾರದಲ್ಲಿ 79.7 ರಷ್ಟು ಪುರುಷರು ಸಾಕ್ಷರರಾಗಿದ್ದರೆ, 60 ಪ್ರತಿಶತ ಮಹಿಳೆಯರು ವಿದ್ಯಾವಂತರು. ಸಮೀಕ್ಷೆಯ ಸಮಯದಲ್ಲಿ  8,097 ಹಳ್ಳಿಗಳಿಂದ 64,519 ಗ್ರಾಮೀಣ ಕುಟುಂಬಗಳು ಮತ್ತು 6,188 ಬ್ಲಾಕ್ಗಳಿಂದ 49,238 ನಗರ ಕುಟುಂಬಗಳ ಮಾದರಿಗಳನ್ನು ದೇಶಾದ್ಯಂತ ತೆಗೆದುಕೊಳ್ಳಲಾಗಿದೆ. ನಾಲ್ಕು ಪ್ರತಿಶತದಷ್ಟು ಗ್ರಾಮೀಣ ಕುಟುಂಬಗಳು ಮತ್ತು 23 ಪ್ರತಿಶತ ನಗರ ಕುಟುಂಬಗಳು ಕಂಪ್ಯೂಟರ್ ಹೊಂದಿದ್ದಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

ವರದಿಯ ಪ್ರಕಾರ 15 ರಿಂದ 29 ವರ್ಷ ವಯಸ್ಸಿನವರಲ್ಲಿ ಸುಮಾರು 24 ಪ್ರತಿಶತದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ನಗರ ಪ್ರದೇಶಗಳಲ್ಲಿ 56 ಪ್ರತಿಶತ ಜನರು ಕಂಪ್ಯೂಟರ್‌ಗಳನ್ನು ಬಳಸುವ ಜ್ಞಾನ ಹೊಂದಿದ್ದಾರೆ. ಸಮೀಕ್ಷೆಗೆ 30 ದಿನಗಳ ಮೊದಲು 15 ರಿಂದ 29 ವರ್ಷದೊಳಗಿನ ಸುಮಾರು 35 ಪ್ರತಿಶತದಷ್ಟು ಜನರು ಇಂಟರ್ನೆಟ್ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ 25 ಪ್ರತಿಶತ ಮತ್ತು ನಗರ ಪ್ರದೇಶಗಳಲ್ಲಿ ಇದು 58 ಪ್ರತಿಶತದಷ್ಟು ಎಂದು ಸಮೀಕ್ಷೆ ತಿಳಿಸಿದೆ.

Trending News