ಸೌಂದರ್ಯವೇ ಶಾಪವಾಯ್ತಾ?.. ಮಹಾಕುಂಭ ಮೇಳದ ವೈರಲ್ ಹುಡುಗಿ ಮೊನಾಲಿಸಾಗೆ ಅಪಾಯ! ಭದ್ರತೆ ನೀಡುವಂತೆ ಮನವಿ..

Maha Kumbh Viral Girl Monalisa: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಪ್ರಯಾಗರಾಜ್‌ನಲ್ಲಿ ಇದೇ ತಿಂಗಳ 13 ರಂದು ಆರಂಭವಾದ ಈ ಮಹಾರಥೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಅಘೋರರು ಆಗಮಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಈ ಸಮಾರಂಭದಲ್ಲಿ ಮತ್ತೊಬ್ಬ ಹುಡುಗಿ ವಿಶೇಷ ಆಕರ್ಷಣೆಯಾಗಿ ನಿಂತಿದ್ದಾಳೆ. 

Written by - Savita M B | Last Updated : Jan 20, 2025, 01:38 PM IST
  • ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿರುವ ಆ ಹುಡುಗಿ ಹೀರೋಯಿನ್ ಅಲ್ಲ
  • ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುವ ಹುಡುಗಿ.
 ಸೌಂದರ್ಯವೇ ಶಾಪವಾಯ್ತಾ?.. ಮಹಾಕುಂಭ ಮೇಳದ ವೈರಲ್ ಹುಡುಗಿ ಮೊನಾಲಿಸಾಗೆ ಅಪಾಯ! ಭದ್ರತೆ ನೀಡುವಂತೆ ಮನವಿ..  title=

Maha Kumbh 2025: ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಆ ಹುಡುಗಿ ಹೀರೋಯಿನ್ ಅಲ್ಲ, ಸೋಷಿಯಲ್ ಮೀಡಿಯಾ ಪ್ರಭಾವಿಯೂ ಅಲ್ಲ.. ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುವ ಹುಡುಗಿ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಇಂದೋರ್‌ನ ಈ ಬೆಡಗಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್‌ ಆಗಿವೆ.. ಆಕೆಯ ಹೆಸರು ಮೋನಾಲಿಸಾ ಎಂದು ವರದಿಯಾಗಿದೆ. ಕುಂಭಮೇಳಕ್ಕೆ ಬಂದಿದ್ದವರು ಆಕೆಯ ಸುಂದರ ನೋಟ ಹಾಗೂ ನಗುವಿಗೆ ಮರುಳಾಗುತ್ತಿದ್ದಾರೆ. ಅದ್ಭುತವಾದ ಕಣ್ಣುಗಳಿಂದ ರಾತ್ರೋ ತಾರಿ ಸ್ಟಾರ್‌ ಆದ ಈ ಚೆಲುವೆಗೆ ಈಗ ಸೌಂದರ್ಯವೇ ಶಾಪವಾದಂತೆ ಭಾಸವಾಗುತ್ತಿದೆ..

 ಫುಟ್‌ಪಾತ್‌ನಲ್ಲಿ ಹೂಮಾಲೆಗಳನ್ನು ಮಾರುವ ಪ್ರಯಾಗ್‌ರಾಜ್ ಮಹಾ ಕುಂಭದ ವೈರಲ್ ಹುಡುಗಿ ಮೊನಾಲಿಸಾ ಅವರು ಸಿನಿಮಾಗಳಲ್ಲಿ ಕೆಲಸ ಮಾಡಲು ಬಯಸುವುದಾಗಿ ಖಾಸಗಿ ಚಾನೆಲ್‌ವೊಂದರ ವಿಶೇಷ ಸಂವಾದದಲ್ಲಿ ಹೇಳಿದ್ದಾರೆ. ಅವರು ಐಶ್ವರ್ಯಾ ರೈ ಬಚ್ಚನ್ ಅವರಂತಹ ಚಿತ್ರಗಳಲ್ಲಿ ಯಶಸ್ವಿಯಾಗಲು ಬಯಸುವುದಾಗಿಯೂ ಹೇಳಿದ್ದಾರೆ.. ಅಲ್ಲದೇ ವೈರಲ್ ಆದ ನಂತರ ಹೆಚ್ಚುತ್ತಿರುವ ಜನರ ಒತ್ತಡದಿಂದಾಗಿ ಆಕೆ ಮಹಾಕುಂಭದಿಂದ ಹೊರಡಲು ತಯಾರಿ ನಡೆಸುತ್ತಿದ್ದೇನೆ.. ಈಗ ಹೊರಗೆ ಬಂದ ಕೂಡಲೇ ಜನ ಸುತ್ತುವರಿಯುತ್ತಿರುವುದರಿಂದ ಭಯವಾಗುತ್ತಿದೆ. ಇದೀಗ ನನ್ನನ್ನು ಮಹಾಕುಂಭದಿಂದ ದೂರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ' ಎಂದು ಮೊನಾಲಿಸಾ ಹೇಳಿದ್ದಾರೆ. 

ಇದನ್ನೂ ಓದಿ-ಬಿಗ್‌ಬಾಸ್‌ ಫಿನಾಲೆ ತಲುಪಲು ಹಣದ ಒಪ್ಪಂದ ಮಾಡಿಕೊಂಡಿದ್ದಾರಾ ಈ ಲೇಡಿ ಸ್ಪರ್ಧಿ! ಕೊನೆಗೂ ಬಹಿರಂಗವಾಯ್ತು ಮಹಾಮೋಸ!

ಸದ್ಯ ತಾನು ಮತ್ತು ತನ್ನ ಕುಟುಂಬದ ಸದಸ್ಯರು ಇಲ್ಲಿ ಭಯಭೀತರಾಗಿದ್ದಾರೆ ಎಂದು ಹೇಳಿದ ಮೋನಾಲಿಸಾ, ಭದ್ರತೆಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ಮಧ್ಯಪ್ರದೇಶದಿಂದ ಬಂದ ನನ್ನ ಭದ್ರತೆಗೆ ಸಿಎಂ ಯೋಗಿ ಆದಿತ್ಯನಾಥ್ ವ್ಯವಸ್ಥೆ ಮಾಡಬೇಕೆಂದ ಮೊನಾಲಿಸಾ, ಹೂಮಾಲೆ ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸುತ್ತಿದ್ದೇನೆ.. ರಾತ್ರೋರಾತ್ರಿ ಸ್ಟಾರ್ ಆದ ಕಾರಣ ನನಗೆ ಏನೂ ಬರುವುದಿಲ್ಲ... ಹೂಮಾಲೆಗಳನ್ನು ಮಾರಲು ಎಲ್ಲೋ ಫುಟ್‌ಪಾತ್‌ನಲ್ಲಿ ಕುಳಿತಾಗ, ಜನರು ತಕ್ಷಣವೇ ಸುತ್ತುವರೆದು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನನಗೆ ತುಂಬಾ ಕಿರುಕುಳವಾಗುತ್ತಿದೆ.. ಜನಸಂದಣಿಯಿಂದಾಗಿ ನನಗೆ ಹಾರವನ್ನು ಮಾರಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ನಾವು ಅಪಾರ ನಷ್ಟವನ್ನು ಅನುಭವಿಸುತ್ತಿದ್ದೇವೆ.. ಸಾಲ ಮಾಡಿ ಲಕ್ಷಗಟ್ಟಲೆ ಸಾಮಾನುಗಳನ್ನು ಹೊತ್ತು ಕುಟುಂಬ ಇಲ್ಲಿಗೆ ಬಂದಿದ್ದೇವೆ." ಎಂದು ಮೊನಾಲಿಸಾ ಹೇಳಿದ್ದಾರೆ.. 

ಸದ್ಯದ ಮಾಹಿತಿಯ ಪ್ರಕಾರ ಆಕೆಗೆ ಸೌಂದರ್ಯವೇ ಶಾಪವಾಗುಂತೆ ಕಾಣುತ್ತಿದ್ದು, ಹೀಗಾಗಿ ಅವರನ್ನು ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿರುವ ಅವರ ಮನೆಗೆ ಕಳುಹಿಸಲು ಕುಟುಂಬ ಸದಸ್ಯರು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.. ಒಟ್ಟಿನಲ್ಲಿ ಈ ವೈರಲ್‌ ಹುಡುಗಿಗೆ ಯಾವುದೇ ಅಪಾಯ ಸಂಭವಿದೇ ಇರಲಿ ಎನ್ನುವುದೇ ಎಲ್ಲರ ಆಶಯ..  

ಇದನ್ನೂ ಓದಿ-ಬಿಗ್‌ಬಾಸ್‌ ಫಿನಾಲೆ ತಲುಪಲು ಹಣದ ಒಪ್ಪಂದ ಮಾಡಿಕೊಂಡಿದ್ದಾರಾ ಈ ಲೇಡಿ ಸ್ಪರ್ಧಿ! ಕೊನೆಗೂ ಬಹಿರಂಗವಾಯ್ತು ಮಹಾಮೋಸ!

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News