ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ 10 ಕೋಟಿ ಕಲೆಕ್ಷನ್ ಮಾಡಿದ್ದ ʼರಾಮಾಚಾರಿʼ!! ಆದರೆ...

ಕ್ರೇಜಿ ಸ್ಟಾರ್‌ ರವಿಚಂದ್ರನ್ ಮತ್ತು ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ನಟಿಸಿರುವ ʼರಾಮಾಚಾರಿʼ ಚಿತ್ರ ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು. ಸೂಪರ್‌ ಡೂಪರ್‌ ಹಿಟ್‌ ಆದ ಈ ಸಿನಿಮಾ ಸತತ ಸೋಲು ಕಂಡಿದ್ದ ರವಿಗೆ ಆನೆಬಲ ತುಂಬಿತ್ತು. ಈ ಚಿತ್ರದ ಕಥೆ ಹಾಗೂ ಹಾಡುಗಳ ಸಿನಿರಸಿಕರಿಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ರವಿಚಂದ್ರನ್‌ ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಹತ್ತಾರು ಬಾರಿ ನೋಡಿದ್ದರು. 

Written by - Puttaraj K Alur | Last Updated : Jan 18, 2025, 11:33 PM IST
  • ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ ಬರೋಬ್ಬರಿ 10 ಕೋಟಿ ಕಲೆಕ್ಷನ್
  • ʼರಾಮಾಚಾರಿʼ ಮೂಲಕ ಕನ್ನಡಿಗ ಮನಸ್ಸು ಗೆದ್ದ ಕ್ರೇಜಿಸ್ಟಾರ್‌ ವಿ.ರವಿಚಂದ್ರನ್
  • ʼಶಾಂತಿ-ಕ್ರಾಂತಿʼ ಸೋಲಿನಿಂದ ಬೇಸತ್ತಿದ್ದ ರವಿಗೆ ʼರಾಮಾಚಾರಿʼಯಿಂದ ಆನೆಬಲ
ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ 10 ಕೋಟಿ ಕಲೆಕ್ಷನ್ ಮಾಡಿದ್ದ ʼರಾಮಾಚಾರಿʼ!! ಆದರೆ... title=
ʼರಾಮಾಚಾರಿʼ ರವಿಚಂದ್ರನ್!!

Ramachari Ravichandran: ಕ್ರೇಜಿ ಸ್ಟಾರ್‌ ರವಿಚಂದ್ರನ್ ಮತ್ತು ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ನಟಿಸಿರುವ ʼರಾಮಾಚಾರಿʼ ಚಿತ್ರ ಕೇವಲ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು. ಸೂಪರ್‌ ಡೂಪರ್‌ ಹಿಟ್‌ ಆದ ಈ ಸಿನಿಮಾ ಸತತ ಸೋಲು ಕಂಡಿದ್ದ ರವಿಗೆ ಆನೆಬಲ ತುಂಬಿತ್ತು. ಈ ಚಿತ್ರದ ಕಥೆ ಹಾಗೂ ಹಾಡುಗಳ ಸಿನಿರಸಿಕರಿಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ರವಿಚಂದ್ರನ್‌ ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಹತ್ತಾರು ಬಾರಿ ನೋಡಿದ್ದರು. 

ಆ ಸಮಯದಲ್ಲಿ ವಿ.ರವಿಚಂದ್ರನ್ ಅವರ ಸಾಲು ಸಾಲು ಸಿನೆಮಾಗಳ ಸೋಲು ಅನ್ನೋದು ಸುಳ್ಳು, ಸಾಲು ಸಾಲು ಸೋಲು ಅನ್ನೋ ಪದ ನೋಡಿದ್ದೇ ರವಿಚಂದ್ರನ್ ಕೊನೆಯ 14 ವರ್ಷಗಳಲ್ಲಿ. ಅಲ್ಲಿವರೆಗೂ ರವಿಯ ಓಟ ಮಿಂಚಿನ ಓಟದಂತೆ ಇತ್ತು. 10 ಸಿನಿಮಾಗಳ ನಷ್ಟವನ್ನ ಒಂದೇ ಸಿನಿಮಾದಲ್ಲಿ (ಶಾಂತಿ ಕ್ರಾಂತಿ) ಅಗಲಿದೆ ಅನ್ನೋದನ್ನ ಅರಿತು ಅತಿ ಕಡಿಮೆ ಅವಧಿಯಲ್ಲಿ ಮಾಡಿದ ಸಿನಿಮಾವೇ ಈ ʼರಾಮಾಚಾರಿʼ. ತನ್ನ ಎಲ್ಲ ಧನವನ್ನು ಹಾಗೂ ಅಧಿಕ ಸಾಲವನ್ನು ಸೇರಿಸಿ ʼಶಾಂತಿ ಕ್ರಾಂತಿʼಗೆ ಸುರಿದ ಕಾರಣ ಬರಿಗೈಲಿ ಶುರು ಮಾಡಿದ ಸಿನಿಮಾ ʼರಾಮಾಚಾರಿʼ. ಆಗ ರವಿಚಂದ್ರನ್ ಅವಶ್ಯ ಹಾಗೂ ಉಳಿದುಕೊಳ್ಳೋ ಉದ್ದೇಶದಿಂದ ಮಾಡಿದ ʼರಾಮಾಚಾರಿʼ ಎಲ್ಲರ ತರ್ಕಕ್ಕೆ ಸಿಲುಕದೆ ದೊಡ್ಡ ಹಿಟ್ ಆದದ್ದು ಈಗ ಇತಿಹಾಸ. ಈ ಸಿನಿಮಾ ಒಂದು ರೀತಿ ಕ್ರೌಡ್ ಫಂಡಿಂಗ್ ಮೂಲಕ ಮಾಡಿದ ಸಿನಿಮಾ. ಇದಕ್ಕೆ ಬಂಡವಾಳವನ್ನ ಹೂಡಿದ್ದು ಬಹುತೇಕ ವಿತರಕರು. ಆದ್ದರಿಂದ ಅದರ ಬಹುತೇಕ ಲಾಭವು ವಿತರಿಕರಿಗೆ ಸಿಕ್ಕಿತ್ತು. ಆದರೆ ರವಿಚಂದ್ರನ್ ಅವರಿಗೆ ದೊಡ್ಡ ಹೆಸರು ಬಂತು…

ಇದನ್ನೂ ಓದಿ: ಚಿತ್ರರಂಗದಲ್ಲಿ ಶಾಕಿಂಗ್‌ ಘಟನೆ..! ನಟಿಯ ಮೇಲೆ ಸಹಾಯಕ ನಿರ್ದೇಶಕನಿಂದ ಅತ್ಯಾಚಾರ..

ʼಶಾಂತಿ-ಕ್ರಾಂತಿʼಯ ಹಣೆಬರಹ ಗೊತ್ತಿದ್ದ ರವಿಯವರಿಗೆ ಅದರ ಖರ್ಚಿನ ಅಸಲು ಕೂಡ ಬರುವುದಿಲ್ಲ ಅನ್ನೋದು ಗೊತ್ತಿತ್ತು. ಆ ಸಮಯದಲ್ಲೇ ಅವರ ತಂದೆ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಹಾಸಿಗೆ ಹಿಡಿದಿದ್ದರು. ತಂದೆಯವರ ಹಾಸ್ಪಿಟಲ್ ಬಿಲ್ಲಿಗೂ ಪರದಾಟ.. ಅದೇ ಸಮಯಕ್ಕೆ ತಮಿಳಿನ ಚಿನ್ನತಂಬಿ ನೋಡಿದ್ದ ರವಿಯವರು ತಮ್ಮ ಸ್ನೇಹಿತೆ ಖುಷ್ಬೂರನ್ನ ಸಿನಿಮಾ ರೈಟ್ಸ್ ಕೊಡಿಸಲು ಮನವಿ ಮಾಡ್ತಾರೆ. ನಿರ್ದೇಶಕರು ಖುಷ್ಬುಗಾಗಿ ಕೇವಲ 1 ಲಕ್ಷಕ್ಕೆ ರೈಟ್ಸ್ ಕೊಡ್ತಾರೆ.. ಆದರೆ ಹೀರೋಯಿನ್ನಾಗಿ ನಟನೆ ಸಾಧ್ಯವಿಲ್ಲದಾಗುತ್ತದೆ. ನಂತರ ಮಾಲಾಶ್ರೀಯವರ ‌12 ದಿನಗಳ ಕಾಲ್ ಶೀಟ್ ಸಿಗುತ್ತದೆ. ಅದುವರೆಗೂ ತನ್ನದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡದ ರವಿಯವರು ರಾಮಾಚಾರಿಯಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಧ್ವನಿಯನ್ನು ಪರಿಚಯಿಸುತ್ತಾರೆ. ʼರಾಮಾಚಾರಿʼ ಕನ್ನಡ ಸಿನಿಮಾಗಳ ಪೈಕಿ ಮೈಲುಗಲ್ಲು ಸೃಷ್ಟಿಸುತ್ತದೆ. 

ಅದುವರೆಗೂ ದುಡ್ಡು ಕೂಡಿಟ್ಟು ಅಭ್ಯಾಸವೇ ಇಲ್ಲದ ರವಿಯವರು ಸ್ವಲ್ಪ ಹಣವನ್ನ ತಮ್ಮ ಭವಿಷ್ಯಕ್ಕಾಗಿ ಕೂಡಿಟ್ಟುಕೊಳ್ತಾರೆ.. ಯಾರು ಏನೇ ಹೇಳಲಿ ರವಿಚಂದ್ರನೆಂಬ‌ ಸುಂದರ ಕನ್ನಡಿಗರ ಹಾಗೂ ಕನ್ನಡ ಚಿತ್ರರಂಗದ ಪಾಲಿಗೆ ಡಾರ್ಲಿಂಗ್ ಅಂದರೆ ತಪ್ಪಾಗಲಿಕ್ಕಿಲ್ಲ. ಅವರೊಳಗೊಬ್ಬ ಪರಿಪೂರ್ಣ ವ್ಯಕ್ತಿ ಇದ್ದಾನೆ, ಸೋತರೂ ನಗುವ, ಜೀವನದ ಏರಿಳಿತದ ಮೆಟ್ಟಿಲುಗಳ ದಾಟಿದ ಒಬ್ಬ ಸಫರ್ಡ್ ಫಿಲಾಸಫರ್ ಇದ್ದಾನೆ.. ಇಂತಹ ರವಿಚಂದ್ರನ್ ಮತ್ತೊಮ್ಮೆ ಕಮ್‌ಬ್ಯಾಕ್‌ ಮಾಡಬೇಕು ಅನ್ನೋದು ಅವರ ಕೋಟ್ಯಂತರ ಅಭಿಮಾನಿಗಳ ಆಸೆಯಾಗಿದೆ. ಹಾಗೆಯೇ ಇಂತಹ ಹಠಮಾರಿ ನಟನಿಗೆ ಕನ್ನಡಿಗರು ಮತ್ತೊಮ್ಮೆ ತಮ್ಮ ಪ್ರೀತಿಯನ್ನು ಕೊಡುವಂತಾಗಲಿ ಎಂದು ಶುಭಹಾರೈಸುವ...

ಇದನ್ನೂ ಓದಿ: ನಿರ್ದೇಶಕನನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾದ ಹಿರಿಯ ನಟಿ! ಯಾರು ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News