Mahakumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ಭಾವಗವಹಿಸಿದ್ದಾರೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಬಹುದು. ಕುಂಭಮೇಳಕ್ಕೆ ಪ್ರಯಾಣ ಬೆಳೆಸಲು ಹುಬ್ಬಳ್ಳಿಯಿಂದ 2 ವಿಶೇಷ ರೈಲುಗಳನ್ನು ಪ್ರಾರಂಭಿಸಲಾಗಿದೆ. ಈ ರೈಲು ಸಂಚಾರದ ಹೆಚ್ಚಿನ ವಿವರಗಳ ಮಾಹಿತಿ ಇಲ್ಲಿದೆ ನೋಡಿ...
ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ
* ರೈಲು ಸಂಖ್ಯೆ 07379 - SSS ಹುಬ್ಬಳ್ಳಿ - ತುಂಡ್ಲಾ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 20ರಂದು (ಸೋಮವಾರ) 00:45 ಗಂಟೆಗೆ SSS ಹುಬ್ಬಳ್ಳಿಯಿಂದ ಹೊರಟು, ಜನವರಿ 22ರಂದು (ಬುಧವಾರ) 02:30 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
ಇದನ್ನೂ ಓದಿ: ಭಾರತದ ʼಸಕ್ಕರೆ ಬಟ್ಟಲುʼ ಎಂದು ಕರೆಯಲ್ಪಡುವ ರಾಜ್ಯ ಯಾವುದು ಗೊತ್ತಾ?
* ರೈಲು ಸಂಖ್ಯೆ 07380 - ತುಂಡ್ಲಾ - SSS ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 23ರಂದು (ಗುರುವಾರ) 16:00 ಗಂಟೆಗೆ ತುಂಡ್ಲಾದಿಂದ ಹೊರಟು, ಜನವರಿ 25ರಂದು (ಶನಿವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
* ರೈಲು ಸಂಖ್ಯೆ 07381 - SSS ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರುವರಿ 6ರಂದು (ಗುರುವಾರ) 20:10 ಗಂಟೆಗೆ SSS ಹುಬ್ಬಳ್ಳಿಯಿಂದ ಹೊರಟು, ಫೆಬ್ರುವರಿ 8ರಂದು (ಶನಿವಾರ) 20:15 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
* ರೈಲು ಸಂಖ್ಯೆ 07382 ತುಂಡ್ಲಾ - SSS ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರುವರಿ 9ರಂದು (ಭಾನುವಾರ) 16:20 ಗಂಟೆಗೆ ತುಂಡ್ಲಾದಿಂದ ಹೊರಟು, ಫೆಬ್ರುವರಿ 11ರಂದು (ಮಂಗಳವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಇದನ್ನೂ ಓದಿ: ಚಿರತೆಗೆ ಹೆದರಿ ಮಕ್ಕಳನ್ನು ಬೋನಿಗೆ ಹಾಕಿದ ತಂದೆ..!
ಈ ಎರಡೂ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸತಾರಾ, ಪುಣೆ, ದೌಂಡ್‌ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ನರಸಿಂಗಪುರ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಜಂಕ್ಷನ್, ಫತೇಪುರ್, ಗೋವಿಂದಪುರಿ ಮತ್ತು ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ರೈಲಿನ ಬೋಗಿಗಳ ಮಾಹಿತಿ: ಈ ರೈಲುಗಳು 1 AC 2 ಟೈರ್, 4 AC ತ್ರಿ ಟೈರ್, 11 ಸ್ಲೀಪರ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಮತ್ತು 1 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ. ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ ಪ್ರಯಾಣಿಕರು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.