ವಿಶೇಷ ಪೊಲೀಸ್‌ ಟೀಂ, 3 ರಾಜ್ಯಗಳಲ್ಲಿ ತೀವ್ರ ಶೋಧ, RGV ಮೇಲೆ ಖಾಕಿ ಹದ್ದಿನ ಕಣ್ಣು..! ಇಷ್ಟಕ್ಕೆಲ್ಲಾ ಕಾರಣ ಆ 1 ಪೋಸ್ಟ್‌..

Ram Gopal Varma : ಸುಮಾರು 40 ಗಂಟೆಗಳು... ವಿಶೇಷ ತಂಡಗಳು... ಮೂರು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ... ಆದರೆ ಫಲಿತಾಂಶವಿಲ್ಲ... ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಲ್ಲಿಯೂ ಪತ್ತೆಯಾಗಿಲ್ಲ. ಪೊಲೀಸರು ತಂತ್ರಗಾರಿಕೆಯಿಂದ ಬೇಟೆಯಾಡುತ್ತಿದ್ದಾರೆ.. ಅಸಲಿಗೆ ಖ್ಯಾತ ಡೈರೆಕ್ಟರ್‌ಗಾಗಿ ಇಷ್ಟೋಂದು ಹುಡುಕಾಟವೇಕೆ..?

Written by - Krishna N K | Last Updated : Nov 27, 2024, 01:07 PM IST
    • ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಿಗಾಗಿ ಪೊಲೀಸರ ಹುಡುಕಾಟ
    • ವಿಷೇಶ ತಂಡಗಳನ್ನು ರಚಿಸಿ ಆರ್‌ಜಿವಿಗಾಗಿ ತೀವ್ರ ಶೋಧ
    • ಆ ಒಂದು ಪೊಸ್ಟ್‌ ಇಷ್ಟೋಂದು ವಿವಾದ ಏಕೆ ಸೃಷ್ಟಿಸಿತು..?
ವಿಶೇಷ ಪೊಲೀಸ್‌ ಟೀಂ, 3 ರಾಜ್ಯಗಳಲ್ಲಿ ತೀವ್ರ ಶೋಧ, RGV ಮೇಲೆ ಖಾಕಿ ಹದ್ದಿನ ಕಣ್ಣು..! ಇಷ್ಟಕ್ಕೆಲ್ಲಾ ಕಾರಣ ಆ 1 ಪೋಸ್ಟ್‌.. title=

RGV Case : ಆಂಧ್ರ ಪ್ರದೇಶ ಪೊಲೀಸರು ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.. ವಿಷೇಶ ತಂಡಗಳನ್ನು ರಚಿಸಿ ಆರ್‌ಜಿವಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.. ಅಸಲಿಗೆ ಎನಾಯ್ತು..? ಸ್ಟಾರ್‌ ಡೈರೆಕ್ಟರ್‌ ಆ ಒಂದು ಪೊಸ್ಟ್‌ ಇಷ್ಟೋಂದು ವಿವಾದ ಏಕೆ ಸೃಷ್ಟಿಸಿತು..? ಬನ್ನಿ ನೋಡೋಣ.. 

ಹೌದು.. ಮಿಸ್ಸಿಂಗ್‌ ಆಗಿರುವ ವರ್ಮಾ "ಜಸ್ಟ್ ಆಸ್ಕಿಂಗ್" ಎಂದು ವಿಡಿಯೋ ರಿಲೀಸ್ ಮಾಡಿದ್ದಾರೆ.. ಅದರಲ್ಲಿ, ಪೊಲೀಸರು ತಮ್ಮನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.. ಅಲ್ಲದೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಯಾರಿಗೋ ಅಂದ್ರೆ.. ಇನ್ಯಾರಿಗೋ ಮನಸ್ಸಿಗೆ ನೋವಾಗಿದೆ.. ಎಂದು ಹಾಸ್ಯ ಚಟಾಕಿ ಹಾರಿಸಿದರು. ಒಂದು ವರ್ಷದ ಹಿಂದೆ ಪೋಸ್ಟ್ ಮಾಡಿದ ಪೋಸ್ಟ್‌ಗಳಿಂದ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದೆಯೇ ಎಂದು ವರ್ಮಾ ಹೇಳಿದರು.

ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಸರಳವಾಗಿರುವ ಈ ಸ್ಪರ್ಧಿ ಲಂಡನ್ ನಲ್ಲಿ ಹೊಂದಿದ್ದಾರೆ ಐಶಾರಾಮಿ ಬಂಗಲೆ, ಹೈ ಎಂಡ್ ಕಾರು !ಈ ಬಾರಿಯ ಅತ್ಯಂತ ಶ್ರೀಮಂತ ಕಂಟೆಸ್ಟೆಂಟ್ ಇವರೇ !  

ಮೂಲತಃ, ಪೊಲೀಸರು ಹಾಕಿರುವ ಸೆಕ್ಷನ್‌ಗಳು ತಮಗೆ ಹೇಗೆ ಅನ್ವಯಿಸುತ್ತವೆಯೇ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ರಾಜಕೀಯ ನಾಯಕರು ಪೊಲೀಸರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಹತ್ಯೆ ಪ್ರಕರಣಗಳು ವರ್ಷಗಟ್ಟಲೆ ನಿರ್ಲಕ್ಷ್ಯವಾಗುತ್ತಿವೆ.. ಆದರೆ ಈ ಪ್ರಕರಣಗಳಲ್ಲಿ ತುರ್ತು ಪರಿಸ್ಥಿತಿ ಏನಿದೆ? ನಾನು ತಲೆಮರೆಸಿಕೊಂಡಿಲ್ಲ, ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಿರ್ಮಾಪಕರಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ತಮಗೆ ನೀಡಿದ ನೋಟಿಸ್‌ಗೆ ಉತ್ತರ ನೀಡಿರುವುದಾಗಿ ವರ್ಮಾ ತಿಳಿಸಿದ್ದಾರೆ.

ಮತ್ತೊಂದೆಡೆ, ಆರ್‌ಜಿವಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ಇಂದು ಎಪಿ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪವನ್ ಮತ್ತು ಲೋಕೇಶ್ ಅವರ ಅನುಚಿತ ಪೋಸ್ಟ್ ಗಳು ಮತ್ತು ಮಾರ್ಫಿಂಗ್ ಫೋಟೋಗಳನ್ನು ಪೋಸ್ಟ್ ಮಾಡಿದ ದೂರಿನ ಮೇಲೆ ಓಂಗೋಲ್, ವಿಶಾಖಪಟ್ಟಣಂ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 

ಇದನ್ನೂ ಓದಿ:ವಿಚ್ಛೇದನ ವದಂತಿ ನಡುವೆ ಪತ್ನಿ ಐಶ್ವರ್ಯ ರೈ ಹಾಗೂ ಮಗಳ ಜೊತೆ ಅಭಿಷೇಕ್‌ ಬಚ್ಚನ್‌ ಜಾಲಿ ರೌಂಡ್ಸ್‌..! ಫೋಟೋಸ್‌ ವೈರಲ್‌  

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರ್‌ಜಿವಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ವರ್ಮಾ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಎಪಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯ ರದ್ದು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಜಾಮೀನು ಅರ್ಜಿ ಸಲ್ಲಿಸಿದರು. ಎಪಿ ಹೈಕೋರ್ಟ್ ಇಂದು ಅರ್ಜಿಯ ವಿಚಾರಣೆ ನಡೆಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News