Maha Kumbh: ಪ್ರಯಾಗರಾಜ್‌ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!

Maha Kumbh: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಇಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಪಾಲ್ಗೊಂಡಿದ್ದರು. 

Written by - Yashaswini V | Last Updated : Jan 21, 2025, 03:13 PM IST
  • ವಿಶ್ವಪ್ರಸಿದ್ಧ ಮಹಾ ಕುಂಭಮೇಳದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ
  • ತಮ್ಮ ಕುಟುಂಬದೊಂದಿಗೆ ಪ್ರಯಾಗರಾಜ್'ಗೆ ಭೇಟಿ ನೀಡಿದ ದೇಶದ ಹೆಸರಾಂತ ಉದ್ಯಮಿ
  • ಮಹಾಕುಂಭವು "ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳ ಮಹಾನ್ ಯಾಗ" - ಗೌತಮ್ ಅದಾನಿ
Maha Kumbh: ಪ್ರಯಾಗರಾಜ್‌ನಲ್ಲಿ ಗೌತಮ್ ಅದಾನಿ, ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ, ಇಸ್ಕಾನ್ ಭಂಡಾರದಲ್ಲಿ ಪ್ರಸಾದ ವಿತರಣೆ..!  title=

Maha Kumbh 2025: ಇಂದು (ಜನವರಿ 21, ಮಂಗಳವಾರ) ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ   ವಿಶ್ವದ ಅತಿದೊಡ್ಡ ಧಾರ್ಮಿಕ ಮಹಾ ಕುಂಭ ಮೇಳದಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಭಾಗವಹಿಸಿದರು.

ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ತಮ್ಮ ಕುಟುಂಬದೊಂದಿಗೆ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದ ಗೌತಮ್ ಅದಾನಿ, ಬಳಿಕ ಇಸ್ಕಾನ್ ಮಂದಿರದ ಭಂಡಾರಕ್ಕೆ ಭೇಟಿ ನೀಡಿ ನೆರೆದಿದ್ದ ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಿದರು. 

ಇದನ್ನೂ ಓದಿ- ಮಹಾಕುಂಭದಲ್ಲಿ ಕಾಣಿಸಿಕೊಂಡ ಪರಶುರಾಮ.. ಗಡದ್ದಾದ ದೇಹ.. ತನ್ನ ಮೈಕಟ್ಟಿನಿಂದ ಸೋಷಿಯಲ್‌ ಮಿಡಿಯಾದಲ್ಲಿ ಕಿಡಿ ಹೊತ್ತಿಸಿದ ಬಾಬಾ

ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಗೌತಮ್ ಅದಾನಿ ಮಹಾಕುಂಭವು "ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳ ಮಹಾನ್ ಯಾಗ" ಎಂದು ತಿಳಿಸಿದ್ದಾರೆ. 

ಗಮನಾರ್ಹವಾಗಿ, ಜನವರಿ 13ರಿಂದ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ ಪ್ರತಿನಿತ್ಯ ಇಸ್ಕಾನ್ ಸಹಯೋಗದೊಂದಿಗೆ ಅದಾನಿ ಗ್ರೂಪ್ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಗೌತಮ್ ಅದಾನಿ, "ಮಹಾ ಕುಂಭದಲ್ಲಿ, @IskconInc ಸಹಯೋಗದೊಂದಿಗೆ, ನಾವು ಭಕ್ತರಿಗಾಗಿ 'ಮಹಾಪ್ರಸಾದ ಸೇವೆ'ಯನ್ನು ಪ್ರಾರಂಭಿಸುತ್ತಿದ್ದೇವೆ, ಇದರಲ್ಲಿ ಉಚಿತ ಆಹಾರವನ್ನು ನೀಡುವುದು ನನ್ನ ಅದೃಷ್ಟ. ತಾಯಿ ಅನ್ನಪೂರ್ಣೆಯ ಆಶೀರ್ವಾದದಿಂದ ಲಕ್ಷಾಂತರ ಜನರಿಗೆ ಆಹಾರ ಒದಗಿಸಲಾಗುವುದು ಎಂದು ತಿಳಿಸಿದರು.  

ಇದಲ್ಲದೆ ಅದಾನಿ ಗ್ರೂಪ್ ಗೀತಾ ಪ್ರೆಸ್‌ನೊಂದಿಗೆ "ಆರತಿ ಸಂಗ್ರಹ"ದ ಒಂದು ಕೋಟಿ ಪ್ರತಿಗಳನ್ನು ಉಚಿತ ವಿತರಣೆ ಮಾಡಲು ಸಹಕರಿಸಿದೆ. 

ಇದನ್ನೂ ಓದಿ- ಮಹಾಕುಂಭಮೇಳಕ್ಕೆ ಮೊಘಲ್ ಸುಲ್ತಾನ್ ಅಕ್ಬರ್ ಖರ್ಚು ಮಾಡಿದ್ದೆಷ್ಟು ಗೊತ್ತಾ?

ಈ ಮಹಾಯಜ್ಞದಲ್ಲಿ ಕುಂಭಮೇಳಕ್ಕೆ ಬರುವ ಭಕ್ತರಿಗೆ ಪ್ರತಿಷ್ಠಿತ ಸಂಸ್ಥೆ ಗೀತಾ ಪ್ರೆಸ್ ಸಹಯೋಗದಲ್ಲಿ ಒಂದು ಕೋಟಿ ಆರತಿ ಸಂಗ್ರಹ ಪ್ರತಿಗಳನ್ನು ಉಚಿತವಾಗಿ ನೀಡುತ್ತಿರುವುದು ನಮಗೆ ಅಪಾರ ಸಂತೋಷವನ್ನು ತಂದಿದೆ ಎಂದವರು ತಿಳಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News