ರೈತನ ಹಣೆಬರಹವನ್ನೇ ಬದಲಾಯಿಸಿದ ಸರ್ಕಾರಿ ಯೋಜನೆ, ಲಕ್ಷಾಂತರ ರೂ. ಲಾಭ ಗಳಿಸಿದ ರೈತನ ಯಶೋಗಾಥೆ!

Govt Scheme: ರಾಜ್ಯ ಸರ್ಕಾರ ರೈತರಿಗೆ ನೀಡುವ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಪಾರಂಪರಿಕ ಕೃಷಿ ಬಿಟ್ಟು ತೋಟಗಾರಿಕೆ ಮಾಡುವ ಮೂಲಕ ರೈತನೋರ್ವ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ಯಶೋಗಾಥೆ ಇದಾಗಿದೆ. 

Written by - Yashaswini V | Last Updated : Nov 13, 2024, 10:59 AM IST
  • ಸಾಂಪ್ರದಾಯಿಕ ಕೃಷಿ ಪದ್ದತಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ರೈತ
  • ಸರ್ಕಾರದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಯಶಸ್ಸು ಕಂಡ ರೈತ
  • ಈ ರೈತನ ಸಾಧನೆ ಇತರ ರೈತರಿಗೂ ಮಾದರಿ...
ರೈತನ ಹಣೆಬರಹವನ್ನೇ ಬದಲಾಯಿಸಿದ ಸರ್ಕಾರಿ ಯೋಜನೆ, ಲಕ್ಷಾಂತರ ರೂ. ಲಾಭ ಗಳಿಸಿದ ರೈತನ ಯಶೋಗಾಥೆ!  title=

Farmer Success Story: ರೈತರ ಜೀವನವನ್ನು ಉತ್ತಮಗೊಳಿಸುವ ಸಲುವಾಗಿ ಕೇಂದ್ರ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಆಗಾಗ್ಗೆ ಪರಿಚಯಿಸುತ್ತಲೇ ಇರುತ್ತವೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಕಷ್ಟವಿಲ್ಲದೆ ಸುಖ ಅನುಭವಿಸಲು ಸಾಧ್ಯವೇ ಇಲ್ಲ. ಸರ್ಕಾರ ಯೋಜನೆಗಳನ್ನು ಪರಿಚಯಿಸಿದರೂ ಸಹ ರೈತರು ಅದರ ಸದುಪಯೋಗಪಡಿಸಿಕೊಳ್ಳಲು ಮುಂದಾಗದಿದ್ದರೆ ಅದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಈ ವರದಿಯಲ್ಲಿ ರೈತನ ಹಣೆಬರಹವನ್ನೇ ಬದಲಾಯಿಸಿದ ಸರ್ಕಾರಿ ಯೋಜನೆಯ ಬಗ್ಗೆ ವಿಶೇಷ ಮಾಹಿತಿಯಿದೆ. 

ಸಾಂಪ್ರದಾಯಿಕ ಕೃಷಿ ಪದ್ದತಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ರೈತನೊಬ್ಬ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ತೋಟಗಾರಿಕೆ ಮೂಲಕ ಸಿರಿವಂತನಾದ ಯಶಸ್ಸಿನ ಕಥೆಯಿದು. ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಮಂದನ್ ಗ್ರಾಮದ ನಿವಾಸಿ ನೀಲೇಶ್ ಪಾಟಿದಾರ್ ಎಂಬ ವ್ಯಕ್ತಿಯೇ ಪಾರಂಪರಿಕ ಕೃಷಿ ಬಿಟ್ಟು ತೋಟಗಾರಿಕೆಯಲ್ಲಿ ಅದೃಷ್ಟ ಪರೀಕ್ಷಿಸಿ ಯಶಸ್ವಿಯಾದ ರೈತ. 

ಹೌದು, ಮಧ್ಯಪ್ರದೇಶ ಸರ್ಕಾರ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಜಾರಿಗೆ ತಂದಿರುವ ಸಂರಕ್ಷಿತ ಬೇಸಾಯದ ಸದುಪಯೋಗ ಪಡೆದ ರೈತಾನೊಬ್ಬ ತೋಟಗಾರಿಕೆಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ರಾಜ್ಯದ ಜನರಿಗೆ ಮತ್ತೊಂದು ಶಾಕ್..! ಸದ್ಯದಲ್ಲೇ ಏರಿಕೆ ಆಗಲಿದೆ ಬಸ್ ಟಿಕೆಟ್ ದರ

ಮೊದಲಿತೆ ಒಂದು ಎಕರೆ ಜಮೀನಿನಲ್ಲಿ ನೆಟ್ ಹೌಸ್ ನಿರ್ಮಿಸಿ ತೋಟಗಾರಿಗಕೆ ಆರಂಭಿಸಿ ಉತ್ತಮ ಲಾಭ ಗಳಿಸಿದ ರೈತ ನೀಲೇಶ್ ಪಾಟೀದಾರ್ ಬಳಿಕ ಮೂರು ಎಕರೆ ಜಮೀನಿನಲ್ಲಿ ನೆಟ್ ಹೌಸ್ ನಿರ್ಮಿಸಿ ದೇಶೀ ಸೌತೆಕಾಯಿ ಬೆಳೆ ಬೆಳೆಯುವ ಮೂಲಕ ಬರೋಬ್ಬರಿ 28 ಲಕ್ಷದ 35 ಸಾವಿರ ರೂ. ಆದಾಯ ಗಳಿಸಿದ್ದಾರೆ. ರೈತ ನೀಲೇಶ್ ಅವರಿಗೆ ಖರ್ಚು-ವೆಚ್ಚಗಳೆಲ್ಲಾ ಕಳೆದು ಬರೋಬ್ಬರಿ 22 ಲಕ್ಷ ರೂ.ಗಳಷ್ಟು ಉಳಿತಾಯವಾಗಿದೆಯಂತೆ. 

ಹಣ್ಣಿನ ಬೆಳೆಯಲ್ಲೂ ಅದೃಷ್ಟ ಪರೀಕ್ಷಿಸಿದ್ದ ಕೃಷಿಕ ನೀಲೇಶ್: 
ತರಕಾರಿ ಬಳಿಕ ಹಣ್ಣಿನ ಬೆಳೆಯಲ್ಲೂ ಆಸಕ್ತಿ ತೋರಿದ ರೈತ ನೀಲೇಶ್ ತಮ್ಮ 4 ಎಕರೆ ಜಮೀನಿನಲ್ಲಿ ಸುಮಾರು 4000 ಸೀಬೆ ಗಿಡಗಳನ್ನು ನೆಟ್ಟು 700 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಇದರ ಮಾರಾಟದಿಂದಲೂ ಈತ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ ಎನ್ನಾಲಾಗಿದೆ. 

ಇದನ್ನೂ ಓದಿ- KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್…!

ಕೃಷಿಯಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿರುವ ರೈತ ನೀಲೇಶ್ ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ರೈತರು ಕೃಷಿಯಲ್ಲಿ ಹೊಸ ವಿಧಾನ, ಸುಧಾರಿತ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡರೆ ಅವರ ಆರ್ಥಿಕ ಸ್ಥಿತಿ ಬಲಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News