ಅಪ್ಪಿ ತಪ್ಪಿಯೂ ನಿಮ್ಮ ಸಂಗಾತಿಗೆ ಈ ರೀತಿ "ಲಿಪ್‌ ಕಿಸ್" ಮಾಡಬೇಡಿ..! ಕಾಮಿಡಿ ಅಲ್ಲ ಬ್ರೋ ಇದು ನಿಜ..

Cold Sores : "ಕಿಸ್" ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ರೊಮ್ಯಾಂಟಿಕ್ ಭಾವನೆಗಳಿಂದ ಮಾತ್ರವಲ್ಲದೆ ಪ್ರೀತಿಯಿಂದ ಚುಂಬಿಸುವುದು ಸಹಜ. ಆದರೆ ಈ ಮುತ್ತುಗಳು ಕೆಲವೊಮ್ಮೆ ನಮಗೆ ತಿಳಿಯದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
 

1 /11

ಪ್ರೀತಿ ಪರಿಭಾಷೆ ಕಿಸ್‌.. ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳೇ ಇಲ್ಲವಾದಾಗ ಉದ್ಭವಿಸುವ "ಮುತ್ತು" ಒಂದು ಭಾವನೆ ರೂಪ.. ಅಂದಹಾಗೆ ಕಿಸ್‌ ನೀಡಲು ಕೆಲವೊಂದಿಷ್ಟು ನಿಯಮಗಳೂ ಇವೆ.. ಹಾಗಾಗಿ ಈ ಕೆಳಗೆ ನೀಡಿರುವ ಸಮಸ್ಯೆ ಹೊಂದಿರುವ ಜನರು ಅಪ್ಪಿ ತಪ್ಪಿಯೂ ಸಂಗಾತಿಗೆ ಮುತ್ತಿಕ್ಕ ಬೇಡಿ..    

2 /11

ನಿಮಗೆ ಬಾಯಿಯ ಸುತ್ತ ಅಥವಾ ಗಲ್ಲದ ಬಳಿ ಶೀತ ಹುಣ್ಣುಗಳಾಗಿದ್ದರೆ ಸಂಗಾತಿನ್ನು ಚುಂಬಿಸಿದರೆ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV-1) ಸೋಂಕಿನ ಅಪಾಯ ಹೆಚ್ಚಾಗುತ್ತದೆ.  

3 /11

ಈ ಸೋಂಕಿಗೆ ಒಳಗಾದವರ ತುಟಿಗಳ ಸುತ್ತಲೂ ಕಿವು ತುಂಬಿದ ಶೀತ ಹುಣ್ಣುಗಳಾಗಿರುತ್ತವೆ. ಅವು ಬಿಳಿ ಗುಳ್ಳೆಗಳಂತೆ ಕಾಣುತ್ತವೆ.  

4 /11

ಈ ಹುಣ್ಣುಗಳು ಸಾಮಾನ್ಯವಾಗಿ ಎರಡು ಮೂರು ವಾರಗಳಲ್ಲಿ ವಾಸಿಯಾಗುತ್ತವೆ. ಗಾಯಗಳ ಜೊತೆಗೆ ಸೋಂಕು ಮಾಯವಾಗುತ್ತದೆ.   

5 /11

ಆದರೂ, HSV-1 ನಿಂದ ಉಂಟಾಗುವ ಈ ಹುಣ್ಣುಗಳು ಒಬ್ಬರಿಂದ ಒಬ್ಬರಿಗೆ ಬಹುಬೇಗನೇ ಹರಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.  

6 /11

ಈ ರೋಗದ ವೈರಸ್ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವಿಶೇಷವಾಗಿ ಚುಂಬಿಸುವಾಗ ಹರಡುತ್ತದೆ.  

7 /11

ಈ ಶೀತ ಹುಣ್ಣಿನ ದ್ರವ ವೈರಸ್‌ನಿಂದ ತುಂಬಿರುತ್ತದೆ. ಆಗ ಆ ವ್ಯಕ್ತಿ ಆರೋಗ್ಯವಂತ ಸಂಗಾತಿಯನ್ನು ಚುಂಬಿಸಿದಾಗ, ವೈರಸ್ ಹರಡುತ್ತದೆ.  

8 /11

ಸೋಂಕಿತ ವ್ಯಕ್ತಿಯ ಬಾಯಿಯಲ್ಲಿರುವ ಲಾಲಾರಸದ ಮೂಲಕವೂ ಈ ವೈರಸ್ ಸಂಗಾತಿಗೆ ಹರಡುತ್ತದೆ. ಚರ್ಮದ ಸಂಪರ್ಕದ ಮೂಲಕವೂ ಹರಡುವ ಅಪಾಯವಿದೆ..  

9 /11

ಈ ಹುಣ್ಣು ಒಡೆಯುದಾಗ ಹೊರಬರುವ ದ್ರವದಲ್ಲಿಯೂ ವೈರಸ್‌ ಇರುತ್ತದೆ.. ಅದಕ್ಕಾಗಿಯೇ ನೀವು ಒಂದೇ ಗಾಜು, ಟವೆಲ್ ಅಥವಾ ರೇಜರ್ ಬಳಸಬಾರದು.   

10 /11

ಈ ಹುಣ್ಣಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಚುಂಬಿಸಬೇಡಿ. ಹತ್ತಿರವಾಗುವುದೂ ಒಳ್ಳೆಯದಲ್ಲ. ಲಿಪ್ ಬಾಮ್, ಗ್ಲಾಸ್, ಟವೆಲ್ ಅಥವಾ ರೇಜರ್‌ನಂತಹ ಅವರ ವಸ್ತುಗಳನ್ನು ಮುಟ್ಟಬೇಡಿ.. ನಿಮ್ಮ ವಸ್ತುಗಳನ್ನೂ ಕೊಡಬೇಡಿ..  

11 /11

ಮುಖ್ಯವಾಗಿ ಅವರ ಮುಖವನ್ನು ಮುಟ್ಟಿದ ನಂತರ ಕೈ ತೊಳೆಯುವುದು ವೈರಸ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸೋಂಕು ಇರುವವರು ವೈದ್ಯರ ಸಲಹೆಯಂತೆ ಆ್ಯಂಟಿ ವೈರಸ್ ಔಷಧಗಳನ್ನು ಬಳಸಿ.. ಹುಣ್ಣುಗಳ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಅವು ಮರುಕಳಿಸದಂತೆ ತಡೆಯಬಹುದು.