ಯೂರಿಕ್ ಆಸಿಡ್ ನಿಂದ ಬಳಲುತ್ತಿರುವವರು ಈ ಬೇಳೆ ಕಾಳುಗಳನ್ನು ತಪ್ಪಿಯೂ ಸೇವಿಸಬಾರದು! ಕಿಡ್ನಿ ಸ್ಟೋನ್ ಆಗುವ ಅಪಾಯ ಕಾಡುತ್ತದೆ

ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಯೂರಿಕ್ ಆಸಿಡ್ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು. ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ ಈ ಬೆಲೆ ಕಾಳುಗಳನ್ನು ಸೇವಿಸಲೇಬಾರದು.   

Written by - Ranjitha R K | Last Updated : Sep 17, 2024, 04:58 PM IST
  • ಹೈ ಯೂರಿಕ್ ಆಸಿಡ್ ಸಮಸ್ಯೆ ಸಾಮಾನ್ಯವಾಗಿದೆ
  • ಯೂರಿಕ್ ಆಸಿಡ್ ನಮ್ಮ ದೇಹದಲ್ಲಿನ ಒಂದು ರೀತಿಯ ತ್ಯಾಜ್ಯ ವಸ್ತುವಾಗಿದೆ.
  • ಇದು ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ.
ಯೂರಿಕ್ ಆಸಿಡ್ ನಿಂದ ಬಳಲುತ್ತಿರುವವರು ಈ ಬೇಳೆ ಕಾಳುಗಳನ್ನು ತಪ್ಪಿಯೂ ಸೇವಿಸಬಾರದು! ಕಿಡ್ನಿ ಸ್ಟೋನ್ ಆಗುವ ಅಪಾಯ ಕಾಡುತ್ತದೆ  title=

Pulses To Avoid In High Uric Acid: ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯಿಂದಾಗಿ,ಹೈ ಯೂರಿಕ್ ಆಸಿಡ್ ಸಮಸ್ಯೆ  ಸಾಮಾನ್ಯವಾಗಿದೆ.ಯೂರಿಕ್ ಆಸಿಡ್ ನಮ್ಮ ದೇಹದಲ್ಲಿನ ಒಂದು ರೀತಿಯ ತ್ಯಾಜ್ಯ ವಸ್ತುವಾಗಿದೆ. ಇದು ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಮೂತ್ರಪಿಂಡವು ಅದನ್ನು  ಪ್ಯುರಿಫೈ ಮಾಡಿ ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತದೆ. ಆದರೆ ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಅದನ್ನು ಸಂಪೂರ್ಣವಾಗಿ ಹೊರಹಾಕಲು ಸಾಧ್ಯವಾಗುವುದಿಲ್ಲ.ಹೀಗಾದಾಗ ಇದು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಈ ಕಾರಣದಿಂದಾಗಿ,ನೋವು, ಊತ ಮತ್ತು ನಡೆದಾಡಲು ಸಮಸ್ಯೆಯಾಗುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು, ಆಹಾರಕ್ರಮದತ್ತ ವಿಶೇಷ ಗಮನ ನೀಡಬೇಕು.ಯೂರಿಕ್ ಆಸಿಡ್  ನಿಯಂತ್ರಿಸಬೇಕಾದರೆ ಕೆಲವು ಬೇಳೆ ಕಾಳುಗಳನ್ನು ಸೇವಿಸಲೇಬಾರದು.

ಮಸೂರ್ ದಾಲ್  :
ಮಸೂರ್  ದಾಲ್ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಆದರೆ ಅವುಗಳು ಹೆಚ್ಚಿನ ಪ್ಯೂರಿನ್‌ಗಳನ್ನು ಹೊಂದಿರುತ್ತವೆ. ಯೂರಿಕ್ ಆಮ್ಲದ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಈ ಬೇಳೆಯನ್ನು ಸೇವಿಸಬಾರದು.

ಇದನ್ನೂ ಓದಿ : ಎಚ್ಚರಿಕೆ..! ಮಳೆಗಾಲದಲ್ಲಿ ನೆಗಡಿ-ಕೆಮ್ಮು ಮಾತ್ರವಲ್ಲ, ಈ ರೋಗಗಳು ಬರುತ್ತವೆ..!

ಉದ್ದಿನಬೇಳೆ : 
ಅಧಿಕ ಯೂರಿಕ್ ಆಸಿಡ್ ಹೊಂದಿರುವ ರೋಗಿಗಳು ಉದ್ದಿನಬೇಳೆಯನ್ನು ಸೇವಿಸಬಾರದು.ಇದರಲ್ಲಿ ಕೂಡಾ ಹೆಚ್ಚಿನ ಪ್ರಮಾಣದ ಪ್ಯೂರಿನ್ ಕಂಡುಬರುತ್ತದೆ.  ಇದು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ.ಹಾಗಾಗಿ   ಕೀಲುಗಳಲ್ಲಿ ಊತ ಮತ್ತು ನೋವಿನ ಸಮಸ್ಯೆ ಹೆಚ್ಚಾಗಬಹುದು.

ಕಡಲೆ ಬೇಳೆ :
ಯೂರಿಕ್ ಆಸಿಡ್ ರೋಗಿಗಳು ತಮ್ಮ ಆಹಾರದಲ್ಲಿ ಕಡಲೆ ಬೇಳೆಯನ್ನು ಕೂಡಾ ಸೇವಿಸಬಾರದು.ಇದರ ಸೇವನೆಯು ದೇಹದಲ್ಲಿ ಪ್ಯೂರಿನ್ ವಿಭಜನೆಯನ್ನು ಹೆಚ್ಚಿಸುತ್ತದೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ.ಗೌಟ್ ಮತ್ತು ಕೀಲು ನೋವಿನಿಂದ ಬಳಲುತ್ತಿರುವವರು, ಕಡಲೆ ಬೇಳೆಯನ್ನು ಸೇವಿಸಬಾರದು. 

ತೊಗರಿಬೇಳೆ : 
ತೊಗರಿಬೇಳೆಯನ್ನು ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತದೆ. ಆದರೆ ಯೂರಿಕ್ ಆಸಿಡ್ ಸಮಸ್ಯೆ ಕಾಡುತ್ತಿದ್ದರೆ ತೊಗರಿಬೇಳೆಯಿಂದ ದೂರವಿರುವುದೇ ಒಳ್ಳೆಯದು. ಇದರ ಸೇವನೆಯಿಂದ ಯೂರಿಕ್ ಆಮ್ಲದ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. 

ಇದನ್ನೂ ಓದಿ : ಕಡಿಮೆ ನಿದ್ರೆಯಿಂದ ಬರಲಿದೆ ಅಕಾಲಿಕ ಮರಣ, ಗಂಭೀರ ಕಾಯಿಲೆ...!

ಅಲಸಂಡೆ ಬೀಜ : 
ಯೂರಿಕ್ ಆಸಿಡ್ ರೋಗಿಗಳು ಅಲಸಂಡೆ ಬೀಜ ವನ್ನು ಕೂಡಾ ಸೇವಿಸಬಾರದು. ಇದು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದರೂ, ಯೂರಿಕ್ ಆಸಿಡ್ ಹೆಚ್ಚಾಗಲು ಕಾರಣವಾಗುತ್ತದೆ. 

 

(ಸೂಚನೆಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News