New rules for buying SIM cards : ದೂರಸಂಪರ್ಕ ಇಲಾಖೆ (DoT) ಮೂಲಕ ಸಿಮ್ ಕಾರ್ಡ್ಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ.ಈಗ Airtel,Jio,BSNL ಮತ್ತು Viನಂತಹ ದೊಡ್ಡ ಟೆಲಿಕಾಂ ಆಪರೇಟರ್ಗಳಿಂದ SIM ಕಾರ್ಡ್ಗಳನ್ನು ಖರೀದಿಸುವುದು ತುಂಬಾ ಸುಲಭ ಮತ್ತು ಸುರಕ್ಷಿತವಾಗಿದೆ.ಈ ಹೊಸ ನಿಯಮಗಳ ಅಡಿಯಲ್ಲಿ,ಸಂಪೂರ್ಣ ಪ್ರಕ್ರಿಯೆಯು ಪೇಪರ್ ಲೆಸ್ ಆಗಿದೆ.ಇದು ಭಾರತೀಯ ಬಳಕೆದಾರರಿಗೆ ಹೆಚ್ಚು ಅನುಕೂಲಕರ ಮತ್ತು ವಂಚನೆ-ಮುಕ್ತವಾಗಿದೆ.
ಕುಳಿತಲ್ಲಿಯೇ ನಡೆದು ಹೋಗುವುದು ಕೆಲಸ :
ಹೊಸ ನಿಯಮಗಳೊಂದಿಗೆ, ಸಿಮ್ ಕಾರ್ಡ್ ಖರೀದಿಸಲು ಅಥವಾ ನಿಮ್ಮ ಟೆಲಿಕಾಂ ಆಪರೇಟರ್ ಅನ್ನು ಬದಲಾಯಿಸಲು ಟೆಲಿಕಾಂ ಕಂಪನಿ ಕಚೇರಿಗೆಯೇ ಭೇಟಿ ನೀಡಬೇಕಾಗಿಲ್ಲ.ಈ ಇಡೀ ಪ್ರಕ್ರಿಯೆ ಆನ್ಲೈನ್ ಆಗಿರಲಿದೆ.ಆದ್ದರಿಂದ,ನೀವು ಹೊಸ ಸಿಮ್ ಕಾರ್ಡ್ ಪಡೆಯಲು ಅಥವಾ ನಿಮ್ಮ ಟೆಲಿಕಾಂ ಆಪರೇಟರ್ ಅನ್ನು ಬದಲಾಯಿಸಬೇಕಾದರೆ,ಡಾಕ್ಯುಮೆಂಟ್ಗಳನ್ನು ಯಾವುದೇ ತೊಂದರೆಯಿಲ್ಲದೆ ಆನ್ಲೈನ್ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ : iPhone 16 Plus VS Samsung Galaxy S24 Plus: ಯಾವ ಸ್ಮಾರ್ಟ್ಫೋನ್ ಉತ್ತಮವಾಗಿದೆ?
DoT ಪ್ರಕಟಣೆ :
ಎಕ್ಸ್ ನಲ್ಲಿ ಹೊಸ ನಿಯಮಗಳ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.ಈ ನಿಯಮಗಳು ವಂಚನೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಅಡಿಯಲ್ಲಿ ಸಿಮ್ ಕಾರ್ಡ್ಗಳನ್ನು ಖರೀದಿಸುವ ಪ್ರಕ್ರಿಯೆ ಸುಲಭವಾಗುತ್ತದೆ.ವಂಚನೆಯಿಂದ ಜನರನ್ನು ರಕ್ಷಿಸುವುದು ಮತ್ತು ಭಾರತವನ್ನು ಡಿಜಿಟಲ್ ರಾಷ್ಟ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ.ಸರ್ಕಾರವು ಇ-ಕೆವೈಸಿ ಮತ್ತು ಸ್ವಯಂ-ಕೆವೈಸಿ ಆರಂಭಿಸಿದೆ.ಈಗ ನೀವು ಸಿಮ್ ಕಾರ್ಡ್ ಖರೀದಿಸಲು ಅಥವಾ ಪ್ರಿಪೇಯ್ಡ್ ಅನ್ನು ಪೋಸ್ಟ್ಪೇಯ್ಡ್ ಅಥವಾ ಪೋಸ್ಟ್ಪೇಯ್ಡ್ ಅನ್ನು ಪ್ರಿಪೇಯ್ಡ್ಗೆ ಬದಲಾಯಿಸಲು ಟೆಲಿಕಾಂ ಕಂಪನಿಯ ಕಚೇರಿಗೆ ಹೋಗುವ ಅಗತ್ಯವಿಲ್ಲ. ಎಲ್ಲವನ್ನೂ ಆನ್ಲೈನ್ನಲ್ಲಿ ಮಾಡಬಹುದು.
ವಂಚನೆಯಾಗುವ ಪ್ರಮೇಯವೇ ಇಲ್ಲ :
ಹೊಸ ವ್ಯವಸ್ಥೆಯಿಂದ ಜನರ ದಾಖಲೆಗಳು ದುರುಪಯೋಗವಾಗುವುದಿಲ್ಲ.ಹೀಗೆ ಮಾಡುವುದರಿಂದ ನಕಲಿ ಸಿಮ್ ಕಾರ್ಡ್ಗಳನ್ನು ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ.ಇದರಿಂದ ವಂಚನೆ ಕಡಿಮೆಯಾಗುತ್ತದೆ.
ಇದನ್ನೂ ಓದಿ : ಸೈಬರ್ ದಾಳಿಯನ್ನು ತಪ್ಪಿಸಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಸೆಟ್ಟಿಂಗ್ಗಳನ್ನು ಆನ್ ಮಾಡಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.