'ಬಿಜೆಪಿ ಮೆಹಬೂಬಾ ಮುಫ್ತಿಯನ್ನು ಅಯೋಧ್ಯೆಗೆ ಕರೆದೊಯ್ಯುತ್ತದೆಯೇ?': ಸಂಜಯ್ ರೌತ್

ಮಹಾ ವಿಕಾಸ್ ಅಘಾಡಿ (ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ) ಸರ್ಕಾರದ 100 ದಿನಗಳ ಪೂರ್ಣಗೊಂಡ ದಿನ ಉದ್ಧವ್ ಠಾಕ್ರೆ ಭಗವಾನ್ ರಾಮನಿಗೆ ಗೌರವ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡುವುದಾಗಿ ಶಿವಸೇನೆ ಈ ಹಿಂದೆ ಘೋಷಿಸಿತ್ತು.  

Last Updated : Jan 25, 2020, 02:10 PM IST
'ಬಿಜೆಪಿ ಮೆಹಬೂಬಾ ಮುಫ್ತಿಯನ್ನು ಅಯೋಧ್ಯೆಗೆ ಕರೆದೊಯ್ಯುತ್ತದೆಯೇ?': ಸಂಜಯ್ ರೌತ್ title=

ಮುಂಬೈ (ಮಹಾರಾಷ್ಟ್ರ): ರಾಹುಲ್ ಗಾಂಧಿಯನ್ನು ತಮ್ಮೊಂದಿಗೆ ಅಯೋಧ್ಯೆಗೆ ಕರೆದೊಯ್ಯುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಕೇಳಿದ ಭಾರತೀಯ ಜನತಾ ಪಕ್ಷ(BJP)ಕ್ಕೆ ತಿರುಗೇಟು ನೀಡಿರುವ ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರೌತ್, ಬಿಜೆಪಿ ನಾಯಕರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಈ ವರ್ಷದ ಮಾರ್ಚ್ 7 ರಂದು ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಹಿಂದಿನ ದಿನ ಶಿವಸೇನೆ ಮುಖಂಡರು ದೃಢಪಡಿಸಿದರು. ಮಹಾ ವಿಕಾಸ್ ಅಘಾಡಿ (ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ) ಸರ್ಕಾರದ 100 ದಿನಗಳ ಪೂರ್ಣಗೊಂಡ ದಿನ ಉದ್ಧವ್ ಠಾಕ್ರೆ ಭಗವಾನ್ ರಾಮನಿಗೆ ಗೌರವ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡುವುದಾಗಿ ಶಿವಸೇನೆ ಈ ಹಿಂದೆ ಘೋಷಿಸಿತ್ತು.

"ಮಹಾ ವಿಕಾಸ್ ಅಘಾಡಿ ಸರ್ಕಾರದ 100 ದಿನಗಳ ಪೂರ್ಣಗೊಂಡ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಗವಾನ್ ರಾಮನಿಗೆ ಗೌರವ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ" ಎಂದು ಶಿವಸೇನೆ ವಕ್ತಾರ ಸಂಜಯ್ ರೌತ್ ಜನವರಿ 22 ರಂದು ಹೇಳಿದರು. ಮೈತ್ರಿ ಪಾಲುದಾರರ ಸಚಿವರು (ಕಾಂಗ್ರೆಸ್, ಎನ್‌ಸಿಪಿ) ಸಹ ಮುಖ್ಯಮಂತ್ರಿಯೊಂದಿಗೆ ಹೋಗಬಹುದು ಎಂದು ಅವರು ತಿಳಿಸಿದ್ದರು.

ಈ ಹೇಳಿಕೆಗೆ ಟಾಂಗ್ ನೀಡಿದ್ದ ಬಿಜೆಪಿ ರಾಹುಲ್ ಗಾಂಧಿಯವರನ್ನು ತಮ್ಮೊಂದಿಗೆ ಅಯೋಧ್ಯೆಗೆ ಕರೆದೊಯ್ಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ವ್ಯಂಗ್ಯವಾಡಿದ್ದರು.

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಬಹುಮತವನ್ನು ಸಾಬೀತುಪಡಿಸುವಲ್ಲಿ ವಿಫಲವಾದ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾಯಿತು.

[With ANI Inputs]

Trending News