ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಅದರಲ್ಲೂ ವಿಶೇಷವಾಗಿ 2020 ರ ಮೊದಲ 'ಮನ್ ಕಿ ಬಾತ್' ಕಾರ್ಯಕ್ರಮ ಇದೇ ಜನವರಿ 26 (ಭಾನುವಾರ) ಮೂಡಿಬರಲಿದೆ. ಆದರೆ ಗಣರಾಜ್ಯೋತ್ಸವದ ಕಾರಣ ಕಾರ್ಯಕ್ರಮದ ಸಮಯವನ್ನುಬೆಳಗ್ಗೆ 11 ಗಂಟೆ ಬದಲಿಗೆ ಸಂಜೆ 6 ಗಂಟೆಗೆ ಬದಲಾವಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದ ಸಮಯವನ್ನು ಸಂಜೆಗೆ ಮರು ನಿಗದಿಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ಕಾರ್ಯಕ್ರಮ 'ಮನ್ ಕಿ ಬಾತ್' 2020 ರ ಮೊದಲ 'ಮನ್ ಕಿ ಬಾತ್' ಕಾರ್ಯಕ್ರಮದ ಸಮಯ ಬದಲಾವಣೆ ಆಗಿದೆ. ಕಾರ್ಯಕ್ರಮವು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಅಧಿಕೃತ ಟ್ವಿಟರ್ ಹ್ಯಾಂಡಲ್ 'ಮನ್ ಕಿ ಬಾತ್ ಅಪ್‌ಡೇಟ್‌ಗಳು' ತಿಳಿಸಿದೆ. ಈ ಕಾರ್ಯಕ್ರಮವನ್ನು ಜನವರಿ 26 ರಂದು ಸಂಜೆ 6 ಗಂಟೆಗೆ ನರೇಂದ್ರ ಮೋದಿ ಆ್ಯಪ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
2019 ರ ಡಿಸೆಂಬರ್ 29 ರಂದು ಪ್ರಸಾರವಾದ ತಮ್ಮ ಕೊನೆಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪಿಎಂ ನರೇಂದ್ರ ಮೋದಿ ಅವರು ಬಡವರ ಉನ್ನತಿಗಾಗಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಜನರನ್ನು ಒತ್ತಾಯಿಸಿದ್ದರು ಮತ್ತು ಕುಶಲಕರ್ಮಿಗಳನ್ನು ಬೆಂಬಲಿಸಲು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜೊತೆಗೆ ತಮ್ಮ ಭಾಷಣದ ಸಮಯದಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನನ್ನು ಅಧ್ಯಯನ ಮಾಡಲು 'ಆದಿತ್ಯ' ಎಂಬ ಉಪಗ್ರಹವನ್ನು ಉಡಾಯಿಸುವ ಯೋಜನೆಯ ಬಗ್ಗೆ ಮಾತನಾಡಿದ್ದರು ಮತ್ತು ಫೂಲ್ಪುರದ ಮಹಿಳೆಯರು ಸ್ವಾವಲಂಬನೆಗಾಗಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದರು.