ಅಮೇರಿಕ ಹಾಗೂ ಇರಾನ್ ನಡುವಿನ ಏರ್ಪಟ್ಟ ಉದ್ವಿಗ್ನತೆಯಿಂದಾಗಿ, ವಿಶ್ವಾದ್ಯಂತ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ರಾಷ್ಟ್ರರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ 40 ಸಾವಿರ ರೂ.ಗಡಿ ದಾಟಿದೆ. ಆದರೆ, ಒಂದು ವೇಳೆ ನೀವು ದುಬೈಗೆ ಭೇಟಿ ನೀಡಿದರೆ ಅಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಏಕೆಂದರೆ ಇಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಅಗ್ಗದ ಬೆಲೆಗೆ ಚಿನ್ನ ದೊರಕುತ್ತದೆ. ಅಷ್ಟೇ ಅಲ್ಲ ಇಲ್ಲಿ ದೊರೆಯುವ ಚಿನ್ನದ ಗುಣಮಟ್ಟ ಕೂಡ ಉತ್ತಮವಾಗಿರುತ್ತದೆ.
ಎಲ್ಲಿ ಸಿಗುತ್ತದೆ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ
ದುಬೈನ ಡೀರಾ(Deira) ಸಿಟಿ ಸೆಂಟರ್ ನಲ್ಲಿ ಚಿನ್ನ ಖರೀದಿಸಲು ವಿಶ್ವದ ಹಲವು ಭಾಗಗಳಿಂದ ಜನರು ಆಗಮಿಸುತ್ತಾರೆ. ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಬೆಲೆಯಲ್ಲಿ ಇಲ್ಲಿ ಚಿನ್ನ ದೊರೆಯುತ್ತದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಹೋಲಿಸಿದರೆ ಇಲ್ಲಿ ಚಿನ್ನದ ಬೆಲೆ ಶೇ. 15 ರಷ್ಟು ಕಡಿಮೆಯಾಗಿರುತ್ತದೆ.
ವಿಶ್ವದ ಹಲವು ಭಾಗಗಳಿಂದ ಕರ ರಹಿತ ಚಿನ್ನ ಇಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ
ದುಬೈನಲ್ಲಿ, ಚಿನ್ನದ ಇಟ್ಟಿಗೆಗಳು ಅಥವಾ ಬಿಸ್ಕತ್ತುಗಳ ಖರೀದಿಗೆ, ಅದರಲ್ಲೂ ವಿಶೇಷವಾಗಿ ಚಿನ್ನದ ಖರೀದಿಗೆ ಯಾವುದೇ ಆಮದು ಸುಂಕವನ್ನು ವಿಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ದುಬೈನ ಚಿನ್ನದ ವ್ಯಾಪಾರಿಗಳು ವಿಶ್ವದ ಯಾವುದೇ ದೇಶದಿಂದ ತೆರಿಗೆ ಮುಕ್ತ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಾರೆ ಹಾಗೂ ಅದರಿಂದ ಆಭರಣಗಳನ್ನು ತಯಾರಿಸುತ್ತಾರೆ. ಆದರೆ, ಆಭರಣಗಳ ಮೇಲೆ ಇಲ್ಲಿ ಸಣ್ಣ ಸಣ್ಣ ಪ್ರಮಾಣದ ತೆರಿಗೆ ಇದೆ.
ಇಲ್ಲಿಗೆ ಭೇಟಿ ನೀಡುವ ಹಲವು ಪ್ರವಾಸಿಗರು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಾರೆ
ವಿಶ್ವದ ವಿವಿಧ ದೇಶಗಳಿಂದ ದುಬೈಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಇಲ್ಲಿನ ಆಭರಣಕಾರರು ಗ್ರಾಹಕರಿಗೆ ಕಡಿಮೆ ಬೆಲೆಗೆ ಆಭರಣವನ್ನು ಮಾರಾಟ ಮಾಡುವ ಮೂಲಕ ಆಮದು ಸುಂಕದಿಂದ ವಿನಾಯಿತಿ ಪಡೆಯುತ್ತಾರೆ.
ದುಬೈನಲ್ಲಿ ಚಿನ್ನದ ಗುಣಮಟ್ಟದ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ದುಬೈ ಗೋಲ್ಡ್ ಮತ್ತು ಜ್ಯುವೆಲ್ಲರಿ ಗ್ರೂಪ್ ಅಧ್ಯಕ್ಷ ತೌಹಿದ್ ಅಬ್ದುಲ್ಲಾ, ದುಬೈನಲ್ಲಿ ಚಿನ್ನದ ಗುಣಮಟ್ಟದ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ ಎನ್ನುತ್ತಾರೆ. ಇದೇ ವೇಳೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಯ ಆಧಾರದ ಮೇಲೆ ಇಲ್ಲಿ ಚಿನ್ನದ ಚಿಲ್ಲರೆ ಬೆಲೆಯನ್ನು ಸಹ ನಿರ್ಧರಿಸಲಾಗುತ್ತದೆ. ಈ ಕೆಲಸದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ದುಬೈನಲ್ಲಿ ಒಟ್ಟು 804 ಅಧಿಕೃತ ಚಿನ್ನದ ಆಭರಣಗಳ ಮಳಿಗೆಗಳಿವೆ. ಇವುಗಳಿಗಾಗಿ ದುಬೈ ಮುನ್ಸಿಪಲ್ ಕಾರ್ಪೊರೇಷನ್ ಒಟ್ಟು 09 ಇನ್ಸ್ಪೆಕ್ಟರ್ಗಳ ನೇಮಕ ಮಾಡಿದೆ, ಇವರಲ್ಲಿ ನಾಲ್ವರು ಕೇವಲ ಚಿನ್ನದ ಗುಣಮಟ್ಟ ಮಾತ್ರ ಪರೀಕ್ಷಿಸುತ್ತಾರೆ. ಇವರು ನಿರಂತರವಾಗಿ ಆಭರಣ ಮಾರಾಟಗಾರರ ಚಿನ್ನದ ಗುಣಮಟ್ಟವನ್ನು ಪರಿಶೀಲಿಸುತ್ತಾರೆ.