ಸಾವರ್ಕರ್ ಬದಲು ಭಗತ್ ಸಿಂಗ್ ಗೆ ಭಾರತ ರತ್ನ ನೀಡಿ-ಅಸಾದುದ್ದೀನ್ ಒವೈಸಿ

 ವೀರ್ ಸಾವರ್ಕರ್ ಅವರಿಗೆ ಭಾರತ್ ರತ್ನ ಪ್ರಶಸ್ತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಭಾರತ ರತ್ನದಂತ ಪುರಸ್ಕಾರವನ್ನು ನೀಡುವುದಾದರೆ ಸಾವರ್ಕರ್ ಬದಲು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಂತಹವರಿಗೆ ನೀಡಬೇಕು ಎಂದು ಹೇಳಿದ್ದಾರೆ.

Last Updated : Oct 18, 2019, 07:14 PM IST
ಸಾವರ್ಕರ್ ಬದಲು ಭಗತ್ ಸಿಂಗ್ ಗೆ ಭಾರತ ರತ್ನ ನೀಡಿ-ಅಸಾದುದ್ದೀನ್ ಒವೈಸಿ title=
file photo

ನವದೆಹಲಿ: ವೀರ್ ಸಾವರ್ಕರ್ ಅವರಿಗೆ ಭಾರತ್ ರತ್ನ ಪ್ರಶಸ್ತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಭಾರತ ರತ್ನದಂತ ಪುರಸ್ಕಾರವನ್ನು ನೀಡುವುದಾದರೆ ಸಾವರ್ಕರ್ ಬದಲು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಂತಹವರಿಗೆ ನೀಡಬೇಕು ಎಂದು ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಓವೈಸಿ, 'ನೀವು ನಿಜವಾಗಿಯೂ ಭಾರತ್ ರತ್ನವನ್ನು ನೀಡಲು ಬಯಸಿದರೆ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್, ರಾಜ್‌ಗುರು ಮತ್ತು ಭಗತ್ ಸಿಂಗ್ ಅವರಿಗೆ ನೀಡಿ' ಎಂದು ಹೇಳಿದರು. 'ನಮ್ಮ ವಿರೋಧವು ವೀರ್ ಸಾವರ್ಕರ್ ವಿರುದ್ಧವಾಗಿದೆ, ಏಕೆಂದರೆ ಕಪೂರ್ ಆಯೋಗದ ವರದಿಯ ಪ್ರಕಾರ, ಅವರು ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಸಂಚುಕೋರರಾಗಿದ್ದರು. ರಾಷ್ಟ್ರಪಿತನ ಹತ್ಯೆಯಲ್ಲಿ ಸಂಚುಕೋರನಾಗಿರುವ ವ್ಯಕ್ತಿಗೆ ಭಾರತ ರತ್ನವನ್ನು ನೀಡುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು. 

'ಸಾವರ್ಕರ್ ಅವರು ಎರಡು ರಾಷ್ಟ್ರಗಳ ಸಿದ್ಧಾಂತದ ಮೊದಲ ಪ್ರತಿಪಾದಕರಾಗಿದ್ದರು, ನಂತರ ಇದನ್ನು ಮೊಹಮ್ಮದ್ ಅಲಿ ಜಿನ್ನಾ ವಹಿಸಿಕೊಂಡರು. ಇದಲ್ಲದೆ, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಕ್ವಿಟ್ ಇಂಡಿಯಾ ಚಳವಳಿಯನ್ನು ಸಹ ಬೆಂಬಲಿಸಲಿಲ್ಲ' ಎಂದು ಅವರು ಪ್ರತಿಪಾದಿಸಿದರು.ಇದೆ ವೇಳೆ ಬಿಜೆಪಿ ತನ್ನ ವಿಚಾರದಾರೆ ಹಿನ್ನಲೆಯಲ್ಲಿ ಎಲ್ಲವನ್ನು ನೋಡುತ್ತಿರುವ ಬಗ್ಗೆ ಒವೈಸಿ ಕಿಡಿ ಕಾರಿದರು. 

Trending News