Womens Premier League 2024: RCB ಅಭಿಮಾನಿಗಳ ಹದಿನಾರು ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಪುರುಷರೂ ಮಾಡದ ಸಾಧನೆಯನ್ನು ಮಹಿಳೆಯರು ಮಾಡಿ ತೋರಿಸಿದ್ದಾರೆ. ಈ ಮೂಲಕ ʼಹೆಣ್ಮಕ್ಳೆ ಸ್ಟ್ರಾಂಗು ಗುರು!ʼ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCB 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಬಹುವರ್ಷದ ಆಸೆಯನ್ನು ಮಹಿಳೆಯರು ಈಡೇರಿಸಿದ್ದಾರೆ.
ಉತ್ತರ ಕರ್ನಾಟಕದ ಹುಡುಗಿಯ ಮಾರಕ ಬೌಲಿಂಗ್
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ್. ಒಂದು ಹಂತದಲ್ಲಿ 64 ರನ್ಗಳವರೆಗೂ ಒಂದು ವಿಕೆಟ್ ಕಳೆದುಕೊಳ್ಳದೆ ಉತ್ತಮ ಜೊತೆಯಾಟದ ಮೂಲಕ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದ ಡೆಲ್ಲಿಗೆ ಆಘಾತ ನೀಡಿದ್ದು ಸೋಫಿ ಮೊಲಿನೆಕ್ಸ್.
𝙄. 𝘾. 𝙔. 𝙈. 𝙄
3⃣.3⃣ Overs
1⃣2⃣ Runs
4⃣ WicketsTalk about making an impact in the all-important #Final! 👏 👏
Relive Shreyanka Patil's outstanding bowling performance 🎥 🔽 #TATAWPL | #DCvRCB | @RCBTweets | @shreyanka_patil
— Women's Premier League (WPL) (@wplt20) March 17, 2024
A game-changer! 👏
Sophie Molineux's three-wicket over turned the course of the #TATAWPL #Final and she bags the Player of the Match award as Royal Challengers Bangalore complete the title triumph 🏆
Scorecard ▶️https://t.co/g011cfzcFp#DCvRCB | @RCBTweets pic.twitter.com/gmVmCnCdrs
— Women's Premier League (WPL) (@wplt20) March 17, 2024
ಇದನ್ನೂ ಓದಿ: IPL 2024: ವಿರಾಟ್ ಕೊಹ್ಲಿ ಐಪಿಎಲ್ ಆಡಲ್ವಾ?; ಹೊರಬಿತ್ತು ಬಿಗ್ ಸಿಕ್ರೇಟ್!!
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಶಫಾಲಿ ವರ್ಮಾರ ವಿಕೆಟ್ ತೆಗೆಯುವ ಮೂಲಕ ಸೋಫಿ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ನಂತರ ಮಾರಕ ಬೌಲಿಂಗ್ ಮೂಲಕ ಡೆಲ್ಲಿಗೆ ಆಘಾತ ನೀಡಿದ್ದು ಶ್ರೇಯಾಂಕಾ ಪಾಟೀಲ್. 12ಕ್ಕೆ 4 ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕಾ ಡೆಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯಲು ಕಾರಣವಾದರು.
The Reactions 👏
The Emotions ☺️
The Celebrations 🙌
They say what this triumph means for the Royal Challengers Bangalore 🏆
Scorecard ▶️ https://t.co/g011cfzcFp#TATAWPL | #DCvRCB | #Final | @RCBTweets pic.twitter.com/imJPUlpIPD
— Women's Premier League (WPL) (@wplt20) March 17, 2024
ಉತ್ತರ ಕರ್ನಾಟಕದ ಹುಡುಗಿಯ ಸಾಧನೆ!
ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕಾ ಪಾಟೀಲ್ಗೆ ಆಡಲು ಬರುವುದಿಲ್ಲವೆಂದು ಹೇಳಿದವರಿಗೆ ಮಾರಕ ಬೌಲಿಂಗ್ ದಾಳಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಎಣ್ಣೆಗಾಯಿ, ಶೇಂಗಾ ಚಟ್ನಿ ತಿಂದು ಬೆಳೆದ ಹುಡುಗಿಯ ಬೌಲಿಂಗ್ ದಾಳಿಗೆ ಡೆಲ್ಲಿ ತಂಡವು ತತ್ತರಿಸಿ ಹೋಗಿದೆ.
ಇತಿಹಾಸ ಸೃಷ್ಟಿಸಿದ ಶ್ರೇಯಾಂಕಾ ಪಾಟೀಲ್
ಮೂಲತಃ ಕಲಬುರಗಿಯ 21 ವರ್ಷದ ಶ್ರೇಯಾಂಕಾ ಪಾಟೀಲ್ ಫೈನಲ್ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ʼಇವತ್ತು DCನ ಹೊಡಿತಿವಿ subbiiʼ ಅಂತಾ ಬರೆದುಕೊಂಡಿದ್ದರು. ಅದರಂತೆ ಅವರು ಡೆಲ್ಲಿ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ʼಈ ಸಲ ಕಪ್ ನಮ್ದೆʼ ಅಂತಾ ಪ್ರತಿ ಬಾರಿ ಹೇಳುತ್ತಿದ್ದ ಶ್ರೇಯಾಂಕಾ ಇಂದು ತಂಡಕ್ಕೆ ಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಾಂಕಾ ಜೊತೆಗೆ ಸೋಫಿ ಮೊಲಿನೆಕ್ಸ್ (20ಕ್ಕೆ 3) ಮತ್ತು ಆಶಾ ಸೋಭಾನ (14ಕ್ಕೆ 2) ಸಹ ಉತ್ತಮ ಬೌಲಿಂಗ್ ಮೂಲಕ RCBಗೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: IPL 2024 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದಿಂದ ಈ ಸ್ಟಾರ್ ಆಟಗಾರ ಔಟ್.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ