Shani Asta in Kumbh 2024 : ಜ್ಯೋತಿಷ್ಯದಲ್ಲಿ, ಶನಿಯು ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ಫಲವನ್ನು ನೀಡುತ್ತಾನೆ. ಇದೇ ಕಾರಣಕ್ಕೆ ಶನಿದೇವನ ಬಗ್ಗೆ ಜನರಿಗೆ ಅಪಾರವಾದ ಭಯ. ಶನಿಯ ಕೃಪೆಯಿದ್ದರೆ ಭಿಕ್ಷುಕ ಕೂಡಾ ರಾಜನಾಗುತ್ತಾನೆ. ಅದೇ ಆತನ ವಕ್ರ ದೃಷ್ಟಿ ಬಿದ್ದರೆ ರಾಜ ಕೂಡಾ ಬೀದಿಗೆ ಬಂದು ಬಿಡುತ್ತಾನೆ. ಫೆಬ್ರವರಿ 11, 2024 ರಂದು, ಶನಿ ಮಹಾತ್ಮ ತನ್ನದೇ ಆದ ಕುಂಭ ರಾಶಿಯಲ್ಲಿ ಅಸ್ತಮಿಸಿದ್ದಾನೆ. ಜ್ಯೋತಿಷ್ಯದ ಈ ಘಟನೆ ಎಲ್ಲಾ ರಾಶಿಯವರ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ.
ಯಾವ ರಾಶಿಯವರ ಮೇಲೆ ಯಾವ ರೀತಿ ಪರಿಣಾಮ :
ಮೇಷ ರಾಶಿ : ಹಣವನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.ವೃತ್ತಿ ಕ್ಷೇತ್ರದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಗಳಿವೆ. ಯಾವುದೇ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೂ ಎಚ್ಚರ ವಹಿಸಿ. ಕೆಲವರ ಕಾಲುಗಳಲ್ಲಿ ನೋವು ಮತ್ತು ಮಾನಸಿಕ ಒತ್ತಡದ ದೂರು ಕೇಳಿ ಬರಬಹುದು.
ಇದನ್ನೂ ಓದಿ : ಇಂದಿನಿಂದಲೇ ಈ ರಾಶಿಯವರ ಅದೃಷ್ಟ ಚೇಂಜ್ !ಕೈ ಇಟ್ಟಲೆಲ್ಲಾ ಹಣ !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು ! ಇನ್ನು ಸೋಲೆನ್ನುವ ಮಾತೇ ಇಲ್ಲ
ವೃಷಭ ರಾಶಿ : ನಿಮ್ಮ ಕೆಲಸದಲ್ಲಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ನೀವು ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು, ಆದ್ದರಿಂದ ಯಾವುದೇ ರೀತಿಯ ವಾದದಲ್ಲಿ ತೊಡಗಬೇಡಿ. ಆರೋಗ್ಯ ಮಧ್ಯಮವಾಗಿರುತ್ತದೆ.
ಮಿಥುನ ರಾಶಿ : ದೂರದ ಊರಿಗೆ ಪ್ರಯಾಣ ಬೆಳೆಸಬಹುದು. ವಿದೇಶಿ ಮೂಲಗಳಿಂದ ಹಣ ಬರಬಹುದು. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ, ಸಮಯವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶವಿರುತ್ತದೆ.
ಕರ್ಕ ರಾಶಿ: ಇದ್ದಕ್ಕಿದ್ದಂತೆ ಹಣ ಗಳಿಸುವ ಸಾಧ್ಯತೆಗಳಿವೆ. ಪೂರ್ವಿಕರ ಆಸ್ತಿಯಿಂದ ಧನಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ.
ಸಿಂಹ ರಾಶಿ :ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಲಾಭ ಪಡೆಯುವ ಲಕ್ಷಣಗಳಿವೆ. ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ದೂರ ಪ್ರಯಾಣ ಮಾಡಬೇಕಾಗಬಹುದು. ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.
ಇದನ್ನೂ ಓದಿ : 500 ವರ್ಷಗಳ ಬಳಿಕ ಈ ಜನ್ಮರಾಶಿಗೆ ಶುಭ ರಾಜಯೋಗದ ವೈಭವ: ಇವರ ಬಳಿಯೂ ಸುಳಿಯದು ಸಮಸ್ಯೆ- ಇನ್ಮುಂದೆ ಕಾಲಿಟ್ಟಲ್ಲೆಲ್ಲಾ ಗೆಲುವಿದ್ದೇ ಆಟ!
ಕನ್ಯಾ ರಾಶಿ : ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಸಾಲ ಮಾಡಬೇಕಾಗಬಹುದು. ನಿಮ್ಮ ಕೆಲಸದಲ್ಲಿ ನೀವು ಹೆಚ್ಚುವರಿ ಒತ್ತಡವನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ಲಾಭ ಗಳಿಸುವಲ್ಲಿ ತೊಂದರೆಗಳು ಎದುರಾಗುವುದು. ಆದ್ದರಿಂದ ನೀವು ತಾಳ್ಮೆಯಿಂದ ಕೆಲಸ ಮಾಡಬೇಕು. ಸಂಬಂಧಗಳಲ್ಲಿ ಸಂಘರ್ಷ ಉಂಟಾಗಬಹುದು.
ತುಲಾ ರಾಶಿ : ಮಕ್ಕಳ ಕಡೆಯಿಂದ ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯದಿದ್ದರೆ ನೀವು ಸ್ವಲ್ಪ ನಿರಾಶೆಯನ್ನು ಅನುಭವಿಸುವಿರಿ.ಕೀಲು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.
ವೃಶ್ಚಿಕ ರಾಶಿ : ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಜೀವನದಲ್ಲಿ ಸೌಕರ್ಯಗಳು ಕಡಿಮೆಯಾಗುತ್ತವೆ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವುದರಿಂದ ಒತ್ತಡದಲ್ಲಿಯೇ ಇರುತ್ತೀರಿ. ವ್ಯವಹಾರದಲ್ಲಿ ಲಾಭ ಗಳಿಸಲು, ಹೆಚ್ಚು ಕಷ್ಟಪಡಬೇಕಾಗುತ್ತದೆ.ಬೆನ್ನು ನೋವು ಮತ್ತು ನಿದ್ರೆಯ ಸಮಸ್ಯೆಗಳು ಎದುರಾಗಬಹುದು.
ಧನು ರಾಶಿ : ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಾಮರಸ್ಯ ಕೆಡಬಹುದು. ಈ ಕಾರಣದಿಂದಾಗಿ ಒತ್ತಡವನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಕೆಲಸ ಮಾಡುವವರು ಪ್ರಗತಿ ಹೊಂದುತ್ತಾರೆ.ಹಲ್ಲಿನ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಇದನ್ನೂ ಓದಿ : Best Partner: ಉತ್ತಮ ಜೀವನ ಸಂಗಾತಿ ಎಂದು ಸಾಬೀತು ಪಡಿಸುತ್ತಾರೆ ಈ 5 ರಾಶಿಯ ಹುಡುಗರು
ಮಕರ ರಾಶಿ : ನೀವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಹಣದ ಕೊರತೆಯಿಂದಾಗಿ ಅಭದ್ರತೆ ಕಾಡುವುದು. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ವ್ಯವಹಾರದಲ್ಲಿ ಮಿಶ್ರ ಫಲಿತಾಂಶಗಳು ಎದುರಾಗುವುದು. ಕಣ್ಣಿನ ಉರಿ, ಹಲ್ಲುನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.
ಕುಂಭ ರಾಶಿ : ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಣ್ಣಿನ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ದೃಷ್ಟಿಯಿಂದ ಸಮಯ ಚೆನ್ನಾಗಿಲ್ಲ.ನಿದ್ರೆಯ ಕೊರತೆಯಿಂದಾಗಿ ನೀವು ಮಾನಸಿಕ ಒತ್ತಡವನ್ನು ಅನುಭವಿಸಬಹುದು.
ಮೀನ ರಾಶಿ : ಜೀವನದಲ್ಲಿ ಕಿರಿಕಿರಿ ಉಂಟಾಗಿ ತಾಳ್ಮೆ ಕಡಿಮೆಯಾಗುತ್ತದೆ. ಹಠಾತ್ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಜಾಗೃತರಾಗಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.