ದಿನಕ್ಕೆ ಮೂರು ಕಪ್ ಚಹಾ ಕುಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ..! ಹೇಗೆ ಗೊತ್ತೆ..

Tea Beauty tips : ಚಹಾ ಅಂದ್ರೆ ಯಾರಿ ಇಷ್ಟವಿಲ್ಲ ಹೇಳಿ. ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್‌ ಟೀ ಇಂದ. ನಿಮಗೆ ದಿನಕ್ಕೆ ಮೂರು ಬಾರಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ರೆ ನಿಮಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ.. 

Written by - Krishna N K | Last Updated : Jan 31, 2024, 07:53 PM IST
  • ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್‌ ಚಹಾದಿಂದ.
  • ಬೇಸರ ಹೀಗೆ ಏನಾದ್ರೂ ಒಂದ ಕಪ್‌ ಟೀ ಕುಡಿಯುತ್ತಾರೆ.
  • ನಿಮಗೆ ಪ್ರತಿದಿನ ಚಾಯ್ ಕುಡಿಯುವ ಅಭ್ಯಾಸವಿದೆಯೇ?
ದಿನಕ್ಕೆ ಮೂರು ಕಪ್ ಚಹಾ ಕುಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ..! ಹೇಗೆ ಗೊತ್ತೆ.. title=

Tea for Anti-aging : ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್‌ ಚಹಾದಿಂದ. ತಲೆನೋವು, ಒತ್ತಡ, ಬೇಸರ ಹೀಗೆ ಏನಾದ್ರೂ ಒಂದ ಕಪ್‌ ಟೀ ಕುಡಿದ್ರೆ ತಕ್ಷಣ ಮಾಯವಾಗುತ್ತೆ ಅಂತ ಕೆಲವರು ತಿಳಿದುಕೊಂಡಿದ್ದಾರೆ. ಜಹ ಅವರಿಗೆ ಬೂಸ್ಟ್‌ ಇದ್ದ ಹಾಗೆ. ಒಂದು ವೇಳೆ ನಿಮಗೆ ಪ್ರತಿದಿನ ಚಾಯ್ ಕುಡಿಯುವ ಅಭ್ಯಾಸವಿದೆಯೇ? ಇದ್ರೆ ಈ ಸುದ್ದಿ ನಿಮಗಾಗಿ. 

ಹೌದು.. ಪ್ರತಿ ದಿನ ಟೀ ಕುಡಿಯುವುದರಿಂದ ಸೌಂದರ್ಯ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಚಾಯ್ ಬಗ್ಗೆ ಸಂಶೋಧನೆ ಮಾಡಿದ ನಂತರ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯುರೋಪ್ ಮತ್ತು ಚೀನಾದಲ್ಲಿ ಯುವಕರು ಮತ್ತು ವಯಸ್ಕರ ಮೇಲೆ ಸಂಶೋಧನೆ ನಡೆಸಿ, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದ ನಂತರ ಈ ವಿಷಯ ಬಹಿರಂಗಗೊಂಡಿವೆ. ವಾಸ್ತವವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೆ, ಈ ವಿಜ್ಞಾನಿಗಳ ಸಂಶೋಧನೆ ಹೀಗೆ ಹೇಳುತ್ತಿದೆ.. 

ಇದನ್ನೂ ಓದಿ:ಈ ಟಿಪ್ಸ್‌ ಫಾಲೋ ಮಾಡಿದ್ರೆ ನಿಮ್ಮ ದುರ್ಬಲ ಮೂಳೆಗಳು ಕಬ್ಬಿಣದಂತಾಗುತ್ತವೆ..! 

ಅನೇಕರಿಗೆ, ಬೆಳಿಗ್ಗೆ ಎದ್ದಾಗ ಚಹಾ, ಟಿಫಿನ್ ತಿಂದ ನಂತರ ಮತ್ತು ಸಂಜೆ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ವಿಜ್ಞಾನಿಗಳು ಹೇಳುತ್ತಿರುವುದು ಎಲ್ಲಾ ಬಗೆಯ ಚಹಾಗಳ ಬಗ್ಗೆ ಅಲ್ಲ, ಬದಲಿದೆ ಗ್ರೀನ್‌ ಚಹಾ, ಕಪ್ಪು ಚಹಾ ಒಳ್ಳೆಯದು ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಗ್ರೀನ್‌ ಟೀ ಮತ್ತು ಬ್ಲ್ಯಾಕ್‌ ಟೀ ಆಂಟಿ ಏಜಿಂಗ್‌ ಗುಣಗಳನ್ನು ಹೊಂದಿವೆ ಎಂದು ಚೀನಾದ ಸಂಶೋಧನಾ ತಂಡ ಬಹಿರಂಗಪಡಿಸಿದೆ. ಈ ಎರಡು ಚಹಾಗಳಲ್ಲಿರುವ ಆರೋಗ್ಯಕರ ರಾಸಾಯನಿಕಗಳು ದೇಹದಲ್ಲಿನ ಕೆಲವು ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ ಮತ್ತು ವಯಸ್ಸಿನ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಎಲ್ಲಾ ಅಂಗಗಳ ಸರಿಯಾದ ಕಾರ್ಯನಿರ್ವಹಣೆಗೆ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ:ಮಧುಮೇಹಿಗಳು ಕಾಫಿ ಕುಡಿಯಬೇಕಂತೆ ! ಡಯಾಬಿಟೀಸ್ ಇದ್ದವರ ಯಕೃತ್ತಿನ ಆರೋಗ್ಯಕ್ಕೆ ಬೇಕಂತೆ ಕಾಫಿ !

37-73 ವರ್ಷ ವಯಸ್ಸಿನ 5,998 ಬ್ರಿಟನ್‌ ಮತ್ತು ಚೀನಾದ 7,931 ಜನರ ಮೇಲೆ ಈ ಸಂಶೋಧನೆ ನಡೆಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗ್ರೀನ್ ಟೀ, ಬ್ಲಾಕ್ ಟೀ ಕುಡಿಯುವವರ ಬಗ್ಗೆ ಈ ಸಂಶೋಧನೆ ನಡೆಸಿ ವರದಿ ನೀಡಲಾಗಿದೆ. ಚಹಾದಲ್ಲಿನ ಪಾಲಿಫಿನಾಲ್‌ಗಳು ಕರುಳಿನ ಮೈಕ್ರೋಬಯೋಟಾವನ್ನು ಮಾಡ್ಯುಲೇಟ್ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇವುಗಳ ಜೊತೆಯಲ್ಲಿ ಕೆಫೀನ್ ಮತ್ತು ಥೈನೈನ್ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಚಹಾ ಮಿತಿಮೀರಿ ಕುಡಿದ್ರೆ ದೇಹಕ್ಕೆ ಹಾನಿಕಾರಕವೆಂದೂ ಸಹ ಎಚ್ಚರಿಸಿದ್ದಾರೆ.

ಗಮನಿಸಿ: ವಿವಿಧ ಅಧ್ಯಯನಗಳು, ಸಂಶೋಧನೆಗಳು ಮತ್ತು ಆರೋಗ್ಯ ಜರ್ನಲ್‌ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮ ತಿಳುವಳಿಕೆಗಾಗಿ ಮಾತ್ರ ಇಲ್ಲಿ ಒದಗಿಸಲಾಗಿದೆ. ಇನ್ನು ಅನುಸರಿಸುವ ಮುನ್ನ ವೈದ್ಯರ ಅಭಿಪ್ರಾಯ ಪಡೆಯುವುದು ಉತ್ತಮ.. ಲೇಖನದಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ Zee Kannada News ಜವಾಬ್ದಾರರಾಗಿರುವುದಿಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News