ನವದೆಹಲಿ: ನವದೆಹಲಿ: ಸುಪ್ರೀಂಕೋರ್ಟ್ ನೇಮಕ ಮಾಡಿದ ನಿರ್ವಾಹಕರ ಸಮಿತಿ (ಸಿಒಎ) ಭಾರತದ ವಿಶ್ವಕಪ್ ಪ್ರದರ್ಶನದ ವಿಚಾರವಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ವಿಚಾರಣೆಗೆ ಒಳಪಡಿಸಲಿದೆ. ಅಲ್ಲದೆ, ಮುಂದಿನ ವರ್ಷದ ವಿಶ್ವ ಟಿ 20 ಗಾಗಿ ಮಾರ್ಗಸೂಚಿಯನ್ನು ಪರಿಶೀಲನೆ ನಡೆಸಲಿದೆ ಎಂದು ಹೇಳಿದೆ.
ಸಿಒಎ ಅಧ್ಯಕ್ಷ ವಿನೋದ್ ರೈ, ಡಯಾನಾ ಎಡುಲ್ಜಿ ಮತ್ತು ಲೆಫ್ಟಿನೆಂಟ್ ಜನರಲ್ (ನಿವೃತ್ತ) ರವಿ ಥೋಡ್ಜ್ ನೇತೃತ್ವದ ಸಿಒಎ ಸದಸ್ಯರು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಅವರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. "ಕೋಚ್ ಮತ್ತು ಕ್ಯಾಪ್ಟನ್ ವಿರಾಮದಿಂದ ಹಿಂತಿರುಗಿದ ನಂತರ ನಾವು ಖಂಡಿತವಾಗಿಯೂ ಪರಿಶೀಲನಾ ಸಭೆ ನಡೆಸುತ್ತೇವೆ. ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವುದಿಲ್ಲ. ಆದರೆ ನಾವು ಅವರೊಂದಿಗೆ ಮಾತನಾಡುತ್ತೇವೆ. ಅಲ್ಲದೆ ನಾವು ಆಯ್ಕೆ ಸಮಿತಿಯ ಮುಖ್ಯಸ್ಥರೊಂದಿಗೆ ಸಹ ಚರ್ಚಿಸುತ್ತೇವೆ " ಎಂದು ಸಿಒಎ ಮುಖ್ಯಸ್ಥ ವಿನೋದ್ ರೈ ಪಿಟಿಐಗೆ ತಿಳಿಸಿದ್ದಾರೆ.
ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಕೋರಿದಾಗ ಅವರು ಬಹಿರಂಗಪಡಿಸಲು ನಿರಾಕರಿಸಿದರು ಎನ್ನಲಾಗಿದೆ. ಭಾರತದ ವಿಶ್ವಕಪ್ ಅಭಿಯಾನವು ಇದೀಗ ಕೊನೆಗೊಂಡಿದೆ. ಹೇಗೆ, ಯಾವಾಗ ಮತ್ತು ಎಲ್ಲಿ ಪ್ರಶ್ನೆಗಳು ಈಗ ಇಲ್ಲ " ಎಂದು ರೈ ಹೇಳಿದರು. ಶಾಸ್ತ್ರಿ, ಕೊಹ್ಲಿ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರು ಉತ್ತರಿಸಬೇಕಾದ ಕೆಲವು ಪ್ರಶ್ನೆಗಳಿವೆ. ಇದರಲ್ಲಿ ಮೊದಲನೇದಾಗಿ ಅಂಬಟಿ ರಾಯಡುರನ್ನು ಪರಿಗಣಿಸದಿರುವ ವಿಚಾರ, ದಿನೇಶ್ ಕಾರ್ತಿಕ್, ಏಕದಿನ ಕ್ರಿಕೆಟ್ನಲ್ಲಿ ದೀರ್ಘಕಾಲ ಪ್ರದರ್ಶನ ನೀಡಿಲ್ಲ ಆದರೂ ಅವರಿಗೆ ನೀಡಿರುವ ಪ್ರಾಮುಖ್ಯತೆ, ಮೂರನೆಯದಾಗಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಲು ಕಳಿಸಿರುವ ವಿಚಾರವಾಗಿ ಸಿಒಎ ಸಮಿತಿ ಪ್ರಶ್ನಿಸಲಿದೆ ಎನ್ನಲಾಗಿದೆ.