IRCTC announces tour packages : ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದ್ದಾರೆಯೇ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. IRCTC ಇದೀಗ 12 ದಿನಗಳ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಅದ್ಭುತ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಆ ರೀತಿಯಲ್ಲಿ, ಭಾರತ್ ಗೌರವ್ ಟೂರಿಸ್ಟ್ ಟ್ರೈನ್ (EZBG11) ಮೂಲಕ ದಕ್ಷಿಣ ಭಾರತ ದರ್ಶನ್ ಎಂಬ ಈ ಪ್ರವಾಸದ ಪ್ಯಾಕೇಜ್‌ನ ಸಹಾಯದಿಂದ ದೇಶದ ಸುಂದರ ತಾಣಗಳಿಗೆ ಭೇಟಿ ನೀಡುವ ಅವಕಾಶ ನೀಡುತ್ತಿದೆ.
ಎಷ್ಟು ದಿನ ಇರುತ್ತದೆ ಈ ಪ್ರವಾಸ ? :
ಈ ಪ್ರವಾಸವು 12 ಹಗಲು ಮತ್ತು 11 ರಾತ್ರಿಗಳನ್ನು ಒಳಗೊಂಡಿರುತ್ತದೆ. ಪ್ರವಾಸದ ಪ್ಯಾಕೇಜ್ 25.10.2023 ರಿಂದ ಪ್ರಾರಂಭವಾಗಿ 05.11.2023 ರವರೆಗೆ ಇರುತ್ತದೆ.
ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಯಾವ ಯಾವ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ ? :
ರೇಣುಗುಂಟ : ತಿರುಪತಿ ಏಳು ಮಲಯನ್ ದೇವಸ್ಥಾನ
ಕುಡಾಲ್ ನಗರ: ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ
ರಾಮೇಶ್ವರಂ: ರಾಮನಾಥಸ್ವಾಮಿ ದೇವಸ್ಥಾನ
ಕನ್ಯಾಕುಮಾರಿ : ಕನ್ಯಾಕುಮಾರಿ ಭಗವತಿ ಅಮ್ಮನ ದೇವಸ್ಥಾನ, ವಿವೇಕಾನಂದ ರಾಕ್
ತಿರುವನಂತಪುರ: ಶ್ರೀ ಪದ್ಮನಾಪಸ್ವಾಮಿ ದೇವಸ್ಥಾನ.
ಇದನ್ನೂ ಓದಿ : ಯಾವುದೇ ಹೂಡಿಕೆ ಇಲ್ಲದೆ ಸರ್ಕಾರ ನೀಡುತ್ತದೆ ಮಾಸಿಕ 3 ಸಾವಿರ ರೂ ಪಿಂಚಣಿ !
ಪ್ರವಾಸದ ಪ್ಯಾಕೇಜ್ ಶುಲ್ಕದ ವಿವರಗಳು:
ಈ ಪ್ರವಾಸದ ಪ್ಯಾಕೇಜ್‌ಗಾಗಿ, ಪ್ರಯಾಣಿಕರು ಎಕಾನಮಿ ಕ್ಲಾಸ್‌ಗೆ 21,300 ರೂಪಾಯಿ, ಸ್ಟ್ಯಾಂಡರ್ಡ್ ಕ್ಲಾಸ್‌ಗೆ 33,300 ರೂಪಾಯಿ, ಮತ್ತು ಕಂಫರ್ಟ್ ಕ್ಲಾಸ್‌ಗಾಗಿ 36,400 ರೂಪಾಯಿ ಪಾವತಿಸಬೇಕಾಗುತ್ತದೆ.
ಭಾರತ್ ಗೌರವ್ ರೈಲು ಯೋಜನೆಯಡಿಯಲ್ಲಿ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ರೈಲ್ವೇಯು ಸರಿಸುಮಾರು 33% ರಿಯಾಯಿತಿಯನ್ನು ಒದಗಿಸುತ್ತದೆ. ಮೇಲಿನ ಬೆಲೆಯು ರಿಯಾಯಿತಿ ದರವನ್ನು ಒಳಗೊಂಡಿದೆ.
ಈ ಪ್ಯಾಕೇಜ್‌ನಲ್ಲಿ ಏನನ್ನು ನೀಡಲಾಗುತ್ತದೆ :
ರೈಲು ಪ್ರಯಾಣ, ರಾತ್ರಿಯ ತಂಗುವಿಕೆ, ಸಾರಿಗೆಯನ್ನು ಒದಗಿಸಲಾಗುತ್ತದೆ:
*ಬೆಳಿಗ್ಗೆ ಚಹಾ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುವುದು.
* ಪ್ರಯಾಣಿಕರಿಗೆ ಪ್ರಯಾಣ ವಿಮೆ.
* ನಿಮಗೆ ಸಹಾಯ ಮಾಡಲು ವೃತ್ತಿಪರ ಮತ್ತು ಸ್ನೇಹಪರ ಪ್ರವಾಸ ಗೈಡ್ ಗಳನ್ನೂ ಒದಗಿಸಲಾಗುತ್ತದೆ.
* ಪ್ರಯಾಣದ ಉದ್ದಕ್ಕೂ IRCTC ಟೂರ್ ಮ್ಯಾನೇಜರ್‌ಗಳಿಂದ ನಿರಂತರ ಬೆಂಬಲ ಮತ್ತು ಸಹಾಯ.
ಇದನ್ನೂ ಓದಿ : Great Business Ideas: ಶೂನ್ಯ ಬಂಡವಾಳದಿಂದ ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಗಳಿಸಿ
ಏನನ್ನು ಒದಗಿಸಲಾಗುವುದಿಲ್ಲ:
* ಕೊಠಡಿ ಸೇವೆಯ ವಿನಂತಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
* ಸೈಟ್ ಸೀಯಿಂಗ್ ವೆಚ್ಚ, ಪ್ರವೇಶ ಶುಲ್ಕಗಳನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ.
* ದೇವಸ್ಥಾನದ ವಿಶೇಷ ದರ್ಶನ ಟಿಕೆಟ್‌ಗಳನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ.
ಪ್ರವಾಸ ಹೊರಡುವ ಎರಡು ದಿನಗಳ ಮೊದಲು ಆಸನ ವ್ಯವಸ್ಥೆಯನ್ನು ಕಂಫರ್ಮ್ ಮಾಡಲಾಗುತ್ತದೆ. ಲೋವರ್ ಬರ್ತ್ ನೀಡಲಾಗುತ್ತದೆ ಎನ್ನುವುದರ ಬಗ್ಗೆ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಒಬ್ಬರೇ ಈ ಟೂರ್ ನಲ್ಲಿ ಹೋಗುವುದಾದರೆ ಇತರ ಅತಿಥಿಗಳೊಂದಿಗೆ ಡಬಲ್ / ಟ್ರಿಪಲ್ ಹಂಚಿಕೆ ಆಧಾರದ ಮೇಲೆ ಕೊಠಡಿ ನಿಯೋಜನೆಯನ್ನು ಮಾಡಲಾಗುತ್ತದೆ.
ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೀವು IRCTC ಯ ಅಧಿಕೃತ ಸೈಟ್ ಮೂಲಕ ತಿಳಿದುಕೊಳ್ಳಬಹುದು.
ಇದನ್ನೂ ಓದಿ : ನಿರಂತರವಾಗಿ ಕುಸಿಯುತ್ತಲೇ ಇದೆ ಚಿನ್ನ ಬೆಳ್ಳಿ ಬೆಲೆ ! ಇಂದಿನ ಬೆಲೆ ತಿಳಿದುಕೊಳ್ಳಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.