ನವದೆಹಲಿ: ಯೋಗಾ ಗುರು ಬಾಬಾ ರಾಮ್ ದೇವ್ ಪಾಕ್ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.
ಗುರುವಾರದಂದು ಭಯೋತ್ಪಾದಕರ ಕೃತ್ಯಕ್ಕೆ ಸುಮಾರು 40 ಸೈನಿಕರು ಮೃತಪಟ್ಟಿದ್ದರು ಈ ಹಿನ್ನಲೆಯಲ್ಲಿ ಈಗ ಪ್ರತಿಕ್ರಿಯಿಸಿರುವ ರಾಮ್ ದೇವ್ "ಪ್ರಧಾನಿ ಮೋದಿ ಈ ವಿಚಾರವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕು ಪ್ರತಿಯೊಬ್ಬರೂ ಕೂಡ ಪ್ರಧಾನಿ ಬೆಂಬಲಕ್ಕಿದ್ದಾರೆ.ಇದರಲ್ಲಿ ಕೀಳು ಮಟ್ಟದ ರಾಜಕೀಯ ಮಾಡಬಾರದು.ಇದು ಭಾರತದ ಐಕ್ಯತೆ, ಸಾರ್ವಭೌಮತ್ವ, ಮತ್ತು ಸ್ವಾಭಿಮಾನದ ವಿಷಯ" ಎಂದು ಹೇಳಿದರು.
“हाफिज सईद और मसूद अजहर चाहे जहां पर भी हो उनको जिंदा या मुर्दा भारत लाना चाहिए या ओसामा बिन लादेन की तरह दफन करना चाहिए l PoK में आतंकवादी कैंपों को तुरंत ध्वस्त करें और अब पीओके का भारत में विलय करना चाहिए” - @yogrishiramdev on @ANI pic.twitter.com/4i3XHkqYtV
— Swami Ramdev (@yogrishiramdev) February 15, 2019
ಈ ಉಗ್ರರ ದಾಳಿಯನ್ನು ದೇಶದ ಐಕ್ಯತೆಯನ್ನು ಒಡೆಯುವ ಕೃತ್ಯ ಎಂದು ವಾಖ್ಯಾನಿಸಿದ ರಾಮದೇವ್ " ಭಾರತವು ಯಾವೋಬ್ಬ ಭಯೋತ್ಪಾದಕನನ್ನು ಕೂಡ ಬಿಡಬಾರದು ಅದರಲ್ಲೂ ಹಫೀಜ್ ಸಯಿದ್ ಮತ್ತು ಅಜರ್ ಮಸೂದ್ ರನ್ನು ಮೊದಲು ಬಿಡಬಾರದು. ಅವರನ್ನು ಜೀವಂತವಾಗಲಿ ಅಥವಾ ಹೆಣವಾಗಿಯಾದರೂ ಆಗಲಿ ಅವರನ್ನು ಹಿಡಿದು ಭಾರತಕ್ಕೆ ತರಬೇಕು ಎಂದು ಆಗ್ರಹಿಸಿದರು.